ಕನ್ನಡ ಎಂದರೆ ಹೊನ್ನಿನ ನುಡಿಯು
ಮಣ್ಣಿನ ಕಣಕಣವು
ಅನ್ನದ ಋಣವನು ತೀರಿಸು ಮಗುವೆ
ಚಿನ್ನದ ಗುಣವದುವು
ಅಆಇಈ ಅಕ್ಷರ ಮಾಲೆ
ಹೊಳೆಯುವ ಮುತ್ತುಮಣಿ
ಭೇದಭಾವವು ನಮ್ಮೊಳು ಬೇಡ
ಮನುಜರೆಲ್ಲ ಒಂದೇ
ನಾವೆಲ್ಲರು ಕನ್ನಡ ನೆಲಜಲದಿ ಜನಿಸಿ, ಬದುಕನ್ನು ಕಟ್ಟಿಕೊಂಡವರು. ನಮ್ಮ ನಮ್ಮೊಳು ತಾರತಮ್ಯ ಬೇಡ. ಭಾಷೆಯ ಬೆಳವಣಿಗೆಗಾಗಿ, ಉಳಿವಿಗಾಗಿ ಹೋರಾಡಿದ ಹಿರಿಯ ಮಹನೀಯರನ್ನು ನೆನೆಯೋಣ. ಅವರ ಆದರ್ಶ, ಬರಹಗಳು, ಬುದ್ಧಿವಾದದ ನುಡಿಗಳೇ ದಾರಿದೀಪ. ಹಳೆಕನ್ನಡ, ನಡುಕನ್ನಡ, ಹೊಸಕನ್ನಡ ಸಾಗಿ ಬಂದ ಹಾದಿ, ಕೃತಿಗಳು, ಬದಲಾವಣೆಗಳನ್ನು ಕೇಳಿ, ಓದಿ ತಿಳಿಯುವ ಪ್ರಯತ್ನ ನಮ್ಮಿಂದಾಗಬೇಕು. ತಪ್ಪು ಬರೆದವನ ಹೀಯಾಳಿಸದೆ "ಹೀಗೆ ಬರೆಯಬಹುದೆಂದು" ಕಿವಿಮಾತು ಹೇಳುವ ಕೆಲಸವಾಗಬೇಕು. ಕನ್ನಡ ನಾಡಿಗಾಗಿ, ನುಡಿಗಾಗಿ ಸಾಧ್ಯವಿದ್ದಷ್ಟು ಶ್ರಮಿಸಿ, ಕೃತಜ್ಞರಾಗುತ ಕೃತಾರ್ಥರಾಗೋಣ.
-ರತ್ನಾ ಕೆ.ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!