ಅಕ್ಟೋಬರ್ 1958ರ ಕಸ್ತೂರಿಯನ್ನು archive.org ತಾಣದಿಂದ ಇಳಿಸಿಕೊಂಡಿದ್ದು ಅದನ್ನು ಓದಿದೆ.

ಇದರಲ್ಲಿ ಶೀಲದ ಮಹಿಮೆಯನ್ನು ತಿಳಿಸುವ ಒಂದು ಕಥೆ ಇದೆ. ನಾವು ನಮ್ಮ ಶೀಲವನ್ನು ಏಕೆ ಕಾಯ್ದುಕೋಬೇಕು ಎಂದು ಧರ್ಮರಾಜನ ಭೀಷ್ಮನನ್ನು ಕೇಳಿದನಂತೆ. ಅದಕ್ಕೆ ಉತ್ತರವಾಗಿ ಭೀಷ್ಮನು ಪ್ರಹ್ಲಾದನ ಕಥೆಯನ್ನು ಹೇಳಿದನು. ಇಂದ್ರನ ಅವನ ಬಳಿಗೆ ಹೋಗಿ ಶೀಲವನ್ನು ಪಡೆದುಕೊಂಡನು.

ಶೀಲದೊಂದಿಗೆ ಸತ್ಯ, ಧರ್ಮ, ಬಲ, ತೇಜಸ್ಸು ಹಾಗೂ ಶ್ರೀ ನಾದನನ್ನು ಬಿಟ್ಟು ಇಂದ್ರನನ್ನು ಸೇರಿಕೊಂಡವಂತೆ.

ಆಗ ಅನಕೃ ಅವರಿಗೆ ಐವತ್ತು ವರ್ಷ ತುಂಬಿತ್ತಂತೆ. ಆಗಲೇ ಅವರು ಒಂದು ನೂರು ಕಾದಂಬರಿಗಳನ್ನು ಬರೆದಿದ್ದರಂತೆ!

ದೇವರು ಇದ್ದಾನೆ ಆದರೆ ಅವನು ನಮಗೆ ಬೇಕೆ? ಎಂದು ಶ್ರೀ ರಂಗನಾಥ್ ದಿವಾಕರ ಅವರ ಒಂದು ಲೇಖನ ಇಲ್ಲಿದೆ.

ಪುಸ್ತಕ ವಿಭಾಗದಲ್ಲಿ Mahatma Gandhi - the last phase ಪುಸ್ತಕದ ಸಂಗ್ರಹ ಇದೆ.