ಹಿಂದೆ 08/06/2022 ರಂದು ಈ ಹಾಡಿನ ಒಂದೆರಡೇ ಸಾಲನ್ನು ಅನುವಾದ ಮಾಡಿದ್ದೆ. ಈಗ ಪೂರ್ತಿ ಅನುವಾದ ಮಾಡಿದ್ದೇನೆ.

ಮೂಲ ಹಾಡು - ದಿಲ ಕೆಹತಾ ಹೈ , ಜಾ ಉನಸೇ ಮಿಲ

(ಅದರ ಯೂಟ್ಯೂಬ್ ಕೊಂಡಿ

https://youtu.be/CFvhWUL1AkQ?si=MxmSevLO26lJP4K6)

ಹಿಂದಿ ಚಿತ್ರ - ಅಕೇಲೆ ಹಂ ಅಕೇಲೆ ತುಂ .

ನನ್ನ ಅನುವಾದ -

(ನನ್ನ ಹಾಡಿನ ಕೊಂಡಿ https://m.starmakerstudios.com/a-vue3/playrecording?app=sm&from_sid=62169293314&guide_type=2&pg_rf_ca_vn=22&pid=recordingsharing&recordingId=11821949119678795&share_type=copyLink)

ಮನ ಹೇಳುವುದು ಹೋಗವಳ ಬಳಿಗೆ

ಏಳುವವು ಕಾಲು, ಮತ್ತೆ ನಿಲ್ಲುವವು

ಹೃದಯ ನನಗೆ ತಿಳಿ ಹೇಳುವದು

ತಿಳಿ ಹೇಳುವೆ ನಾ ಅದಕಿನ್ನೊಮ್ಮೆ

 

ನಿನ್ನಿಂದ ನಾ ದೂರ ಆಗಿರಲು, 

ಓ ನನ್ನ ಪ್ರಿಯಳೇಹಾಗೆ ನೋಡಿದರೆ 

ಏನಿಲ್ಲ ನನ್ನ ಬಳಿ

ಹಣದ ರಾಶಿ ಇದೆ, ಎಲ್ಲ ಭಾಗ್ಯ ಇದೆ

ಆದರೆ ಅನಿಸುತಿದೆ ಅಗಲಿ ನಿನ್ನನ್ನು

ನೀನಿಲ್ಲದೆ ನಂಗೆ ಏನೂ ಇಲ್ಲ

ಬಲ್ಲೆ ನೀನೇನು ನಾನೆನಿತು

ಮನದಿ ಪಡುವೆ ಸಂಕಟವ

          ಹೃದಯ ನನಗೆ ತಿಳಿ ಹೇಳುವದು

          ತಿಳಿ ಹೇಳುವೆ ನಾ ಅದಕಿನ್ನೊಮ್ಮೆ

 

ಆ ದಿನ ಎಂಥವು, ನಾವು ಜೊತೆಗೇ ಇದ್ದೆವು

ಇದ್ದವು ನಿನ ತೋಳು ನನ್ನ ತೋಳಲ್ಲಿ

ನೀನೇ ಇದ್ದೆ ನನ್ನ ಹಗಲೂ ಇರುಳೂ

ಆದರೆ ಈಗ ನೀ ಎತ್ತರದಿ

ಈಗ ಸಿಗದು ಸೆರಗೂ ಕೂಡ ನನ ಕೈಯಲ್ಲಿ

ಪಡೆವುದು ನಿನ್ನನ್ನು ಸಾಧ್ಯವೇ ಇಲ್ಲವೇ

ಯೋಚಿಸಿ ತುಂಬ ಗಾಬರಿ ಎನಗೆ 

           ಹೃದಯ ನನಗೆ ತಿಳಿ ಹೇಳುವದು

           ತಿಳಿ ಹೇಳುವೆ ನಾ ಅದಕಿನ್ನೊಮ್ಮೆ

           ಮನ ಹೇಳುವುದು ಹೋಗವಳ ಬಳಿಗೆ

           ಏಳುವವು ಕಾಲು, ಮತ್ತೆ ನಿಲ್ಲುವವು

           ಏಳುವವು ಕಾಲು, ಮತ್ತೆ ನಿಲ್ಲುವವು

           ಏಳುವವು ಕಾಲು, ಮತ್ತೆ ನಿಲ್ಲುವವು.....