ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಅನುವಾದ

ಅನುವಾದ

೨೮೯ ಲೇಖನಗಳು

ಕೋರಿಕೆ

ಹಂಸಾನಂದಿ ಜುಲೈ ೧೪ ಬ್ಲಾಗ್ ೮೬ ವೀಕ್ಷಣೆಗಳು

ಮರು ಜನುಮದಲೂ ನಿನ್ನ ಕಾಲಿಗೆ ಬಿದ್ದೇನು! ಓ ಮದನ! ನನ್ನ ಮೇಲೆ ನೀ ಬಿಟ್ಟ ಬಾಣಗಳಲೇ  ಅವನನೂ ಹೊಡೆದು ಗಾಸಿಗೊಳಿಸುವೆಯಾ?    ಪ್ರಾಕೃತ ಮೂಲ  (ಹಾಲನ ಗಾಹಾಸತ್ತಸಯಿ, ೫-೪೧)  ಜಮ್ಮಂತರೇ ವಿ ಚಲಣಂ ಜೀಏಣ ಖು ಮ‍ಅಣ...

ಸಾಟಿ

ಹಂಸಾನಂದಿ ಜುಲೈ ೧೦ ಬ್ಲಾಗ್ ೧೪೩ ವೀಕ್ಷಣೆಗಳು

ತುಂಬಿದ್ದರೇನಂತೆ ಜಗದಲ್ಲಿ ಚೆಲುವೆಯರು  ಸಾವಿರದ ಲೆಕ್ಕದಲ್ಲಿ ? ಇವಳ ಬಲಬದಿಯಂದಕ್ಕೆ ಇರುವುದೊಂದೇ ಸಾಟಿ    ಇವಳೆಡದ ಅರ್ಧದಲ್ಲಿ!     ಪ್ರಾಕೃತಮೂಲ (ಹಾಲನ ಗಾಹಾ ಸತ್ತಸಯಿಯಿಂದ, ಪದ್ಯ ೪೦೩)  ಏದ್ದಹಮೇತ್ತಮ್ಮಿ ಜ...

ತೀರದ ಬಯಕೆ

ಹಂಸಾನಂದಿ ಮೇ ೦೯ ಬ್ಲಾಗ್ ೯೮ ವೀಕ್ಷಣೆಗಳು

ಯಾವುದೋ ಹುಸಿಮುನಿಸಿನಲಿ ನಾ ಸುಮ್ಮನೇ ಹೋಗೆನ್ನಲು     ಕಲ್ಲು ಮನದಾ ನಲ್ಲ ತಟ್ಟನೆ ಸಜ್ಜೆ ಯಿಂದಲಿ ಎದ್ದು ತಾ ಭರದಿ ಪ್ರೇಮವ ಗೆಳತಿ ಹೇವದಿ ಮುರಿಯುತಲಿ ದೂರಾದರೂ  ನಾಚದೀ ಮನವವನೆಡೆಗೆ ಹೋಗುವುದಕೇನನು ಮಾಡಲೇ?   ಸಂ...

ಮಹದಾನಂದ

ಹಂಸಾನಂದಿ ಮೇ ೦೩ ಬ್ಲಾಗ್ ೧೦೪ ವೀಕ್ಷಣೆಗಳು

ಎರಡು ಮೂರು ವರ್ಷಗಳಿಂದ, ಶಂಕರ ಜಯಂತಿಯಂದು ಶಂಕರಾಚಾರ್ಯರ ಯಾವುದಾದರೂ ಶ್ಲೋಕವನ್ನು ಓದಿ ಅನುವಾದ ಮಾಡುತ್ತ ಬಂದಿದ್ದೇನೆ. ಹಾಗಾಗಿ, ಈ ಸಲವೂ ಶಂಕರ ಜಯಂತಿಯಂದು ಒಂದು ಪ್ರಯತ್ನ.  ಒಂದೇ ಪದ್ಯವನ್ನೇ ಎರಡು ರೀತಿಯಲ್ಲಿ  (ಒಂದ...

