Sampada Logo

ಹರಿ ಪ್ರಸಾದ್ ನಾಡಿಗ್

೫೮ ಅರಳಿಕಟ್ಟೆಯ ಮಾತುಗಳು

ಹರಿ ಪ್ರಸಾದ್ ನಾಡಿಗ್

ಹರಿ ಪ್ರಸಾದ್ ನಾಡಿಗ್

hpn

೯ ಪೋಸ್ಟ್‌ಗಳು ೪೩ ಅನುಯಾಯಿಗಳು
ಸೇರಿದ ದಿನಾಂಕ: ಗುರುವಾರ, ಜುಲೈ ೨೬, ೨೦೦೭
ಹರಿ ಪ್ರಸಾದ್ ನಾಡಿಗ್ ಮರುಪೋಸ್ಟ್ ಮಾಡಿದ್ದಾರೆ
ಹರಿ ಪ್ರಸಾದ್ ನಾಡಿಗ್
ಕೃಷಿ ಪರಾಶರ - ನವೆಂಬರ್ ೧ ರಂದು ಪುಸ್ತಕ ಬಿಡುಗಡೆ.
೭೮
ಹರಿ ಪ್ರಸಾದ್ ನಾಡಿಗ್ ಮರುಪೋಸ್ಟ್ ಮಾಡಿದ್ದಾರೆ
ಆಕಾಶ್ ಪಾಟೀಲ್
ಇತ್ತೀಚೆಗೆ ಅಮೆರಿಕ ಅಮೆರಿಕ ೨ ಚಿತ್ರವನ್ನು ನೋಡಿದ ಮೇಲೆ ಸಹನಾ ಅವರು ಬರೆದ 'ಕ್ಷಮೆ' ಪುಸ್ತಕ ಓದಲೇಬೇಕು ಎಂದೆನಿಸಿ ಸಂಪದ ಮುಖೇನ ಪುಸ್ತಕವನ್ನು ತರಿಸಿದ್ದೇನೆ. ಓದಲು ಪ್ರಾರಂಭಿಸಬೇಕಷ್ಟೇ.
೧೧೮
೧ ಜನ ಈ ಮಾತಿನ ಬಗ್ಗೆ ಚರ್ಚಿಸಿದ್ದಾರೆ →
ಹರಿ ಪ್ರಸಾದ್ ನಾಡಿಗ್ ಮರುಪೋಸ್ಟ್ ಮಾಡಿದ್ದಾರೆ
ಕೆ.ಪಿ.ಅಶ್ವಿನ್ ರಾವ್
ಮೊನ್ನೆ ಅಟ್ಟದಲ್ಲಿ ಏನೋ ಹುಡುಕುವಾಗ ಹಳೆಯ ಎರಡು ತಾಮ್ರದ ಪಾತ್ರೆಗಳು ಸಿಕ್ಕವು. ನೋಡುವಾಗಲೇ ಬಹಳ ಹಿಂದಿನವು ಎಂದು ಗೊತ್ತಾಗುತ್ತಿತ್ತು. ಅದನ್ನು ನೋಡಿದ ಕೂಡಲೇ ಅಮ್ಮನಿಗೆ ಅದಕ್ಕೆ 'ಕಲಾಯಿ' (ಪಾಲಿಷ್) ಮಾಡಿಸುವ ಮನಸ್ಸಾಯಿತು. ಎಲ್ಲಾ ಕಡೆ ಕೇಳಿದೆವು. ಈಗ ಕಲಾಯಿ ಹಾಕುವವರೇ ಇಲ್ಲ. ದೇವಸ್ಥಾನದಲ್ಲೂ ಕೇಳಿದೆವು. ಅಲ್ಲಿಯೂ ಸ್ಟೀಲ್ ಪಾತ್ರೆಗಳದ್ದೇ ಕಾರುಬಾರು. ಕೊನೆಗೆ ಒಂದು ಪಾತ್ರೆಯ ಅಂಗಡಿಯಲ್ಲಿ ಕಲಾಯಿ ಹಾಕುವವರು ಒಬ್ಬರು ಸಿಕ್ಕರು. ಬೆಲೆ ಜಾಸ್ತಿ ಆಗುತ್ತೆ ಎಂದು ಎಚ್ಚರಿಸಿಯೇ ಬಿಟ್ಟರು. ಹಣ ಎಷ್ಟಾದರೂ ತೊಂದರೆ ಇಲ್ಲ ಕಲಾಯಿ ಹಾಕಿಸೋದೇ ಎಂದ ಬಳಿಕ ಪಾತ್ರೆ ಕೊಟ್ಟು ಬಂದಿರುವೆ. ರೆಡಿ ಆದ ಬಳಿಕ ಚಿತ್ರ ಹಾಕುವೆ
ಚಿತ್ರ
೨೩೧
೧ ಜನ ಈ ಮಾತಿನ ಬಗ್ಗೆ ಚರ್ಚಿಸಿದ್ದಾರೆ →
ಹರಿ ಪ್ರಸಾದ್ ನಾಡಿಗ್ ಮರುಪೋಸ್ಟ್ ಮಾಡಿದ್ದಾರೆ
ಹರಿ ಪ್ರಸಾದ್ ನಾಡಿಗ್
ಈ ತಿಂಗಳು ಮಾತಿಗೆ ಸಿಕ್ಕ ಹಲವಾರು ಪರಿಚಿತ ರೈತರು ಮೊದಲು ತಿಳಿಸಿದ್ದೇ ಬಿಗಡಾಯಿಸಿರುವ ನೀರಿನ ಪರಿಸ್ಥಿತಿಯ ಬಗ್ಗೆ. ಈ ವರ್ಷ ಮಳೆ ಬರಲಿಲ್ಲ, ನೀರು ಕಡಿಮೆಯಾಗಿ ಹೋಗಿದೆ. ಮಳೆ ಇಲ್ಲದ ಕಾರಣ ಬೋರ್‌ವೆಲ್‌ಗಳಲ್ಲಿ ನೀರಿನ ಮಟ್ಟ ಇಳಿದು ಹೋಗಿದೆ, ಕೆಲವೆಡೆ ನೀರು ಬರುತ್ತಲೇ ಇಲ್ಲ. ಏನು ಮಾಡುವುದು? ಬೋರ್ವೆಲ್ಲುಗಳಲ್ಲಿ ನೀರಿನ ಮಟ್ಟ ಉತ್ತಮಗೊಳಿಸಲು ಇಗೋ ಸುಲಭದ ಒಂದು ದಾರಿ - ಲಾವಂಚ ನೆಡಿ! ಕೇಂದ್ರ ಸರಕಾರ ಕಳೆದ ಹಲವು ವರ್ಷಗಳಿಂದ ಈ ಗಿಡವನ್ನು ರೈತರಿಗೆ ಉಚಿತವಾಗಿ ಹಂಚುತ್ತಲಿದೆ! ಹೆಚ್ಚಿನ ಮಾಹಿತಿ: sampada.net/s/erU
ಸಂಪದ - Sampada.net
ಸಹಜವಾಗಿ ನೀರಿಂಗಿಸಲು ಲಾವಂಚ ನೆಡಿ
ಈ ತಿಂಗಳು ಮಾತಿಗೆ ಸಿಕ್ಕ ಹಲವಾರು ಪರಿಚಿತ ರೈತರು ಮೊದಲು ತಿಳಿಸಿದ್ದೇ ಬಿಗಡಾಯಿಸಿರುವ ನೀರಿನ ಪರಿಸ್ಥಿತಿಯ ಬಗ್ಗೆ. ಈ ವರ್ಷ ಮಳೆ ಬರಲಿಲ್ಲ, ನೀರು ಕಡಿಮೆಯಾಗಿ ಹೋಗಿದೆ. ಮಳೆ ಇಲ್ಲದ ಕಾರಣ ಬೋರ್‌ವೆಲ್‌ಗಳಲ್ಲಿ ನೀರಿನ ಮಟ್ಟ ಇಳಿದು ಹೋಗಿದೆ, ಕೆಲವ...
೨೨೪
೧ ಜನ ಈ ಮಾತಿನ ಬಗ್ಗೆ ಚರ್ಚಿಸಿದ್ದಾರೆ →
ಹರಿ ಪ್ರಸಾದ್ ನಾಡಿಗ್ ಮರುಪೋಸ್ಟ್ ಮಾಡಿದ್ದಾರೆ
ಹರಿ ಪ್ರಸಾದ್ ನಾಡಿಗ್
ಹಾವಿನ ಕುರಿತು ತಿಳಿದುಕೊಳ್ಳಲು ಒಂದು ಒಳ್ಳೆಯ ಪುಸ್ತಕ: sampada.net/sb/3g ರೈತನಾಗುವುದಕ್ಕೆ ಮುಂಚೆ ನನಗೂ ಹಾವಿನ ಭಯ ಇತ್ತು. ಆದರೆ ಜಮೀನಿನಲ್ಲಿ ಹಾವುಗಳನ್ನು ಕಾಣುವುದು ಸರ್ವೇಸಾಮಾನ್ಯ ಆಗಿಹೋಗಿದೆ. ಈಗ ನಾವು ನಮ್ಮ ಪಾಡಿಗೆ, ಅವು ಅವುಗಳ ಪಾಡಿಗೆ - ಕೆಲವೊಮ್ಮೆ ನನಗೇ ಆಶ್ಚರ್ಯ ತರುತ್ತದೆ!
