ರಂಜು ಅಂಗಡಿಗೆ ಹೋಗಿ 2026ರ ಕ್ಯಾಲೆಂಡರ್ ಗಳ ಆಯ್ಕೆ ಮಾಡುತ್ತಿದ್ದ ತುಂಬಾ ಸುಂದರವಾಗಿ ಕಾಣುವ ವಿನೂತನವಾಗಿರುವ ಎಲ್ಲಾ ಮಾಹಿತಿಗಳನ್ನ ಹೊತ್ತಿರುವ ಕ್ಯಾಲೆಂಡರನ್ನ ಆಯ್ಕೆ ಮಾಡಿಯೂ ಮನೆಗೆ ತಂದಿದ್ದ. ಕಣ್ಣಿಗೆ ಕಾಣುವ ಹಾಗೆ ಗೋಡೆಯ ಮೇಲೆ ನೇತು ಹಾಕಿ ಪ್ರತಿ ದಿನಾಂಕಗಳ ಮೇಲೆ ತಾನು ಸಾಧಿಸಬೇಕಾದನ್ನ ಬರೆದಿಡುತ್ತಾ ಹೋಗ್ತಾ ಇದ್ದ. ವಾರಕ್ಕೊಂದು ತಿಂಗಳಿಗೊಂದು ವರ್ಷದಂತೆ ಆಗಬೇಕಾಗಿರುವ ಎಲ್ಲವನ್ನ ದಾಖಲಿಸಿ ಸಾಧನೆಗೆ ದಿನಗಳನ್ನ ದಾಖಲಿಸ್ತಾ ಹೋದ. ಇವನ ಹುಚ್ಚಾಟವನ್ನು ಕಂಡು ಅಮ್ಮ ಪಕ್ಕದಲ್ಲಿ ಕುಳಿತು ಮಾತನಾಡುವುದ್ದಕ್ಕೆ ಪ್ರಾರಂಭ ಮಾಡಿದ್ರು. ನೋಡು ಹೊಸ ವರ್ಷದ ಕ್ಯಾಲೆಂಡರ್ ಗಳು ಬದಲಾಗ್ತಾನೇ ಇರ್ತವೆ. ಆದರೆ ಈ ಹೊಸ ವರ್ಷದ ಕ್ಯಾಲೆಂಡರ್ ಬಂದ ಕಾರಣಕ್ಕೆ ನೀನು ಬದಲಾಗುವುದಲ್ಲ ಮನೆಯ ಪರಿಸ್ಥಿತಿ ನೋಡು, ನಿನ್ನ ಜವಾಬ್ದಾರಿಗಳನ್ನು ನೋಡು ನಿನ್ನ ಕನಸುಗಳನ್ನು ಕಣ್ಣ ಮುಂದೆ ಆಗಬೇಕಾಗಿರುವುದನ್ನ ಯೋಚಿಸಿಕೋ ಆಗ ನೀನು ಬದಲಾಗಬೇಕು. ಹೊಸ ವರ್ಷದ ಕ್ಯಾಲೆಂಡರ್ಗಳ ಮೇಲೆ ದಿನಾಂಕಗಳನ್ನು ಬರೆದು ಸಾಧನೆಗಳನ್ನು ಬರೆದು ಕನಸುಗಳನ್ನು ಬರೆದು ಕೆಲಸ ಮಾಡಿದರೆ ಸಾಕಾಗುವುದಿಲ್ಲ.ನಿನ್ನ ಮನಸ್ಸಿಗೆ ನಿನ್ನ ಮನೆಯ ಪರಿಸ್ಥಿತಿಗೆ ಮತ್ತು ಜವಾಬ್ದಾರಿಗೆ ಎಲ್ಲಕ್ಕೂ ಹೊಂದಾಣಿಕೆಯಾಗುವ ದಿನ ಸಿಕ್ಕಿದಾಗ ಮಾತ್ರ ನೀನು ಬದಲಾಗುತ್ತಿ.ಅದು ನಿನ್ನ ವೈಯಕ್ತಿಕ ವಿವೇಚನೆಗೆ ಬಿಟ್ಟದ್ದು..ಅಮ್ಮನ ಮಾತು ಕೇಳಿದರೂ ಅವನ ಹುಚ್ಚಾಟ ಮುಗಿದಿರಲಿಲ್ಲ;
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!