ಯುವ ಬರಹಗಾರ ಹರೀಶ. ಯು. ವಿಶ್ವಕರ್ಮ ಅವರ ʻಮನಸಿಂದ ಬದುಕಿಬಿಡಿ ಇರುವವರೆಗೆʼ ಕೃತಿಯು ಕೇವಲ ಪುಸ್ತಕವಲ್ಲ ಬದುಕಿನ ರೀತಿ, ಪ್ರೀತಿ ನೀತಿಗಳಿಂದ ಕೂಡಿದೆ. ಈ ಬದುಕು ತುಂಬಾ ಚಿಕ್ಕದು ಇದನ್ನು ತುಂಬಾ ಒಳ್ಳೆಯವರಾಗಿ ತುಂಬಾ ಕೆಟ್ಟವರಾಗಿ ಬದುಕುವುದಲ್ಲ ನಮ್ಮ ಮನಸ್ಸಿಗೆ ನಮ್ಮ ಆತ್ಮ ಮೆಚ್ಚಿ ಬದುಕಿದರೆ ಇನ್ನೆಲ್ಲ ಈ ಸಮಾಜವೇ ಕಲಿಸುತ್ತದೆ ಎನ್ನುತ್ತಾರೆ ಕೃತಿಕಾರರು. ಈ ಕೃತಿಗೆ ಬರೆದ ಲೇಖಕರ ಮಾತು ನಿಮ್ಮ ಓದಿಗಾಗಿ ಹೀಗಿದೆ:
"ಮನಸಿಂದ ಬದುಕಿಬಿಡಿ ಇರುವವರೆಗೆ " ಈ ನನ್ನ ಮೊದಲ ಪುಸ್ತಕ ಬರಿ ಪುಸ್ತಕವಲ್ಲ ಬದುಕಿನ ರೀತಿ, ಪ್ರೀತಿ ನೀತಿಗಳಿಂದ ಕೂಡಿದೆ ಹಾಗೆ ನನ್ನ ಕೆಲವು ಅನುಭವಗಳು, ಕಷ್ಟಗಳು ನಾ ಕಂಡ ಕೆಟ್ಟ ದಿನಗಳು ಕೆಲವು ನನ್ನ ಮನಸ್ಸಿನ ಭಾವನೆಗಳು ನನ್ನ ಸುತ್ತಲಿನ ಜನಗಳಿಂದ ಬದುಕಿನಿಂದ ಕಲಿತ ವಿಷಯಗಳನ್ನು ನಾನು ನೋಡುತ್ತಿರುವ ಈ ಸಮಾಜದ ವಿಚಾರವನ್ನು ಬರೆದಿದ್ದೇನೆ.
ಈ ಪುಸ್ತಕವನ್ನು ಓದುವುದರಿಂದ ಜೀವನವನ್ನು ಮನಸ್ಸಿನಿಂದ ಬದುಕುವ ದೃಷ್ಟಿಯಿಂದ ನೋಡುವ ಚಿಕ್ಕ ಪ್ರಯತ್ನ ಮಾಡಬೇಕೆಂಬ ಉದ್ದೇಶವಿದೆ. ಈ ಪುಸ್ತಕ ಯಾವುದೇ ಕ್ಲಿಷ್ಟಕರ ವಾಕ್ಯಗಳಿಂದ ಕೂಡಿಲ್ಲ ನನ್ನ ಆಡು ಭಾಷೆಯಲ್ಲಿ ಬರೆದಿದ್ದೇನೆ. ಈ ಪುಸ್ತಕದಲ್ಲಿ ಮೂಡಿರುವ ಕೆಲವು ಚಿತ್ರಕಲೆಗಳು ನನ್ನ ಕೈಗಳಿಂದ ಮೂಡಿಬಂದಿವೆ. ಈ ಬದುಕು ತುಂಬಾ ಚಿಕ್ಕದು ಇದನ್ನು ತುಂಬಾ ಒಳ್ಳೆಯವರಾಗಿ ತುಂಬಾ ಕೆಟ್ಟವರಾಗಿ ಬದುಕುವುದಲ್ಲ ನಮ್ಮ ಮನಸ್ಸಿಗೆ ನಮ್ಮ ಆತ್ಮ ಮೆಚ್ಚಿ ಬದುಕಿದರೆ ಇನ್ನೆಲ್ಲ ಈ ಸಮಾಜವೇ ಕಲಿಸುತ್ತದೆ ಕೆಲವು ಸಂದರ್ಭಗಳಲ್ಲಿ ನಮಗೆ ಜೀವನದ ತಿರುಳನ್ನು ಹೇಳಲು ಯಾರಾದರೂ ಬೇಕಾಗುತ್ತಾರೆ ಯಾರು ಇಲ್ಲದೆ ಹೋದರೆ ನಮ್ಮ ಆತ್ಮಬಲ ಯೋಚನೆ ಬದಲಿಸಿ ಬದುಕಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಪುಸ್ತಕವನ್ನು ನಮ್ಮ ಕನ್ನಡ ಭಾಷೆಯಲ್ಲಿ ಅರ್ಥವಾಗುವ ರೀತಿಯಲ್ಲಿ ಬರೆದಿರುವ ಮನಸ್ಸಿಂದ ಬದುಕಿ ಬಿಡಿ ಇರುವವರೆಗೆ ಎಂಬ ಕೃತಿ ಪುಸ್ತಕವನ್ನು ಖರೀದಿಸಿ ಒಮ್ಮೆ ಓದಬೇಕೆಂಬ ಆಶಯ ನನ್ನದು. ಈ ಪುಸ್ತಕವು ನಿಮ್ಮ ಕಷ್ಟಗಳನ್ನು ಬಗೆಹರಿಸದೆ ಹೋದರು ಇಲ್ಲಿರುವ ವಿಚಾರಗಳು ನಿಮ್ಮ ಮನಸ್ಸಿನ ಭಾವನೆಗಳ ಭಾರವನ್ನು ಕಡಿಮೆ ಮಾಡುತ್ತದೆ. ಹೊಸ ವಿಚಾರಗಳು ಆಲೋಚನೆಗಳಿಗೆ ದಾರಿ ಮಾಡುತ್ತದೆ ಮೊಬೈಲ್ ನಮ್ಮ ಸಮಯವನ್ನು ಕಿತ್ತುಕೊಂಡರೆ ಪುಸ್ತಕ ನಮ್ಮ ವಿಚಾರಗಳನ್ನು ಬಲಪಡಿಸುತ್ತದೆ ಇದು ನಿಮ್ಮ ಆಲೋಚನೆಗಳಿಗೆ ಬಿಟ್ಟಿದ್ದು ಇಲ್ಲಿ ನೀವು ಕಲಿಯುವ ತಿಳಿಯುವ ಪ್ರತಿಯೊಂದು ಜೀವನ ಕಲಿಸೋ ದೊಡ್ಡ ಅನುಭವಗಳ ಸಂತೆ ಜೀವನ ಕಲಿಸೋ ಪಾಠ ಯಾವ ಡಿಗ್ರಿನು ಕಲಿಸಲ್ಲ ಈ ಬದುಕು ಅರ್ಥವಾಗುತ್ತಾ ಹೋದಾಗ ಮನುಷ್ಯ ಸಿಂಪಲ್ ಆಗುತ್ತಾ ಹೋಗುತ್ತಾನೆ ಈ ವಾಕ್ಯ ಓದುಗರಿಗೆ ಯೋಚಿಸುವಂತೆ ಮಾಡುತ್ತದೆ. ಈ ಪುಸ್ತಕವನ್ನು ಬರೆಯಲು ನನಗೆ ಪ್ರೋತ್ಸಾಹ ನೀಡಿದ ಕೆಲವೊಬ್ಬರು ಸ್ನೇಹಿತರು ಇದ್ದಾರೆ ಅದರಲ್ಲಿ ಒಂದಿಷ್ಟು ಹೆಸರುಗಳನ್ನು ತೆಗೆದುಕೊಳ್ಳುತ್ತೇನೆ ಪರಮಾನಂದ ಬಳ್ಳೋಳ್ಳಿ, ದರ್ಶನ್ ಇನ್ನಿತರರು ನನ್ನ ಜೊತೆ ನಿಂತವರು ಇವರ ಪ್ರೀತಿ ಬೆಂಬಲವನ್ನು ನಾನು ಎಂದಿಗೂ ಮರೆಯುವುದಿಲ್ಲ. ಈ ಪುಸ್ತಕವನ್ನು ಬರೆಯುತ್ತೇನೆ ಎಂಬ ಭರವಸೆ ನಾನು ಕಲಿತ ಶಾಲೆ ಕನ್ನಡ ಶಾಲೆಯಲ್ಲಿ ಕನಸು ಕಂಡಿದ್ದೆ. ನಾನು ಶಾಲೆಯಲ್ಲಿ ಓದುವಾಗ ಕನ್ನಡನೆ ಬರೆಯುವುದಕ್ಕೆ ಬರೆದಿರುವ ಸಂದರ್ಭದಲ್ಲಿ ನನಗೆ ಕನ್ನಡ ಕಲಿಸಿದ ಕನ್ನಡ ಶಾಲೆಯ ಗುರುಗಳನ್ನು ನೆನೆಯಲೇಬೇಕು.”
(ಸಂಗ್ರಹಿತ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!