ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಾರ್ಯಕ್ರಮಗಳು

ಆಗಸ್ಟ್ ೨೦೨೬
೩೯ ಕಾರ್ಯಕ್ರಮಗಳು · ಇಂದು
ಭಾನು
ಸೋಮ
ಮಂಗಳ
ಬುಧ
ಗುರು
ಶುಕ್ರ
ಶನಿ

ಆಗಸ್ಟ್ ೨೦೨೬

ಆಗಸ್ಟ್
೦೧
ಶನಿವಾರ
ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣ, ಉಡುಪಿ

ಸ್ವದೇಶಿ ಖಾದ್ಯ ಮೇಳ ಹಾಗೂ ಸ್ವರ ಸಂಭ್ರಮ ಕಾರ್ಯಕ್ರಮವು ಜುಲೈ ೩೧, ಆಗಸ್ಟ್ ೧ ಹಾಗೂ ೨ ತಾರೀಖಿನಂದು ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಜರುಗಲಿದೆ.

ಆಗಸ್ಟ್
೦೧
ಶನಿವಾರ

ಹಲಸಿನ ಮೇಳ

ಮುಗಿದಿದೆ
ಆರ್ ಎನ್ ಶೆಟ್ಟಿ ಕಲ್ಯಾಣ ಮಂಟಪ, ಹುಬ್ಬಳ್ಳಿ

ಆರ್ ಎನ್ ಶೆಟ್ಟಿ ಕಲ್ಯಾಣ ಮಂಟಪ, ಹುಬ್ಬಳ್ಳಿಯಲ್ಲಿ ಜುಲೈ ೩೧ ಹಾಗೂ ಆಗಸ್ಟ್ ೧, ೨ರಂದು ಹಲಸಿನ ಮೇಳ ನಡೆಯಲಿದೆ.

ಆಗಸ್ಟ್
೦೨
ಭಾನುವಾರ
ಎಫ್ ಕೆ ಸಿ ಸಿ ಸಭಾಂಗಣ, ಬೆಂಗಳೂರು

ವಿಶ್ವವಾಣಿ ಪುಸ್ತಕ ಪ್ರಕಾಶನ ಇವರಿಂದ ಆಗಸ್ಟ್ ೨ರಂದು ಭಾನುವಾರ ಬೆಳಿಗ್ಗೆ ೧೦.೩೦ಕ್ಕೆ ಬೆಂಗಳೂರಿನ ಎಫ್ ಕೆ ಸಿ ಸಿ ಸಭಾಂಗಣದಲ್ಲಿ ಒಂಬತ್ತು ಪುಸ್ತಕಗಳು ಲೋಕಾರ್ಪಣೆಗೊಳ್ಳಲಿವೆ.

ಆಗಸ್ಟ್
೦೨
ಭಾನುವಾರ

ಸಸ್ಯಾಮೃತ

ಮುಗಿದಿದೆ
ಯಾಜ್ಞವಲ್ಕ್ಯ ಗುರುಕುಲ ವಿದ್ಯಾಸಂಸ್ಥೆ, ವಕ್ವಾಡಿ

ಆಗಸ್ಟ್ ೨ರಂದು ರವಿವಾರ ಬೆಳಿಗ್ಗೆ ೧೧ ಗಂಟೆಗೆ ಸರಿಯಾಗಿ 'ಸಸ್ಯಾಮೃತ' ಸಸ್ಯಜ್ಞಾನದಿಂದ ಆರೋಗ್ಯ ಜಾಗೃತಿ ಎನ್ನುವ ಕಾರ್ಯಕ್ರಮವು ಯಾಜ್ಞವಲ್ಕ್ಯ ಗುರುಕುಲ ವಿದ್ಯಾಸಂಸ್ಥೆ, ವಕ್ವಾಡಿಯಲ್ಲಿ ಜರುಗಲಿದೆ.

