ಮುಖಪುಟ / ಪುಸ್ತಕ ಸಂಪದ / ಮಕ್ಕಳ ಮಾನಸ ಲೋಕ
ಮಕ್ಕಳ ಮಾನಸ ಲೋಕ

ಮಕ್ಕಳ ಮಾನಸ ಲೋಕ

ಲೇಖಕರು: ಡಾ. ಸುಮ ವೈ.ವಿ.

ಪ್ರಕಾಶಕರು: ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು-೫೬೦೦೦೯

₹52.00 ₹65.00 20% ರಿಯಾಯಿತಿ ಲಭ್ಯವಿದೆ
₹೧೩ ಉಳಿತಾಯ (20% ರಿಯಾಯಿತಿ)

ಪುಸ್ತಕದ ಬಗ್ಗೆ

ನಮ್ಮ ಸಮಾಧಾನ ಆಪ್ತಸಲಹಾ ಕೇಂದ್ರಕ್ಕೆ ಸಲಹೆ-ಚಿಕಿತ್ಸೆ ಮಾರ್ಗದರ್ಶನಕ್ಕಾಗಿ ಬರುವವರಲ್ಲಿ ಮಕ್ಕಳು ಮತ್ತು ಅವರ ಪಾಲಕರದು ದೊಡ್ಡ ಗುಂಪು. ಮುಗ್ಧತೆಯೇ ಮೈತಳೆದ ಚಿಕ್ಕ ಮಕ್ಕಳ ಸಮಸ್ಯೆಗಳು ಒಂದು ತೆರನಾದರೆ, ಮುಗ್ಧತೆ ತಿಳುವಳಿಕೆಯ ನಡುವೆ ತ್ರಿಶಂಕು ಸ್ಥಿತಿ ಯಲ್ಲಿರುವ ದೊಡ್ಡ ಮಕ್ಕಳ ಸಮಸ್ಯೆಗಳೇ ಇನ್ನೊಂದು ತೆರ. ಪ್ರೌಢತೆ ಇಲ್ಲದಿದ್ದರೂ, ನಾವು ಪ್ರೌಢರಾಗಿದ್ದೇವೆ ಎಂದು ಭ್ರಮಿಸುವ ಹರೆಯ ದವರ ಸಮಸ್ಯೆಗಳು ಮತ್ತೊಂದೂ ತೆರ. ಕಲಿಕೆಯ ಸಮಸ್ಯೆಯಾಗ ಬಹುದು, ವರ್ತನೆಯ ಸಮಸ್ಯೆಯಾಗಬಹುದು, ಅವಿಧೇಯತನವಾಗ ಭಾವೋದ್ವೇಗಗಳಾಗಬಹುದು, ಬಹುದು, ಮಕ್ಕಳಲ್ಲಿ ಕಂಡುಬರುವ ಅನೇಕ ದುಶ್ಚಟಗಳಾಗಬಹುದು. ಸಮಸ್ಯೆಯಾಗಬಹುದು. ಅನುವಂಶೀಯತೆ, ಮಿದುಳಿಗೆ ಹಾನಿ ಅಥವಾ ಮಿದುಳಿನ ಅಸಮರ್ಪಕ ಬೆಳವಣಿಗೆ, ತಂದೆತಾಯಿಗಳ ತಪ್ಪು, ಲಾಲನೆ ಪಾಲನೆ, ಕುಟುಂಬ ಮನೆಯ ಅಹಿತವಾತಾವರಣ, ಶಾಲೆಮ ಶಿಕ್ಷಕರು ಸಹಪಾಠಿಗಳ ದುಷ್ಟಭಾವ, ಸಮಾಜ, ಮಾಧ್ಯಮಗಳು ಇವೆಲ್ಲಾ ಒಂಟಿಯಾಗಿ ಹಾಗೂ ಸಾಮೂಹಿಕವಾಗಿ ಕಾರಣವಾಗುತ್ತವೆ. ಮಕ್ಕಳನ್ನು ದಂಡಿಸಿದರೆ ಅವರು ಬದಲಾಗುವುದಿಲ್ಲ. ಶಿಕ್ಷೆಯ ಬದಲು ಪ್ರೀತಿಯಿಂದ ಅವರನ್ನು ತಿದ್ದಬೇಕು. ಅವರ ಸಮಸ್ಯೆಗಳಿಗೆ ಕಾರಣ ಕಂಡುಹಿಡಿದು, ಪರಿಹಾರ ಸೂಚಿಸಬೇಕು. ತಮ್ಮ ಮಕ್ಕಳ ಅಸಹಕಾರ ಅಸಹಜ ವರ್ತನೆಗಳಿಂದ ಜರ್ಝರಿತರಾದ ಪಾಲಕರಿಗೆ ಸಾಂತ್ವನ ಸಮಾಧಾನ ಹೇಳಬೇಕು. ಶ್ರೀಮತಿ ಸುಮ ಅವರು ತಾವು ನೋಡಿ, ನಿಭಾಯಿಸಿದ ಪ್ರಕರಣಗಳನ್ನು ತಮ್ಮ ಸೃಜನ ಶೀಲತೆಯಿಂದ ಕಥಾರೂಪದಲ್ಲಿ ಬರೆದಿದ್ದಾರೆ.
ಸಂಖ್ಯೆ
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ ವಿವರ ↗
ಸುರಕ್ಷಿತ ಪಾವತಿ ಇಡೀ ಭಾರತಕ್ಕೆ ರವಾನೆ ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹52.00

ವಿಮರ್ಶೆಗಳು

ವಿಮರ್ಶೆ ಬರೆಯಲು ಲಾಗಿನ್ ಆಗಿ.

ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.

ನಿಮಗೆ ಇಷ್ಟವಾಗಬಹುದು

ಸಹಾಯ ಬೇಕೇ?