ನೋಟ

ಹಂಸಾನಂದಿ ಏಪ್ರಿಲ್ ೧೦ ಬ್ಲಾಗ್ ೧೪೭ ವೀಕ್ಷಣೆಗಳು

ಬಳಲಿ ಸೊರಗುತ ಒಲವ ಪಸೆಯಲಿ ಅರಳಿ ಮುಚ್ಚುವ ಮೊಗ್ಗಿನಂ- ತೊಮ್ಮೆ ನೋಡುತ ಮತ್ತೆ ನಾಚುತ ಬದಿಗೆ ಹೊರಳಿಸಿ ದಿಟ್ಟಿಯ  ಎದೆಯೊಳಿರುತಿಹ ಒಲವಿನೊಸಗೆಯ ನೋಟದಲೆ ಹೊರಸೂಸುತ ಹೇಳೆ  ಮುಗುದೆಯೆ ಯಾವ ಚೆಲುವನ ನಿನ್ನ ಕಂಗಳು ಕಂಡವೇ...

ಬುದ್ಧನ ದಾರಿ

ಹಂಸಾನಂದಿ ಮಾರ್ಚ್ ೧೨ ಬ್ಲಾಗ್ ೧೪೧ ವೀಕ್ಷಣೆಗಳು

ಬೊಮ್ಮ ಹೊಂಬಣ್ಣದಲಿ ಕಂಗೊಳಿಸುವೀ ಚೆಲುವ ಮೊಗವ ನೋಡಿರೆ  ಚಣವು ಬಿಡುತಿದ್ದನೇ? ಕಣ್ಣನ್ನು ತೆರೆಯದೆಲೆ ಈ ರೂಪ ನೋಡದೆಯೆ  ಸೃಷ್ಟಿಸಿದನೆಂದರದ  ನಂಬಬಹುದೇ?   ಅದಕೇ ಹೇಳುವೆ ಕೇಳು ಈ ನಿಖಿಳ ಜಗವನ್ನು  ಸೃಷ್ಟಿಸುವನೊಬ...

ಚತುರೆಯ ಮುನಿಸು

ಹಂಸಾನಂದಿ ಮಾರ್ಚ್ ೦೬ ಬ್ಲಾಗ್ ೧೧೯ ವೀಕ್ಷಣೆಗಳು

ನಲ್ಲ ಬಂದುದ ನೋಡಿ ನಿಂತು ಸ್ವಾಗತಿಸುತ್ತ ಪಕ್ಕದಲಿ ಕೂರುವುದ ತಪ್ಪಿಸಿದಳು ; ತಾಂಬೂಲವನು ಕೊಡುವ ನೆವದಿಂದ ಒಳಹೋಗಿ ಅಪ್ಪುಗೆಗೆ ಅಡ್ಡಿಯನು ತಂದಿಟ್ಟಳು ; ಜೊತೆಯ ಪರಿಜನರೊಡನೆ ತೊಡಗುತ್ತ ಸೋಗಿನಲಿ ಅವನ ಮಾತಿಗೆ ತಾನು  ಸಿಗ...

‘ನಂಜುಂಡ’ವನಿಗೊಂದು ಪ್ರಶ್ನೆ

ಹಂಸಾನಂದಿ ಫೆಬ್ರ ೨೬ ಬ್ಲಾಗ್ ೧೨೬ ವೀಕ್ಷಣೆಗಳು

ದೇವತೆಗಳೆಲ್ಲರಿಗು ಮೈನಡುಗು ತರಿಸಿದ್ದ  ಉರಿನಂಜ ನೀನದೆಂತು ಕಂಡೆಯೋ?  ಕೈಯಲ್ಲಿ ಹಿಡಿದೆಯೋ  ಮಾಗಿದ್ದ ನೇರಳೆಯ ಹಣ್ಣೆನುತ್ತ ? ನಾಲಿಗೆಯ ಮೇಲಿಟ್ಟು  ನುಂಗಿದೆಯೊ  ಔಷಧಿಯ  ಗುಳಿಗೆಯಿರಬಹುದೆನ್ನುತ?   ನೀಲಮಣಿಯಾಭರಣ ಸೊಗಸ...

