ತಲತ್ ಮಹಮ್ಮೂದ್  ಹಾಡಿದ ಈ ಹಾಡನ್ನು ಈಗ ಅದೇ ಧಾಟಿಯಲ್ಲಿ ಹಾಡುವ ಹಾಗೆ ಸಂಪೂರ್ಣ ಅನುವಾದಿಸಿದ್ದೇನೆ . ಇದು ನನ್ನ ಅನುವಾದದ 443ನೇ ಹಾಡು.

 



ನನ್ನ ನೆನಪಲ್ಲಿ ನೀನು ಕಣ್ಣೀರ ಸುರಿಸಬೇಡ

ಎದೆಯನ್ನು ಉರಿಸಬೇಡ ಮರೆತುಬಿಡು ನನ್ನ

ಕನಸೆಂದೆ ತಿಳಿ ನೀ ಆದುದೆಲ್ಲವನ್ನು

ಕಳೆದಂಥ ಸಮಯ ಹಾಗೂ ನನ್ನ ಮರೆಯೇ

ನನ್ನ ನೆನಪಲ್ಲಿ ನೀ


ನನ್ನ ಹಾದಿ ಬೇರೆ ನಿನ್ನದು ಬೇರೆ

ಸೇರಲಾರವೆಂದೂ ನನ್ನ ನಿನ್ನ ಬಾಳು

ನಂಗೆ ಹೋಗೋದಿದೆ ನಿನ್ನಿಂದ ದೂರ

ಎದೆಯನ್ನು ಉರಿಸಬೇಡ ಮರೆತುಬಿಡು ನನ್ನ

ನನ್ನ ನೆನಪಲ್ಲಿ ನೀ


ಒಡೆದಂಥ ಈ ಹೃದಯ ಹೇಳುತಿದೆ ತಾನು

ನಾನಲ್ಲ ನಿನ್ನ ಪ್ರೀತಿಗೆ ಯೋಗ್ಯ

ನನ ಹೆಸರ ಕೂಡ ತರಬೇಡ ತುಟಿಗೆ

ಎದೆಯನ್ನು ಉರಿಸಬೇಡ ಮರೆತುಬಿಡು ನನ್ನ

ನನ್ನ ನೆನಪಲ್ಲಿ ನೀ