ಆಗಸ್ಟ್
೦೨
ಭಾನುವಾರ

ಸ್ನೇಹ ಸಂವಾದ

ಮುಗಿದಿದೆ
ಹರಿವು ಬುಕ್ಸ್, ಬೆಂಗಳೂರು

ಆಗಸ್ಟ್ ೨ರಂದು ಭಾನುವಾರ ಬೆಳಿಗ್ಗೆ ೧೧ ಗಂಟೆಗೆ ಬೆಂಗಳೂರಿನ ಹರಿವು ಬುಕ್ಸ್ ಕಚೇರಿಯಲ್ಲಿ ಖ್ಯಾತ ಪತ್ತೇದಾರಿ ಕಾದಂಬರಿಗಳ ಲೇಖಕ ಕೌಶಿಕ್ ಕೂಡುರಸ್ತೆ ಜೊತೆಗೆ ಓದುಗರ ನೇರ ಮಾತುಕತೆಯ ಕಾರ್ಯಕ್ರಮವು ಜರುಗಲಿದೆ.

ಆಗಸ್ಟ್
೦೨
ಭಾನುವಾರ
ರಾಷ್ಟ್ರೋತ್ಥಾನ ಯೋಗ ಮತ್ತು ಫಿಟ್ನೆಸ್ ಕೇಂದ್ರ, ಬೆಂಗಳೂರು

ಭರತನಾಟ್ಯದಲ್ಲಿ ಭಾವಾನುಭವ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಕಾರ್ಯಾಗಾರ ನಡೆಸಿಕೊಡಲಿದ್ದಾರೆ ದಿನಾಂಕ ಆಗಸ್ಟ್ ೨ರಂದು ಬೆಂಗಳೂರಿನ ಸದಾಶಿವನಗರದಲ್ಲಿರುವ ರಾಷ್ಟ್ರೋತ್ಥಾನ ಯೋಗ ಮತ್ತು ಫಿಟ್ನೆಸ್ ಕೇಂದ್ರದಲ್ಲಿ.

ಆಗಸ್ಟ್
೦೬
ಗುರುವಾರ
ಕನ್ನಡ ಸಾಹಿತ್ಯ ಭವನ, ಮೈಸೂರು

ಆಗಸ್ಟ್ ೬, ೨೦೨೬ನೇ ಗುರುವಾರ ಮೈಸೂರಿನ ಕನ್ನಡ ಸಾಹಿತ್ಯ ಭವನದಲ್ಲಿ ಮಲ್ಲಾಡಿಹಳ್ಳಿ ಶ್ರೀ ರಾಘವೇಂದ್ರ ಸ್ವಾಮೀಜಿ ಅವರ ಸಂಸ್ಮರಣೋತ್ಸವ ಹಾಗೂ ಯೋಗ ಶಿಕ್ಷಕ ಎನ್ ಅನಂತ ಬರೆದಿರುವ 'ಜೋಳಿಗೆ ಹಿಡಿದ ಜೋಗಿ' ಕೃತಿಯ ಲೋಕಾರ್ಪಣೆ...

ಆಗಸ್ಟ್
೦೮
ಶನಿವಾರ
ಶ್ರೀ ರಾಮ ದೇವಾಲಯ, ಅಮೃತಹಳ್ಳಿ ಬೆಂಗಳೂರು

ಪಂಡಿತ್ ಶೇಷಗಿರಿ ಹಾನಗಲ್ ಅವರ ಗುರುವಂದನಾ ಕಾರ್ಯಕ್ರಮವು ಆಗಸ್ಟ್ ೮ ರಂದು ಬೆಂಗಳೂರಿನಲ್ಲಿ ಬೆಳಿಗ್ಗೆ ೯ ರಿಂದ ಸಾಯಂಕಾಲ ೭ ಗಂಟೆಯ ವರೆಗೆ ನಡೆಯಲಿದೆ.

ಆಗಸ್ಟ್
೦೮
ಶನಿವಾರ

ಆಟಿ ನೆಂಪು 2026

ಮುಗಿದಿದೆ
ಶ್ರೀ ಸದಾಶಿವ ಪರಿವಾರ ಮಹಾಲಿಂಗೇಶ್ವರ ಸಭಾಭವನ, ಪಂಜ

ಆಗಸ್ಟ್ ೭ ರಿಂದ ೯ರ ತನಕ ಪಂಜದಲ್ಲಿ ಆಟಿ ನೆಂಪು ಕಾರ್ಯಕ್ರಮ ಹಾಗೂ ಸ್ವದೇಶೀ ಖಾದ್ಯ ಮೇಳ ಜರುಗಲಿದೆ.

