ಇದೀಗ 'ದಿಲ ಕೆ ಅರಮಾನ್ ಆಂಸುವೋ ಮೇ ಬಹ ಗಯೆ' ಹಾಡನ್ನು ಮೂಲ ಧಾಟಿಯಲ್ಲಿ ಅನುವಾದಿಸಿದ್ದೇನೆ. ಇದು ನಾನು ಪೂರ್ತಿ ಅನುವಾದಿಸಿದ 100ನೇ ಹಾಡಾಗಿದೆ. ಒಟ್ಟು ಅನುವಾದದ 582ನೇ ಹಾಡಾಗಿದೆ.

ಅದು ಇಲ್ಲಿದೆ ನೋಡಿ.

ಎದೆಯ ಕನಸು ಕಂಬನಿ ಆಗಿ ಹರಿಯಿತು

ಪ್ರೀತಿ ಮಾಡಿ ಕೂಡ ನಾನು ಏಕಾಕಿಯೇ||

ಬದುಕು ಉಳಿಯಿತು ದಾಹವಾಗಿ ನನ್ನದು

ದಾಹದ ಕಥೆ ಅರ್ಧವಾಗೆ ಉಳಿಯಿತು||

ಅವನ ಕೋಪ ಕೊನೆಯದೆಂದು ತಿಳಿದೆನು

ಪ್ರತಿ ಕೋಪವನ್ನು ಹೀಗೆ ತಿಳಿದು ಸಹಿಸಿದೆ||

ಸ್ವಂತ ಎಂಬುದೆಲ್ಲ ನಾನು ಬಿಟ್ಟೆನು

ಆದರೂ ಕೂಡ ಉಳಿಯಿತು ಅಂತರ ||