ಆ ಊರಿನಲ್ಲಿ ಒಂದು ದೊಡ್ಡ ದೇವಾಲಯವಿತ್ತು.ಪ್ರತಿದಿನ ಬೆಳಗ್ಗೆಯಿಂದಲೇ ಜನರ ಸಾಲು. ಯಾರೋ ಹೂವು ತರುತ್ತಿದ್ದರು. ಯಾರೋ ಹಣ್ಣು ತರುತ್ತಿದ್ದರು. ಯಾರೋ ಹಾಲು, ತುಪ್ಪ, ನೈವೇದ್ಯ ತರುತ್ತಿದ್ದರು.ದೇವರಿಗೆ ಇದನ್ನು ಅರ್ಪಿಸಿದರೆ ನನ್ನ ಕಷ್ಟ ಪರಿಹಾರವಾಗುತ್ತದೆ...”ದೇವರ ಆಶೀರ್ವಾದ ಸಿಕ್ಕರೆ ನನ್ನ ಮನೆ ಸುಖವಾಗುತ್ತದೆ...”ಎಂದು ಪ್ರತಿಯೊಬ್ಬರೂ ಗರ್ಭಗುಡಿಯೊಳಗೆ ಹೋಗಿ ದೇವರ ಮುಂದೆ ತಮ್ಮ ಕಾಣಿಕೆ ಇಟ್ಟು ಬರುತ್ತಿದ್ದರು.ಆದರೆ ದೇವಾಲಯದ ಹೊರಗೆ... ಊರಿನ ಕೊನೆಯ ಭಾಗದಲ್ಲಿ ಕೆಲವು ಬಡ ಕುಟುಂಬಗಳು ವಾಸಿಸುತ್ತಿದ್ದವು. ಒಬ್ಬ ವೃದ್ಧೆ ಮೂರು ದಿನಗಳಿಂದ ಊಟ ಮಾಡಿರಲಿಲ್ಲ. ಪುಟ್ಟ ಮಗುವೊಂದು  ಹಸಿವಿನಿಂದ ಅಳುತ್ತಿತ್ತು. ವೃದ್ಧನಿಗೆ ಔಷಧಿ ಖರೀದಿಸಲು ಹಣವಿರಲಿಲ್ಲ.

ಜನರು ದೇವಾಲಯದ ಒಳಗೆ ಹೋಗುವಾಗ ಅವರನ್ನು ನೋಡುತ್ತಿದ್ದರು. ಆದರೆ ಯಾರೂ ನಿಲ್ಲುತ್ತಿರಲಿಲ್ಲ. ಭಗವಂತ ಜನರ ಈ ಭಾವವನ್ನು ನೋಡಿ ನೋಡಿ ಭಗವಂತನಿಗೆ ಗರ್ಭಗುಡಿಗಿಂತ ಹೊರಗೆ ಬಂದು ಜನರ ನಡುವೆ ಬದುಕುವುದಕ್ಕೆ ಆರಂಭಿಸಿಬಿಟ್ಟ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