ಆಗಸ್ಟ್
೦೯
ಭಾನುವಾರ
ಶ್ರೀ ಕೇಶವಾನಂದ ಭಾರತೀ ಸ್ಮೃತಿ ಮಂದಿರ, ಕಾಸರಗೋಡು

ಆಗಸ್ಟ್ ೯ರ ಭಾನುವಾರ ಕಾಸರಗೋಡು ಸಿರಿಬಾಗಿಲು ಪ್ರತಿಸ್ಠಾನದ ಶ್ರೀ ಕೇಶವಾನಂದ ಭಾರತೀ ಸ್ಮೃತಿ ಮಂದಿರದಲ್ಲಿ ಯಕ್ಷಗಾನ ಮಹಿಳಾ ಕಲಾವಿದರ ಸಮಾವೇಶ ಚಿಂತನ ಮಂಥನ ಕಾರ್ಯಕ್ರಮ ನಡೆಯಲಿದೆ. ಸಮಯ: ಬೆಳಿಗ್ಗೆ ೧೦.೦೦ ರಿಂದ

ಆಗಸ್ಟ್
೦೯
ಭಾನುವಾರ
ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ, ಸಂಚಯಗಿರಿ, ಬಿ ಸಿ ರೋಡ್

ಆಗಸ್ಟ್ ೯ರಂದು ಭಾನುವಾರ ಬಿ ಸಿ ರೋಡಿನ ಸಂಚಯಗಿರಿಯಲ್ಲಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದಲ್ಲಿ "ಕಣ್ಮರೆಯಾಗುತ್ತಿರುವ ತುಳುನಾಡಿನ ಆಹಾರ ಸಂಸ್ಕೃತಿ' ಎನ್ನುವ ವಿಚಾರ ಸಂಕಿರಣ ಬೆಳಿಗ್ಗೆ ೯.೩೦ ರಿಂದ ಸಂಜೆ ೫ ಗಂಟ...

ಆಗಸ್ಟ್
೦೯
ಭಾನುವಾರ

ಅಷ್ಟಾವಧಾನ

ಮುಗಿದಿದೆ
ಡಿ.ವಿ.ಜಿ. ಸಭಾಂಗಣ, ಬೆಂಗಳೂರು

ಆಗಸ್ಟ್ ೯, ೨೦೨೬ರಂದು ಬೆಂಗಳೂರಿನ ಎನ್ ಆರ್ ಕಾಲನಿಯಲ್ಲಿರುವ ಡಿ ವಿ ಜಿ ಸಭಾಂಗಣದಲ್ಲಿ ಅಷ್ಟಾವಧಾನಿ ಶ್ರೀ ಗಣೇಶ ಭಟ್ಟ ಕೊಪ್ಪಲತೋಟ ಅವರಿಂದ 'ಅಷ್ಟಾವಧಾನ' ಕಾರ್ಯಕ್ರಮ ಜರುಗಲಿದೆ.

ಆಗಸ್ಟ್
೦೯
ಭಾನುವಾರ
ಶ್ರೀ ಮಹಾವಿಷ್ಣು ದೇವಸ್ಥಾನ, ದೇಲಂತೋಟ್ಟು, ಬಜೆ

ರಾಮಾಯಣ ಮಾಸಾಚರಣೆ ಅಂಗವಾಗಿ ರಜತ ರಂಗ ಕಾರ್ಯಕ್ರಮವು ಆಗಸ್ಟ್ ೯ರಂದು ಜರುಗಲಿದೆ. ಅಂದು ಯಕ್ಷಗಾನ ತಾಳಮದ್ದಳೆ, ಸಂಸ್ಮರಣೆ ಹಾಗೂ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಆಗಸ್ಟ್
೧೧
ಮಂಗಳವಾರ
ಸರಕಾರಿ ಪ್ರೌಢ ಶಾಲೆ, ಪೈವಳಿಕೆ

