ಅರವಿಂದನಿಗೆ ಒಂದೇ ಆಸೆ - ಎಲ್ಲರೂ ತನ್ನನ್ನು ಮೆಚ್ಚಬೇಕು, ತನ್ನ ಮಾತನ್ನು ಕೇಳಬೇಕು, ತನ್ನನ್ನು ಗೆದ್ದವನು ಎಂದು ಒಪ್ಪಿಕೊಳ್ಳಬೇಕು ಅಂತ ಅದಕ್ಕಾಗಿ ಅವನು ಪ್ರತಿಯೊಂದು ಸ್ಪರ್ಧೆಯಲ್ಲೂ ಗೆಲ್ಲಲು ಪ್ರಯತ್ನಿಸುತ್ತಿದ್ದ. ಯಾರಾದರೂ ತನಗಿಂತ ಮುಂದೆ ಹೋದರೆ ಅವನಿಗೆ ಅಸೂಯೆ ಯಾರಾದರೂ ತನ್ನನ್ನು ಟೀಕಿಸಿದರೆ ಕೋಪ. ಯಾರಾದರೂ ಅವನ ಮಾತನ್ನು ಒಪ್ಪದಿದ್ದರೆ ಅವರೊಂದಿಗೆ ಜಗಳ. ಏನೇ ಮಾಡಿದರೂ ಗೆಲುವು ಸಿಗಲಿಲ್ಲ. ಹಾಗಾಗಿ ತಾತನ‌ ಬಳಿ ಕುಳಿತು ಮಾತಾಡಿದ “ತಾತ, ನಾನು ಎಲ್ಲರನ್ನೂ ಗೆಲ್ಲಬೇಕು. ಅದಕ್ಕೆ ಏನು ಮಾಡಬೇಕು?” 

ಅವರು ನಗುತ್ತಾ ಹೇಳಿದರು: “ಮೊದಲು ನಿನ್ನನ್ನೇ ಗೆಲ್ಲು.”

ಅದು ಹೇಗೆ?” ನಿನ್ನ ಕೋಪವನ್ನು ನೀನು ಗೆಲ್ಲಬಲ್ಲೆಯಾ? ಅಸೂಯೆಯನ್ನು ನೀನು ಗೆಲ್ಲಬಲ್ಲೆಯಾ? ನಿನ್ನ ಅಹಂಕಾರವನ್ನು ನೀನು ಗೆಲ್ಲಬಲ್ಲೆಯಾ?ಸೋತಾಗ ಕುಗ್ಗದೆ, ಗೆದ್ದಾಗ ಹಿಗ್ಗದೆ ಇರಬಲ್ಲೆಯಾ?”

ಅರವಿಂದ ಮೌನವಾದ. ಅಂದಿನಿಂದ ಕೋಪ ಬಂದಾಗ ಮೌನವಾಗುವುದನ್ನು ಕಲಿತ. ಇತರರು ಗೆದ್ದಾಗ ಅವರನ್ನು ಅಭಿನಂದಿಸುವುದನ್ನು ಕಲಿತ. ತಪ್ಪಾದಾಗ ಕ್ಷಮೆ ಕೇಳುವುದನ್ನು ಕಲಿತ.ಸೋತಾಗ ಮತ್ತೆ ಪ್ರಯತ್ನಿಸುವುದನ್ನು ಕಲಿತ. ಅಂದಿನಿಂದ ಗೆಲುವಿನ‌ಕಡೆಗೆ ಹೆಜ್ಜೆ ಇಟ್ಟ ಗೆಲುವು ಸಿಕ್ಕಿತು ಅಂದು ಅರ್ಥವಾಯಿತು ಜನ‌ ಗೆಲ್ಲುವುದಕ್ಕಿಂತ, ಮನ ಗೆಲ್ಲುವುದು ಮುಖ್ಯ ಅಂತ

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