ನೈಜ ಸ್ಪಂದನ

ಹಂಸಾನಂದಿ ಫೆಬ್ರ ೨೪ ಬ್ಲಾಗ್ ೧೬೬ ವೀಕ್ಷಣೆಗಳು

ಅವನ ಕಂಡಾಗಲೇ ಕೈಗಳಲಿ ಕಣ್ಣುಗಳ ಕೂಡಲೆಯೆ ಮುಚ್ಚಿಕೊಂಡೆ ಅರಳಿದ ಕದಂಬಹೂವಂತೆ ಮೈ ನವಿರೇಳೆ ಹೇಳೆ ಹೇಗದ ಮುಚ್ಚಲೆ? ಸಂಸ್ಕೃತ (ಮಂಜುನಾಥ ಕವಿಯ ಗಾಥಾ ಸಪ್ತಶತಿ - 4-14): ಅಕ್ಷಿಣೀ ತಾವತ್ಸ್ಥಗಯಿಷ್ಯಾಮಿ ದ್ವಾಭ್ಯಾಮಪಿ ಹಸ...

ನಿರಾಕರಣ

ಹಂಸಾನಂದಿ ಫೆಬ್ರ ೧೩ ಬ್ಲಾಗ್ ೧೧೫ ವೀಕ್ಷಣೆಗಳು

ಅವನೆದುರು ಕಂಡಿರಲು ಮೊಗವನ್ನು ಬಾಗಿಸುತ ನೋಟವನು ಕೆಳಗೆ ನೆಟ್ಟೆ ಅವನ ಮಾತುಗಳನ್ನು ಕೇಳಬಯಸಿದ ಕಿವಿಗಳನ್ನು ನಾ ತಡೆದುಬಿಟ್ಟೆ ಬೆವರ ಸಾಲನು ಹೊತ್ತು ಗಲ್ಲ ನವಿರೇಳುವುದನಂಗೈಲೆ ಮರೆಮಾಚಿದೆ ರವಿಕೆಯೊಂದಂದಂಚು ಸೀಳುತಿರುವನು...

ಹಂಬಲ

ಹಂಸಾನಂದಿ ಜನ ೨೧ ಬ್ಲಾಗ್ ೧೧೮ ವೀಕ್ಷಣೆಗಳು

ದಣಿವಿರದ ಚೆಲುನಗೆಯ ಕಡುಕೆಂಪಿನಾ ತುಟಿಯ ಮನಗೆಲುವ ಹಿಗ್ಗಪೆರ್ಚಿಪ ತಂಪುಗೊಳಲ ಅರೆತೆರೆದ ಸೊಗದ ಕಣ್ಣತ್ತಿತ್ತ ಹರಿಯುತಿಹ ಮುಗುದ ಮೊಗದಾವರೆಯ ನಾಕಾಂಬೆನೆಂದು? ಸಂಸ್ಕೃತ ಮೂಲ (ಬಿಲ್ವ ಮಂಗಳ ಲೀಲಾ ಶುಕನ ಕೃಷ್ಣ ಕರ್ಣಾಮೃತದ...

ತೆಲಿಯಲೇರು ರಾಮ ಭಕ್ತಿ ಮಾರ್ಗಮುನು

ಹಂಸಾನಂದಿ ಜನ ೨೦ ಬ್ಲಾಗ್ ೧೪೪ ವೀಕ್ಷಣೆಗಳು

ಇಂದು ಪುಷ್ಯ ಬಹುಳ ಪಂಚಮಿ. 1847ರಲ್ಲಿ ತ್ಯಾಗರಾಜರು ಸಮಾಧಿ ಹೊಂದಿದ ದಿನ.   ಈ ಮೊದಲೂ ತ್ಯಾಗರಾಜರ ಆರಾಧನೆಯ ಸಮಯದಲ್ಲಿ , ಕೆಲವು ಕೃತಿಗಳನ್ನು ಕನ್ನಡಕ್ಕೆ ತಂದಿದ್ದೆ. ಇವತ್ತು ಅದಕ್ಕಾಗೇ ನಾನು ಆಯ್ದುಕೊಂಡಿದ್ದು 'ತೆಲ...

