* ಇಂದಿನ ದಿನಗಳಲ್ಲಿ ಐದು ವರುಷದ ಮಗುವಿನಲ್ಲಿರುವ ಜ್ಞಾನದ ಮುಂದೆ ಹಿರಿಯರಾದ ನಾವು ತೀರಾ ಕುಬ್ಜರಾಗಿ ಕಾಣುತ್ತಿದ್ದೇವೆ. ಈ ಅಂತರದಿಂದಲೇ ಅವರ ಮತ್ತು ನಮ್ಮ ಸಂಬಂಧಕ್ಕೆ ಚ್ಯುತಿ ಬಂದಿದೆ !

* ಉಪ್ಪಿನ ಜೊತೆ ಬೆಲ್ಲ ಸೇರಿಸಿ ಇಡುವುದಿಲ್ಲ  ಆದರೆ ಪ್ರತಿಯೊಂದು ಪದಾರ್ಥಕ್ಕೂ ಉಪ್ಪಿನ ಜೊತೆಗೆ ಬೆಲ್ಲ ಸೇರಿಸುತ್ತಾರೆ . ಇದೇ ಆತ್ಮ — ಪರಮಾತ್ಮನಿಗಿರುವ ವ್ಯತ್ಯಾಸ ! 

* ಹಿಂದೆ :-  ಹಿರಿಯರಿಗೆ ತಲೆಬಾಗಿ ನಡೆ ಮುಂದಕೆ, ಇಂದು ಕಿರಿಯರಿಗೆ ತಲೆಬಾಗಿ ಸರಿ ಪಕ್ಕಕೆ ! 

* ಶೀಲ, ಅನ್ನುವುದು ಇಂದು ಹೆಚ್ಚಿನ ಯುವಕ ಯವತಿಯರಿಗೆ ಒಂದು ಆಟಿಕೆ ವಸ್ತು ! ಬಿಕರಿಯಾಗುವ ವಸ್ತುಗಳಲ್ಲಿ ಸಂಪತ್ತೂ ಒಂದು ; ಇದರ ಒಳಾರ್ಥ ತಿಳಿದು ಬದುಕುವುದನ್ನು ನಾವೆಲ್ಲರೂ ಕಲಿತಾಗ ಬಾಳು ಸುಂದರ . ಇಲ್ಲದಿದ್ದರೆ ಆಯುಸ್ಸು ಇನ್ನೂ ಮುಗಿಯದ ವಯಸ್ಸಿನಲ್ಲಿ ನಮ್ಮನ್ನು ನಾವೇ ಸಾಯಿಸಿಕೊಳ್ಳುವ ಪರಿಸ್ಥಿತಿಗೆ ಅದು ತಂದು ನಿಲ್ಲಿಸುತ್ತದೆ ! 

-ಹಾ ಮ ಸತೀಶ, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