ಅಂತರಂಗ ಯಾನ
ಲೇಖಕರು: ಡಾ. ಸುಮತಿ ಪಿ.
₹110.00
₹120.00
8% ರಿಯಾಯಿತಿ
ಲಭ್ಯವಿದೆ
₹೧೦ ಉಳಿತಾಯ (8% ರಿಯಾಯಿತಿ)
ಪುಸ್ತಕದ ಬಗ್ಗೆ
"ಅಂತರಂಗ ಯಾನ" ಎಂಬ ಈ ಲೇಖನಮಾಲೆ ಡಾ. ಸುಮತಿಯವರ ಏಳನೇ ಕೃತಿ. ಕವನ, ಚುಟುಕು, ಗಝಲ್, ಸಣ್ಣಕಥೆ ಇತ್ಯಾದಿ ಪ್ರಕಾರಗಳಲ್ಲಿ ಕೈಯಾಡಿಸಿರುವ ಸುಮತಿಯವರು ಒಬ್ಬ ಭರವಸೆಯ ಬರಹಗಾರ್ತಿಯಾಗಿ ಮೂಡಿ ಬರುತ್ತಿದ್ದಾರೆ. ಈ ಲೇಖನಮಾಲೆಯಲ್ಲಿ ಮೂವತ್ತೆರಡು ವಿಷಯಗಳ ಕುರಿತು ಚಿಕ್ಕದಾಗಿ, ಚೊಕ್ಕವಾಗಿ ತಮ್ಮ ಭಾವಾಂತರಂಗವನ್ನು ತೆರೆದಿಟ್ಟಿದ್ದಾರೆ. ವೈವಿಧ್ಯಮಯ ವಸ್ತುಗಳನ್ನು ಎತ್ತಿಕೊಂಡು, ಅವೊಂದೊಂದನ್ನೂ ತನ್ನ ವಿಚಾರಗಳ ಮೂಸೆಗೆ ಒಡ್ಡುತ್ತಾ, ವಿಶ್ಲೇಷಿಸುತ್ತಾರೆ. ಓರ್ವ ಜವಾಬ್ದಾರಿಯುತ ಉಪನ್ಯಾಸಕಿಯಾಗಿರುವುದರಿಂದಲೋ ಏನೋ, ಯುವಜನರ ಭಾವಪಲ್ಲಟಗಳನ್ನು ಅರ್ಥೈಸಿಕೊಂಡು, ಅವರಿಗೆ ಕಿವಿಮಾತು ಹೇಳುತ್ತಾರೆ. ಶಿಥಿಲವಾಗುತ್ತಿರುವ ಮಾನವೀಯ ಮೌಲ್ಯಗಳಿಗೆ ಮಿಡಿಯುತ್ತಲೇ, ಆತ್ಮಸ್ಥೆರ್ಯ, ಸ್ವಾತಂತ್ರ್ಯ, ಪ್ರೀತಿ, ಸ್ನೇಹ ಇತ್ಯಾದಿಗಳನ್ನು ಎತ್ತಿ ಹಿಡಿಯುತ್ತಾರೆ. ಉದಾಹರಣೆಗಳ ಸಹಿತ ತಾವು ಮಂಡಿಸುವ ವಿಚಾರಗಳನ್ನು ಸಮರ್ಥಿಸುವ ಹಾಣ್ಯ ಮೆರೆಯುತ್ತಾರೆ. ಡಾ. ಸುಮತಿಯವರ 'ಅಂತರಂಗ ಯಾನ' ಗದ್ಯ ಲೇಖನಗಳಲ್ಲಿ ಅವರ ಹಿಡಿತವನ್ನು ತೆರೆದಿಡುತ್ತದೆ.
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ
ವಿವರ ↗
ಸುರಕ್ಷಿತ ಪಾವತಿ
ಇಡೀ ಭಾರತಕ್ಕೆ ರವಾನೆ
ಚೆಕ್ಔಟ್ನಲ್ಲಿ ಉಡುಗೊರೆ ಆಯ್ಕೆ
₹110.00
ವಿಮರ್ಶೆಗಳು
ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.