ಮನೆಯೊಂದು ಕಾಯುತ್ತಿದೆ. ನನ್ನ ಹೊಸ್ತಿದಲ್ಲಿ ಕುಳಿತು ಆಟವಾಡಿದವ, ಗೋಡೆಯ ಮೇಲೆ ಚಿತ್ತಾರ ಬಿಡಿಸಿದವ ಮನೆಯ ತುಂಬೆಲ್ಲ ಮುದ್ದು ಮುದ್ದಾಗಿ ಓಡಾಡುತ್ತಾ ತನ್ನ ಕನಸುಗಳನ್ನು ಕಟ್ಟಿಕೊಂಡವ, ಪ್ರೀತಿಯನ್ನು ಹೇಳಿಕೊಂಡವ ನೋವಾದಾಗ ಹಾಗೆ ಮೃದುವಾಗಿ ಗುದ್ದಿದವ ಅವನು ಈಗ ಮನೆಗೆ ಬರ್ತಾನೇ ಇಲ್ಲ. ದಿನಗಳಾಗಿದೆ ತಿಂಗಳುಗಳಾಗಿದೆ ವರ್ಷಗಳೇ ದಾಟಿ ಹೋಗಿದೆ ಆಗೊಮ್ಮೆ ಈಗೊಮ್ಮೆ ಬಂದು ಇದ್ದು ಹೊರಡುತ್ತಾನೆ ಮೊದಲಿನಂತೆ ನನ್ನೊಂದಿಗೆ ಮಾತನಾಡುತ್ತಿಲ್ಲ ನಾನಿದ್ದಾಗ ಆತನಿಗೆ ನಾನು ಪ್ರೀತಿ ಪಾತ್ರನಾಗಿದ್ದೆ ಎಲ್ಲೇ ಹೋದರು ರಾತ್ರಿಯಾಗುವ  ಹೊತ್ತಿಗೆ ನನ್ನೊಳಗೆ ಬಂದು ಆತುಕೊಳ್ಳುತ್ತಿದ್ದ ನನ್ನನ್ನು ತುಂಬಾ ಪ್ರೀತಿಸುತ್ತಿದ್ದ ಈಗ ಯಾವಾಗಲೂ ಒಂದು ಸಲ ಬರ್ತಾನೆ. ಪ್ರೀತಿಯಿದೆ, ಪ್ರೀತಿಗಿಂತ ಜಾಸ್ತಿ ಜವಾಬ್ದಾರಿ ಹೆಚ್ಚಿದೆ ನಾನಿನ್ನು ಗಟ್ಟಿಯಾಗಬೇಕು ಅನ್ನುವ ಕಾರಣಕ್ಕೆ ಎತ್ತರನಿಲ್ಲಬೇಕು ಇನ್ನೊಂದಷ್ಟು ಬಣ್ಣಗಳಿಂದ ಕಂಗೊಳಿಸಬೇಕು ಈ ಮನೆಯೊಳಗೆ ಇನ್ನೊಂದಷ್ಟು ಹೆಚ್ಚು ಜನ ಬದುಕಬೇಕು ಅನ್ನುವ ಕಾರಣಕ್ಕೆ ಎಲ್ಲೋ ದುಡಿಯುತ್ತಿದ್ದಾನೆ .ನಾನವನನ್ನ ತುಂಬಾ ಹಚ್ಚಿಕೊಂಡಿದ್ದೆ, ಈಗ ತುಂಬಾ ಕಳೆದುಕೊಳ್ಳುತ್ತಿದ್ದೇನೆ . ಒಮ್ಮೆ ಬಂದುಬಿಡು ನನ್ನ ಪಕ್ಕದಲ್ಲಿ ಕುಳಿತು ನಿನ್ನೆಲ್ಲ ನೋವು ನಲಿವುಗಳನ್ನು ಹಂಚಿಕೊಂಡು ಬಿಡು ನಾನು ಇನ್ನೂ ಗಟ್ಟಿಯಾಗಿ ನಿಲ್ಲುತ್ತೇನೆ. ಮನೆ ಮಾತಾಡಿತು...ಮನಸ್ಸು ದೂರದಲ್ಲಿತ್ತು

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