ಎರಡು ಕಪ್ ನೀರಿಗೆ ಅರ್ಧ ಚಮಚ ಎಣ್ಣೆ, ಜೀರಿಗೆ, ಸ್ವೀಟ್ ಕಾರ್ನ್, ಸಬ್ಬಸಿಗೆ ಸೊಪ್ಪು, ಉಪ್ಪು ಹಾಕಿ ಕುದಿಯಲು ಇಡಿ. ನೀರು ಕುದಿಯುವಾಗ, ಉರಿ ಆರಿಸಿ, ಅಕ್ಕಿಹಿಟ್ಟು ಹಾಕಿ ಗಂಟಿಲ್ಲದಂತೆ ಚೆನ್ನಾಗಿ ಕಲಸಿಕೊಳ್ಳಿ. ಹತ್ತು ನಿಮಿಷ ಮುಚ್ಚಳ ಮುಚ್ಚಿ ಆರಲು ಬಿಡಿ. ನಂತರ ಬಟ‌ರ್ ಪೇಪ‌ರ್ ಮೇಲೆ ರೊಟ್ಟಿ ತಟ್ಟಿ, ಕಾದ ಕಾವಲಿ ಮೇಲೆ ಹಾಕಿ ಎಣ್ಣೆ ಸವರಿ, ಮಧ್ಯಮ ಉರಿಯಲ್ಲಿ ಎರಡೂ ಕಡೆ ಬೇಯಿಸಿ.

-ರಾಜೇಶ್ವರಿ ಕೆ ವಿ.