ಉದಯೋನ್ಮುಖ ಯುವ ಲೇಖಕಿ ಡಯಾನ ಡಿಸೋಜ ಅವರ ಚೊಚ್ಚಲ ಕೃತಿ ‘ಅಂತರಂಗದ ಗುಟ್ಟು’. ಈ ಕೃತಿಯು ಮಹಿಳೆಯರ ಬದುಕಿನ ವಿವಿಧ ಆಯಾಮಗಳ ಕುರಿತು ಮಾಹಿತಿ ನೀಡುತ್ತದೆ. ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಪತ್ರಕರ್ತರಾದ ನಾಗರಾಜ ಹೆತ್ತೂರು. ಅವರ ಮುನ್ನುಡಿಯ ಆಯ್ದ ಭಾಗಗಳು…
“ಸಹನೆಯ ಪ್ರತಿರೂಪವೇ ಹೆಣ್ಣು ಎಂಬ ಈ ಸಂಕಲನ ಕೇವಲ ಲೇಖನಗಳ ಸರಮಾಲೆಯಲ್ಲ, ಇದು ಸ್ತ್ರೀಯ ಬದುಕಿನ ನಿಜವಾದ ಸ್ಪಂದನಗಳನ್ನು ಒಳಗೊಂಡ ಸಂವೇದನಾತ್ಮಕ ಹಸ್ತಪ್ರತಿ. ಕುಮಾರಿ ಡಯಾನ ಡಿಸೋಜ ಅವರ ಈ ಮೊದಲ ಸಂಕಲನದಲ್ಲಿ ತಾಯಿತನದಿಂದ ಪ್ರೇಮ-ಸ್ನೇಹದ ನಂಟುಗಳವರೆಗೆ, ಸಮಾಜದ ವಿರೋಧಾಭಾಸಗಳಿಂದ ವೈಯಕ್ತಿಕ ಮನೋಭಾವಗಳವರೆಗೆ, ಸ್ತ್ರೀಯ ಮನಸ್ಸಿನ ಅನೇಕ ಮುಖಗಳನ್ನು ನಿಖರವಾಗಿ ಎಳೆಯಲಾಗಿದೆ.
ಡಯಾನ ಡಿಸೋಜ ಬರವಣಿಗೆಯ ಶಕ್ತಿ ಅದರ ಸರಳತೆ ಮತ್ತು ಪ್ರಾಮಾಣಿಕತೆಯಲ್ಲಿ ಇದೆ. ಅತಿರಂಜಿತ ಭಾವನೆಯನ್ನು ದೂರವಿಟ್ಟು ನೈಜ ಜೀವನದ ಸತ್ಯಗಳನ್ನು ಅವರು ಸೂಕ್ಷ್ಮವಾಗಿ ಬಿಚ್ಚಿಡುತ್ತಾರೆ. ಪ್ರತಿಯೊಂದು ಲೇಖನವೂ ಓದುಗರನ್ನು ಅವರದೇ ಅನುಭವಗಳತ್ತ ಕರೆದೊಯ್ಯುವ ಕನ್ನಡಿಯಂತೆ ಕೆಲಸ ಮಾಡುತ್ತದೆ.
ಈ ಪುಸ್ತಕದಲ್ಲಿ ಹೆಣ್ಣು ಎಂಬ ವಿಷಯವನ್ನು ಸಾಂಪ್ರದಾಯಿಕ ಪಾತ್ರಗಳಿಂದ ಆಧುನಿಕ ಸವಾಲುಗಳವರೆಗೆ ಹಲವಾರು ಅಂಗಳಗಳಲ್ಲಿ ಕಾಣಬಹುದು. ಇದೊಂದು ಹೆಣ್ಣಿನ ಅನುಭವದ ಧ್ವನಿ, ಮಾನವೀಯ ಸಂವೇದನೆಯ ಪ್ರತಿಧ್ವನಿ.
ಲೇಖಕಿಯ ಮಾತಿನಂತೆ, ಬರವಣಿಗೆ ನನ್ನಗೆ ಪ್ರಾರ್ಥನೆ-ಆತ್ಮಸಂವಾದ ಎನ್ನುವಂತೆ. ಈ ಪುಟಗಳ ಮೂಲಕ ತನ್ನ ಅನುಭವ ಹಂಚಿಕೊಳ್ಳುವುದರ ಜೊತೆಗೆ ಓದುಗರ ಮನಸ್ಸಿನಲ್ಲಿ ಸಹಾನುಭೂತಿಯ ಸಂವಾದ ಮೂಡಲಿ ಎಂಬುದು ನನ್ನ ಆಶಯ.” ಸುಮಾರು ೧೪೦ ಪುಟಗಳ ಈ ಕೃತಿಯನ್ನು ಓರ್ವ ಸ್ತ್ರೀಯ ಹಲವು ಮುಖಗಳನ್ನು ಬಿಚ್ಚಿಡುವಲ್ಲಿ ಸಫಲವಾಗಿದೆ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!