ಈ ಅರ್ಧಂಬರ್ಧ/ಪೂರ್ತಿ ಅನುವಾದ/ಭಾವಾನುವಾದಗಳನ್ನು ಮೂಲ ಹಾಡಿನ ಧಾಟಿಯಲ್ಲಿಯೇ ಮಾಡಿರುವ ಕಾರಣ ನೀವು ಮೂಲ ಧಾಟಿಯಲ್ಲಿಯೇ ಇವನ್ನು ಹಾಡಿಕೊಳ್ಳಬಹುದು.


155)  ಮೂಲ ಹಾಡು - ಚುಪ ಗಯೆ ಬಾದಲ


ನನ್ನ ಅನುವಾದ:

ಎಲ್ಲ ತಾರೆ ನಿನ್ನ ನೋಡಿ

ಮೋಡ ಹಿಂದೆ ಸರಿದವು

ನಿನ್ನ ಮೊಗದ ಕಳೆಯ ಮುಂದೆ

ತಾವು ಮಂಕು ಆದವು

ನಿನ್ನ ನೋಡಿ ಚಂದ್ರ ನಾಚಿ

ಮೋಡ ಮರೆಯ ಹುಡುಕಿದ

ಹೂವು ಕೂಡ ನಾಚಿಕೊಂಡು

ಮೊಗವ ಕೆಳಗೆ ಹಾಕಿತು



156)  ಮೂಲ ಹಾಡು - ಚಾಂದ್ ಸಾ ಮುಖಡಾ


ನನ್ನ ಅನುವಾದ:

ನಾಚಿತೇಕೆ ಚಂದ್ರ ಮೊಗವು

ಕಲೆಯಲು ಕಣ್ಣು

ಹೃದಯಕೆ ಗಾಬರಿ


157)  ಮೂಲ ಹಾಡು - ತುಮ್ ನೆ  ಪ್ರಕಾರಾ


ನನ್ನ ಅನುವಾದ:

ನೀ ನನ್ನ ಕರೆದೆ

ನಾ ಓಡಿ ಬಂದೆ

ಜೀವ ಕೈಲಿ ಹಿಡಿದು

ಬಂದೆನೇ


158)  ಮೂಲ ಹಾಡು - ಅಭಿ ನ ಜಾವೋ ಛೋಡ ಕರ


ನನ್ನ ಅನುವಾದ:

ಹೋಗಬೇಡ ಈಗಲೇ

ಮನಕೆ ತೃಪ್ತಿ ಆಗಿಲ್ಲ

ಈಗ ತಾನೇ ಬಂದಿಹೆ

ಹೊರಟೆ ಏಕೆ?


159)  ಮೂಲ ಹಾಡು - ದೀವಾನಾ ಮುಝಸಾ ನಹೀ


ನನ್ನ ಅನುವಾದ:

ನನ್ನಂಥ ಮರುಳನೇ ಇಲ್ಲ

ಈ ಆಕಾಶದ ಕೆಳಗೆ

ಕಣ್ಣಲ್ಲೇ ಕೊಲ್ಲುವಳಿವಳು

ನಾನು ಇವಳ ಹಿಂದೆ



160)  ಮೂಲ ಹಾಡು - ದೂರ ರಹ ಕರ ನ ಕರೋ ಬಾತ್


ನನ್ನ ಅನುವಾದ:

ದೂರದಲೇ ನಿಂತು ಮಾತನಾಡದಿರು

ನೆನಪಲಿ ಉಳಿಯಲಿ ಈ ರಾತ್ರಿ ಈ ಗಳಿಗೆ

ಬಾ ಸನಿಯಾ


161)  ಮೂಲ ಹಾಡು - ಏ ಮೇರೆ ಹಂಸಫರ


ನನ್ನ ಅನುವಾದ:

ನನ್ನಯ ಗೆಳತಿಯೇ

ತಾಳುವ ಕೊಂಚವೇ

ಕರೆಯನು ನೀಡಿದೆ

ಪ್ರೇಮದ ಮಂದಿರ


ಈಗ ಏಕೋ ಅಗಲಿಕೆ ನಮಗೆ

ಇನ್ನದು ಎರಡೇ ಗಳಿಗೆ

ಕರಗದು ಕತ್ತಲೆ ಹೇಗೆ

ನಿಲ್ಲದು ಏಕೆ ಬಿರುಗಾಳಿ

ಏಕೆ ಆಗದು

ಮಿಲನ ನಮ್ಮದು?


ಹೆಜ್ಜೆಯ ಇಟ್ಟಿದೆ ಪ್ರೀತಿ

ಅಳುಕುತ ಬೆದರುತ ತಾನು

ತೆರೆದಿದೆ ದಾರಿಯು ತಾನೇ

ಸರಿದಿವೆ ತಾ ತಡೆಗೋಡೆ

ಯಾರೂ ತಡೆಯರು

ನಮ್ಮ ಮಿಲನವ


162)  ಮೂಲ ಹಾಡು - ದಿಲ ಜಲತಾ ಹೈ ತೋ


ನನ್ನ ಅನುವಾದ:

ಹೃದಯ ಉರಿವುದಾದರೆ ಉರಿದು ಹೋಗಲಿ

ಕಂಬನಿ ಬೇಡ , ದೂರೂ ಬೇಡ


ನಾನು ಆಸೆಯನಿಟ್ಟು ಕುಳಿತಿರುವೆ

ನೀನು ಮಾತು ಕೊಟ್ಟು ಮರೆತಿರುವೆ


ಬಂದು ಮುಖವನು ನೀ ತೋರು

ಇಲ್ಲಾ , ಮರೆತುಬಿಡು ಅಂತ ಹೇಳಿಬಿಡು


163)  ಮೂಲ ಹಾಡು -


ನನ್ನ ಅನುವಾದ:


164)  ಮೂಲ ಹಾಡು - ಮೈ ನಿಗಾಹೇ ತೇರೆ ಚಹರೇಸೆ


ನನ್ನ ಅನುವಾದ:

ನಾನು ಕಂಗಳನು

ನಿನ ಮೊಗದಿಂದ

ಕೀಳಲಿ ಹೇಗೆ