ಕನಕದಾಸರ ಜೀವನ ಮತ್ತು ಸಾಹಿತ್ಯದ ಕುರಿತಾದ ಉಪನ್ಯಾಸ ಮತ್ತು ರಸಪ್ರಶ್ನೆ ಕಾರ್ಯಕ್ರಮವು ಪೈವಳಿಕೆ ಪ್ರೌಢಶಾಲೆಯಲ್ಲಿ ದಿನಾಂಕ ೧೧-೦೮-೨೦೨೬ರಂದು ಅಪರಾಹ್ನ ೨ ಗಂಟೆಗೆ ಜರುಗಲಿದೆ.

ಆಗಸ್ಟ್
೧೫
ಶನಿವಾರ
ನಾದಶ್ರೀ ಆರ್ಟ್ ಸ್ಪೇಸ್, ಬೆಂಗಳೂರು

ಪಂಡಿತ್ ಆರ್ ಟಿ ಹೆಗ್ಡೆ ಶೀಗೇಹಳ್ಳಿ ಇವರ ಸ್ಮರಣಾರ್ಥ ಹತ್ತನೇ ವರ್ಷದ ಗುರುಪೂರ್ಣಿಮ ಕಾರ್ಯಕ್ರಮ

ಆಗಸ್ಟ್
೧೬
ಭಾನುವಾರ

ಪುಸ್ತಕ ಹಬ್ಬ 2026

ಮುಗಿದಿದೆ
ಸಂಘನಿಕೇತನ, ಮಣ್ಣಗುಡ್ಡೆ, ಮಂಗಳೂರು

ಸಾಹಿತ್ಯ ಕೇಂದ್ರ ಮಂಗಳೂರು ಇವರು ಅರ್ಪಿಸುವ ಪುಸ್ತಕ ಹಬ್ಬ 2026 ಕಾರ್ಯಕ್ರಮವು ಆಗಸ್ಟ್ ೧೬ ರಿಂದ ೧೮ರ ತನಕ ಜರುಗಲಿದೆ.

ಆಗಸ್ಟ್
೧೬
ಭಾನುವಾರ
ಸಂಘನಿಕೇತನ, ಮಣ್ಣಗುಡ್ಡೆ, ಮಂಗಳೂರು

ಜ್ಞಾನಪೀಠ ಪುರಸ್ಕೃತ ವರಕವಿ ಬೇಂದ್ರೆ ಜೀವನಾಧರಿತ ನಾಟಕ ದಿನಾಂಕ ೧೬ ಆಗಸ್ಟ್, ೨೦೨೬ರಂದು ಸಂಜೆ ೫.೩೦ಕ್ಕೆ ಮಂಗಳೂರಿನ ಸಂಘನಿಕೇತನದಲ್ಲಿ.

ಆಗಸ್ಟ್
೧೬
ಭಾನುವಾರ

ಶ್ರಾವಣ ಸಂಗೀತ

ಮುಗಿದಿದೆ
ಧಾರವಾಡ

ಆಗಸ್ಟ್ ೧೬, ೨೦೨೬ ನೇ ಭಾನುವಾರ ಸಂಜೆ ೫.೩೦ಕ್ಕೆ ಸರಿಯಾಗಿ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನ, ಧಾರವಾಡ ಇಲ್ಲಿ ಶ್ರಾವಣ ಸಂಗೀತ ಕಾರ್ಯಕ್ರಮ ಜರುಗಲಿದೆ.

