ಶೋಕೋ ನಾಶಯತೇ ಧೈರ್ಯಂ ಶೋಕೋ ನಾಶಯತೇ ಶ್ರುತಂ/
ಶೋಕೋ ನಾ ಶಯತೇ ಸರ್ವಂ ನಾಸ್ತಿ ಶೋಕಸಮೋ ರಿಪು://
ದು:ಖವೆಂಬುದು ನಮ್ಮಲ್ಲಿರುವ ಧೈರ್ಯವನ್ನು ಮತ್ತಷ್ಟು ಕುಗ್ಗಿಸುತ್ತದೆ. 'ಏನು ಮಾಡಬೇಕೆಂದೇ ತೋಚುತ್ತಿಲ್ಲ' ಎನ್ನುವಷ್ಟರ ಮಟ್ಟಿಗೆ ಹತಾಶರಾಗುತ್ತೇವೆ. ಭಗವಂತನಿದ್ದಾನೆ, ಹಾಲಲ್ಲಿ ಅಥವಾ ನೀರಲ್ಲಿ ಹಾಕು ನೀನೇ ಗತಿ ' ಎಂದು ಶರಣು ಹೋಗುವುದನ್ನು ಆ ಕ್ಷಣಕ್ಕೆ ಮರೆತು ಬಿಡುತ್ತೇವೆ. ವಿವೇಚನೆ ಎನ್ನುವುದು ಶೂನ್ಯವಾಗಿ ಬಿಡುತ್ತದೆ. ಜ್ಞಾನವನ್ನು ಮೋಡದಂತೆ ಮುಸುಕಿ ಎಲ್ಲವನ್ನೂ ನಾಶಮಾಡುತ್ತದೆ. ಶೋಕ ಎನ್ನುವುದು ಶತ್ರುವಿನಂತೆ, ರಾಗ-ದ್ವೇಷಗಳಿಂದ ದೂರವಿದ್ದು, ಭಗವತ್ ಚಿಂತನೆ, ಉತ್ತಮರ ಸಂಗ, ಒಳ್ಳೆಯ ಪುಸ್ತಕಗಳ ಓದು, ದಿನನಿತ್ಯದ ಕೆಲಸ ಕಾರ್ಯಗಳಲ್ಲಿ ತಲ್ಲೀನ, ಬಂಧುಬಾಂಧವರ ಭೇಟಿ ಇದೆಲ್ಲ ಶೋಕವನ್ನು ಶಮನ ಮಾಡಬಹುದು. ಧ್ಯಾನ ಅತ್ಯಂತ ಪ್ರಬಲ ಅಸ್ತ್ರ. ಸತ್ಯವಂತರಾದ ಜೀವನದ ಹಾದಿ, ಸತ್ಯವೇ ದೇವರು, ಸತ್ಯವೇ ಧೈರ್ಯ, ಸತ್ಯದಲ್ಲಿ ಲಕ್ಷ್ಮೀದೇವಿ ನೆಲೆಸಿದ್ದಾಳೆಂಬ ನಂಬಿಕೆ ನಮಗಿರಬೇಕು, ನಮ್ಮ ಹಿರಿಯರು ಇದನ್ನು ಹೇಳುತ್ತಿದ್ದರು. ಎಷ್ಟೇ ಕಷ್ಟ,ದು:ಖ, ನೋವಾದರೂ ಸತ್ಯವನ್ನು ಬಿಡಬಾರದೆಂದು. ಕೆಸರು, ಕೊಳಕು, ಕೊಚ್ಚೆ ಕಂಡಾಗ ಸ್ವಲ್ಪ ಸರಿಯುತ್ತೇವೆ. ಅದೇ ರೀತಿ ಬೇಡದ ಬಯಕೆಗಳಿಂದ ದೂರ ಸರಿದಾಗ ಶೋಕ ಹತ್ತಿರ ಬಾರದು. ನೀರಿನ ಜೊತೆ ಕೆಸರು ಸಹಜ, ಹಾಗೆಯೇ ದು:ಖದ ಜೊತೆ ಸುಖವೂ ಇದೆ. ನಮ್ಮ ಅರಿವಿಗೆ ಬರುವಾಗ ಸ್ವಲ್ಪ ತಡವಾಗುವುದೇ ಕಾರಣ.
ಪ್ರಪಂಚದ ಆಗುಹೋಗುಗಳು ಏನೆಂಬುದನ್ನು ಅರ್ಥೈಸಿಕೊಂಡು, ನಮಗೆ ನಾವೇ ಸಮಾಧಾನಪಟ್ಟು ಕೊಳ್ಳುವುದನ್ನು ಕಲಿಯಬೇಕು.ಕಷ್ಟದ ಕಾರಣವನ್ನು ತುಂಬಾ ಆತ್ಮೀಯರಲ್ಲಿ ಹೇಳಿ, ಮನಸ್ಸನ್ನು ಹಗುರ ಮಾಡಿಕೊಂಡಾಗ ದು:ಖ ಶಮನವಾಗಬಹುದು, ಏನಾದರೂ ಪರಿಹಾರ ಸಿಗಬಹುದು. ಸ್ನೇಹಿತರೇ, ಇರುವಷ್ಟು ದಿನ ಉತ್ತಮ ಜೀವನ ನಮ್ಮದಾಗಲು ಪ್ರಯತ್ನಿಸೋಣ.
(ಶ್ಲೋಕ:ಸರಳ ಸುಭಾಷಿತ)
-ರತ್ನಾ ಕೆ ಭಟ್., ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!