ಕಾಲನ ದಾಳ

ಹಂಸಾನಂದಿ ಜನ ೧೪ ಬ್ಲಾಗ್ ೧೦೦ ವೀಕ್ಷಣೆಗಳು

ಹಲಜನರು ತಂಗಿರುತ್ತಿದ್ದ ಮನೆಯೊಳಗೀಗಲೊಬ್ಬಂಟಿ ನಿಂತನೋರ್ವ ಒಬ್ಬರೋ ಹಲವರೋ ಮೊದಲಿದ್ದ ಕಡೆಯಲ್ಲಿ ಕೊನೆಯಲಾರೂ ಕಾಣರು ದಿನರಾತ್ರಿಯೆಂಬೆರಡು ದಾಳಗಳನುರುಳಿಸುತ ಎಡೆಬಿಡದೆ ಕಾಲಪುರುಷ ಪಗಡೆಯನ್ನಾಡಿಹನು ಬುವಿಯ ಹಾಸನು ಹೂಡಿ ಜ...

ತಿಳಿಯದವಳು

ಹಂಸಾನಂದಿ ಜನ ೦೯ ಬ್ಲಾಗ್ ೧೧೨ ವೀಕ್ಷಣೆಗಳು

ನಲ್ಲ ಬಳಿಬಂದು  ನುಡಿಯೆ ಸವಿಮಾತುಗಳ ಮೈಯೆಲ್ಲ ಕಿವಿಯಾಯ್ತೊ ಕಣ್ಣಾಯ್ತೊ ಎಂಬುದನು ನಾನರಿಯೆ!  ಸಂಸ್ಕೃತ ಮೂಲ (ಅಮರುಕನ ಅಮರು ಶತಕದಿಂದ, ಪದ್ಯ 64 ) : ನ ಜಾನೇ ಸಮ್ಮುಖಾಯಾತೇ ಪ್ರಿಯಾಣಿ ವದತಿ ಪ್ರಿಯೇ ಪ್ರಯಾಂತಿ ಮಮ ಗ...

ಎಲ್ಲೆಲ್ಲಿ ನೋಡಲಿ ...

ಹಂಸಾನಂದಿ ಡಿಸೆಂ ೧೮ ಬ್ಲಾಗ್ ೧೦೧ ವೀಕ್ಷಣೆಗಳು

ಮಾಳಿಗೆಯ ಮೇಲವಳು ದಿಕ್ಕುದಿಕ್ಕಲ್ಲವಳು ಹಿಂದುಮುಂದೆಲ್ಲಕಡೆ ಅವಳು ಮಂಚದಾ ಮೇಲವಳು ಹಾದಿಹಾದಿಯಲವಳು ಅವಳಿಂದದೂರವಿರಲಾಗಿ  ಹಾಳು ಮನಸಿದಕೇನು ತಿಳಿದೀತು ಅವಳ ಬಿಟ್ಟೇನೊಂದು ಕಾಣದೇನೇ ಅವಳೆ ಅವಳೇ ಅವಳೆ ಅವಳೆ ಜಗವೆಲ್ಲವಿರೆ...

ಅವಳ ಅಂತರಂಗ

ಹಂಸಾನಂದಿ ಡಿಸೆಂ ೦೫ ಬ್ಲಾಗ್ ೧೨೪ ವೀಕ್ಷಣೆಗಳು

ಹುಬ್ಬು ಗಂಟಿಕ್ಕಿದ್ದಾಯಿತು ಬಹುಕಾಲ ಕಣ್ಮುಚ್ಚಿರುವುದನು ರೂಢಿಸಿದ್ದಾಯ್ತು ಜೊತೆಗೆ ಅಳುವುದ ಚೆನ್ನಾಗಿ ಕಲಿಸಿದ್ದಾಯಿತು ನಗುವನೊತ್ತಾಯದಲಿ ಮೌನದಲಿ ನಿಲಿಸಾಯ್ತು ಮನಸ ಹೇಗೋ ಗಟ್ಟಿ ಮಾಡುತ್ತ ಕಡುದಿಟ್ಟತನದಲಿ ಕಟ್ಟಿರಿಸ...

