ಮೇ 1958ರ ಕಸ್ತೂರಿಯನ್ನು archive.org ತಾಣದಿಂದ ಇಳಿಸಿಕೊಂಡಿದ್ದು ಅದನ್ನು ಓದಿದೆ.

ಇದರಲ್ಲಿ ಪಕ್ಷಿವಿಜ್ಞಾನಿ ಸಲೀಮ್ ಅಲಿ ಅವರು ಬರೆದ 'ಪಕ್ಷಿಗಳು ಮತ್ತು ನಾನು ' ಲೇಖನ ಇದೆ. ಇದನ್ನು ನಾನು ಓದಿದೆ. 'ಅರವಿಂದರ ಯೋಗ' ಕೂಡ ಓದಿದೆ .

ಜೇಡವು ಕೀಟ ಅಲ್ಲವಂತೆ. ಹೆಣ್ಣು ಜೇಡಗಂಡು ಜೇಡವನ್ನು ತಿನ್ನುತ್ತದಂತೆ. ಈ ಸಂಗತಿ ಹಾಗೂ ಇನ್ನೂ ಕೆಲವು ಕುತೂಹಲಕರ ಸಂಗತಿಗಳನ್ನು ತಿಳಿಸುವ ಜೇಡರ ಹುಳ ಎಂಬ ಲೇಖನ ಇದೆ.

ಮೈಸೂರಿನ ರತ್ನಸಿಂಹಾಸನ ಎಂಬ ಲೇಖನದಿಂದ ಮೈಸೂರಿನ ರತ್ನಸಿಂಹಾಸನದ ಬಗ್ಗೆ ತಿಳಿದುಕೊಳ್ಳಬಹುದು.

ಔರಂಗಜೇಬನ ಕೊನೆಯ ಗಳಿಗೆಗಳು ಎಂಬ ಲೇಖನವೂ ಇದೆ

ಇದರಲ್ಲಿ 'ಕಾರವಾರ' ಎಂಬ ಲೇಖನ ಇದೆ.