ಆಗಸ್ಟ್
೧೭
ಸೋಮವಾರ
ಸಂಘನಿಕೇತನ, ಮಣ್ಣಗುಡ್ಡೆ, ಮಂಗಳೂರು

ಪುಸ್ತಕ ಹಬ್ಬ ೨೦೨೬ರ ಅಂಗವಾಗಿ ಶ್ರೀ ರಾಘವ ನಂಬಿಯಾರ್ ವಿರಚಿತ 'ಶ್ರವಣ ಭಕ್ತ ಪರೀಕ್ಷಿತ' ಎನ್ನುವ ತಾಳಮದ್ದಳೆ ಕಾರ್ಯಕ್ರಮವು ಆಗಸ್ಟ್ ೧೭ರಂದು ಸಾಯಂಕಾಲ ೫ ರಿಂದ ೮ ಗಂಟೆಯ ತನಕ ಸಂಘನಿಕೇತನ, ಮಂಗಳೂರು ಇಲ್ಲಿ ಜರುಗಲಿದೆ.

ಆಗಸ್ಟ್
೨೨
ಶನಿವಾರ

ನಮ್ಮೂರ ಸಂತೆ

ಮುಗಿದಿದೆ
ಗೋರಕ್ಷನಾಥ ಹಾಲ್, ಕದ್ರಿ ಪಾರ್ಕ್, ಮಂಗಳೂರು

ಆಗಸ್ಟ್ ೨೨ ಮತ್ತು ೨೩ ರಂದು ಮಂಗಳೂರಿನ ಕದ್ರಿ ಪಾರ್ಕ್ ಬಳಿ ಇರುವ ಗೋರಕ್ಷನಾಥ ಹಾಲ್ ನಲ್ಲಿ 'ನಮ್ಮೂರ ಸಂತೆ' ನಡೆಯಲಿದೆ

ಆಗಸ್ಟ್
೨೩
ಭಾನುವಾರ
ಸಹ್ಯಾದ್ರಿ ಕಲಾ ಕಾಲೇಜು, ಶಿವಮೊಗ್ಗ

ಆಗಸ್ಟ್ ೨೩, ೨೦೨೬ರಂದು ಅಖಿಲ ಕರ್ನಾಟಕ ತೃತೀಯ ಗಜಲ್ ಸಮ್ಮೇಳನವು ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಜರುಗಲಿದೆ. ಬೆಳಿಗ್ಗೆ ೯.೩೦ ರಿಂದ ಸಾಯಂಕಾಲ ೬.೩೦ರ ತನಕ ನಡೆಯುವ ಸಮ್ಮೇಳನದಲ್ಲಿ ನಿವೃತ್ತ ಮುಖ್ಯ ಶಿಕ್ಷಕಿ, ಲೇಖಕ...

ಆಗಸ್ಟ್
೨೮
ಶುಕ್ರವಾರ
ಸಾನ್ನಿಧ್ಯ ಸಭಾಂಗಣ, ಸಂತ ಅಲೋಶಿಯಸ್ ಕಾಲೇಜು, ಮಂಗಳೂರು

ಬಲಿಪಾದ ಎನ್ನುವ ಕೃತಿಯನ್ನು ಕರಾವಳಿಯಲ್ಲಿ ಅನಾವರಣ ಮಾಡುವ ಕಾರ್ಯಕ್ರಮವು ೨೮ ಆಗಸ್ಟ್, ೨೦೨೬ರಂದು ಸಾಯಂಕಾಲ ೪.೦೦ ಗಂಟೆಗೆ ಜರುಗಲಿದೆ.

ಆಗಸ್ಟ್
೨೯
ಶನಿವಾರ
ದೇರಳಕಟ್ಟೆ, ಮಂಗಳೂರು

ಡಾ. ವಾಮನ ನಂದಾವರರ ಸಮಗ್ರ ತುಳು ಸಂಪುಟ ೩ ಮತ್ತು ೪ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮ 'ನಂದಾವರ ನೆಂಪು' ಆಗಸ್ಟ್ ೨೯, ೨೦೨೬ರಂದು ಬೆಳಿಗ್ಗೆ ೧೦ ಗಂಟೆಗೆ ತುಳು ಅಧ್ಯಯನ ಕೇಂದ್ರ, ದೇರಳಕಟ್ಟೆ, ಮಂಗಳೂರು ಇಲ್ಲಿ ಜರುಗಲಿದೆ...

ಮುಂಬರುವ ಕಾರ್ಯಕ್ರಮಗಳು