ಹೊರಳು ನೋಟ

ಹಂಸಾನಂದಿ ನವೆಂ ೨೫ ಬ್ಲಾಗ್ ೯೩ ವೀಕ್ಷಣೆಗಳು

ಕಣ್ಣು ತೋರುವವರೆಗು ನಲ್ಲನಾ ಹಾದಿಯನೆ ಕಾಯ್ತು ಬೇಸತ್ತಾಗಲೆ ದಾರಿಗರ ಸಪ್ಪಳವು ನಿಲ್ಲುತಿರೆ ಹೊರಗೆಲ್ಲ ಹಬ್ಬುತಿರೆ ಕಾರ್ಗತ್ತಲೆ ಹೆಣ್ಣಿವಳು ಮನೆಯೆಡೆಗೆ ತಿರುಗುತ್ತ ಹಾಕಿರಲು ಹೆಜ್ಜೆಯೊಂದನ್ನಾಕಡೆ ಕೂಡಲೆಯೆ ಬಂದನೇನೋಯೆನ...

ಒಲವೆಂಬ ಉರಿ

ಹಂಸಾನಂದಿ ನವೆಂ ೨೧ ಬ್ಲಾಗ್ ೧೦೨ ವೀಕ್ಷಣೆಗಳು

ಅವನಲ್ಲಿ ನನ್ನೊಲುಮೆ ಜನಕೆ ತಿಳಿದೀತೆಂದು ಗೆಳತಿಯರನೂ ಇಂದು ನಂಬಲೊಲ್ಲೆ ಅವನತ್ತ ಒಂದೊಳ್ಳೆ ನೋಟ ಬೀರುವುದನೂ ಈ ಬಗೆಯು ತಡೆದಿಹುದು ಲಜ್ಜೆಯಲ್ಲೆ ಮನದೊಳಗಿನಿನಿತಷ್ಟು ಸುಳಿವು ಸಿಕ್ಕರೆ ಲೋಕ ನಿಪುಣವದು ಚುಚ್ಚಲಿಕೆ ಮಾತುಗಳ...

ಕಸ್ತೂರೀ ತಿಲಕಂ ...

ಹಂಸಾನಂದಿ ಆಗಸ್ಟ್ ೨೮ ಬ್ಲಾಗ್ ೧೭೩ ವೀಕ್ಷಣೆಗಳು

ಹಣೆಯಲ್ಲಿ ಸೊಗಯಿಸುವ ಪುನುಗುಕತ್ತುರಿ ತಿಲಕ ಎಣೆಯಿರದ ಕೌಸ್ತುಭವು ಅವನೆದೆಯಲಿ ಕುಣಿಯುತಿರೆ ಮೂಗಿನಲಿ ಮುತ್ತಿನಾ ನತ್ತು ಕಂ ಕಣದ ಕೈಯಲ್ಲಿ ಮೆರೆವ  ಕೊಳಲು! ನರುಗಂಪು ಬೀರುತಿರಲವನು ಪೂಸಿದ ಗಂಧ ಕೊರಳಲೋಲಾಡಿ ಮೆರೆಯುತಿರೆ...

ಕೊರಗು

ಹಂಸಾನಂದಿ ಆಗಸ್ಟ್ ೨೬ ಬ್ಲಾಗ್ ೬೮ ವೀಕ್ಷಣೆಗಳು

“ಇದು ಕಪ್ಪು” “ಕಪ್ಪು, ಹೌದು ” “ಮೈ ಬಿಳುಪಲ್ಲವೇ?” “ಅಲ್ಲದೇ ಏನು!” “ಹೋಗೋಣ ನಡೆ ” “ನಡೆ ಮತ್ತೆ ” “ಈ ದಾರಿಯಲ್ಲಿ” “ಇದುವೆ ದಾರಿ!”   ಗೆಳತಿ! ಮೂರು ಹೊತ್ತೂ ಬಿಡದೆ ಹಿಂದಿರುತಿದ್ದ ನಲ್ಲ ಬೇರೆಯವನಾಗಿಯೇ ಹೋದ...