ಸಂಪದ - Sampada.net
ಹಾವು — ಐತಿಚಂಡ ರಮೇಶ್ ಉತ್ತಪ್ಪ
ಲೇಖಕರು: ಐತಿಚಂಡ ರಮೇಶ್ ಉತ್ತಪ್ಪ ಪ್ರಕಾಶನ : ಅಕ್ಷರ ಮಂಟಪ
೧೩೪
ಹರಿ ಪ್ರಸಾದ್ ನಾಡಿಗ್ ಮರುಪೋಸ್ಟ್ ಮಾಡಿದ್ದಾರೆ
ಹರಿ ಪ್ರಸಾದ್ ನಾಡಿಗ್ ಮರುಪೋಸ್ಟ್ ಮಾಡಿದ್ದಾರೆ
ಪ್ರಭಾಕರ ಹರ್ಲಾಪುರ
ಹರಳೆಲೆಗೆ ಶರೀರದಲ್ಲಾಗುವ ಅತಿಯಾದ ಉಷ್ಣಾಂಶವನ್ನು ಮತ್ತು ಕಾಖೆಯನ್ನು ಎಳೆದುಕೊಳ್ಳುವ (ಶಮನ ಮಾಡುವ) ಗುಣವಿದೆ. ಜ್ವರ ಬಂದಾಗ ತಲೆ ಕಾಯುವುದನ್ನು ತಪ್ಪಿಸಲು ಎಲೆಗೆ ಸ್ವಲ್ಪ ಹರಳೆಣ್ಣೆ ಹಚ್ಚಿ ತಲೆಗೆ ಕಟ್ಟುತ್ತಿದ್ದರು.
ಚಿತ್ರ
೧೧೦
ಹರಿ ಪ್ರಸಾದ್ ನಾಡಿಗ್ ಮರುಪೋಸ್ಟ್ ಮಾಡಿದ್ದಾರೆ
ಅಡ್ಡೂರು ಕೃಷ್ಣ ರಾವ್
ನಿಮಗೆ ಗೊತ್ತಿರುವ ಗಾದೆಗಳನ್ನು ಬರೆಯಲು ಶುರು ಮಾಡಿ. ಅವುಗಳ ಸಂಖ್ಯೆ ಒಂದು ನೂರು ದಾಟಿದರೆ ಅವನ್ನು ನೆನಪಿಟ್ಟುಕೊಳ್ಳಲು ನೀವು ಆಸಕ್ತಿ ವಹಿಸಿದ್ದೀರಿ ಎಂದರ್ಥ. ಗಾದೆಗಳು ನಿಮ್ಮ ಮಾತಿಗೊಂದು ತೂಕ ನೀಡುತ್ತವೆ. ಕೆಲವು ಸಂದರ್ಭಗಳಲ್ಲಿ ಹತ್ತಾರು ವಾಕ್ಯಗಳಲ್ಲಿ ಹೇಳಲಾಗದ್ದನ್ನು ಒಂದೇ ಗಾದೆಯ ಮೂಲಕ ಹೇಳಬಹುದು. ಒಂದು ಎಚ್ಚರಿಕೆ: ನಿಮ್ಮ ಸಂಭಾಷಣೆಯಲ್ಲಿ ಗಾದೆಗಳನ್ನು ಬಳಸುವ ಮುನ್ನ ಅವುಗಳ ಅರ್ಥ ತಿಳಿದುಕೊಳ್ಳಿ. ಇಲ್ಲದಿದ್ದರೆ ಆಭಾಸವಾದೀತು. ಗಾದೆಗಳ ಪುಟ್ಟ ಪುಸ್ತಕ ನಿಮ್ಮ ಮನೆಯಲ್ಲಿರಲಿ. ಲಹರಿ ಬಂದಾಗ ಅದನ್ನು ಓದುತ್ತಿದ್ದರೆ ಬಳಕೆಗೆ ಸಹಾಯ.
೧೨೮
ಹರಿ ಪ್ರಸಾದ್ ನಾಡಿಗ್ ಮರುಪೋಸ್ಟ್ ಮಾಡಿದ್ದಾರೆ
ಪ್ರಶಾಂತ
ಬೆಟ್ಟ ಏರಿದಷ್ಟೂ ಊರು ಚಿಕ್ಕದಾಗುತ್ತದೆ, ಮನಸ್ಸು ದೊಡ್ಡದಾಗುತ್ತದೆ.
ಚಿತ್ರ
೧೩೯