ಈ ತನಕ ನಾನು ಕೇಳಿ ಇಷ್ಟ ಪಟ್ಟ ಪರಭಾಷೆಗಳ ಅನೇಕ ಗೀತೆಗಳನ್ನು ನನ್ನ ಸಂತೋಷಕ್ಕಾಗಿ ಆದಷ್ಟು ಅನುವಾದ ಮಾಡಿಕೊಂಡು ನಾನೇ ಹಾಡಿಕೊಂಡು ರೆಕಾರ್ಡ್ ಮಾಡಿಕೊಂಡು ಕೇಳುತ್ತ ಖುಷಿ ಪಡುತ್ತಿದ್ದೇನೆ.

 

ಅವನ್ನು ನೀವೂ ನೋಡಿ. ಇಷ್ಟವಾದರೆ ಬೇಕಾದರೆ ಹಾಡಿಕೊಂಡು ಸಂತೋಷ ಪಡಿ. ರೆಕಾರ್ಡ್ ಮಾಡಿಕೊಂಡ ನನ್ನ ಹಾಡುಗಳ ಅಂತರ್ಜಾಲ ಕೊಂಡಿಯನ್ನು ಕೂಡ ಕೊಟ್ಟಿದ್ದೇನೆ . ಅದನ್ನು ಕೇಳಿ . ಬೇಕಾದರೆ ಅದನ್ನು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಗೆ ಉಳಿಸಿಕೊಂಡು ಬೇಕಾದಾಗ ಕೇಳಿ ಸಂತೋಷಪಡಿ.

 

ಅವುಗಳನ್ನು ಸಾಧ್ಯವಾದರೆ ಸುಧಾರಿಸಿ, ಪೂರ್ತಿಗೊಳಿಸಿ ಸ್ನೇಹಿತರೊಡನೆ ಮತ್ತು ಸಂಪದಿಗರೊಡನೆ ಹಂಚಿಕೊಳ್ಳಿ ಮತ್ತು ಸಮಾಜದಲ್ಲಿನ ಸಂತೋಷದ ಮಟ್ಟವನ್ನು ಹೆಚ್ಚಿಸಿ!

 

 

 

 

 

51)

ಮೂಲ ಹಾಡು - ಆಂಖ ಹೈ ಭರೀ ಭರೀ

ಹಿಂದಿ ಚಿತ್ರ - ತುಮ ಸೆ ಅಚ್ಛಾ ಕೌನ ಹೈ

 

ನನ್ನ ಅನುವಾದ -

ನನ್ನ ಕಣ್ಣು ತಾನು ತುಂಬಿ ಬಂದಿರೆ

ಮುಗುಳು ನಗೆಯ ಪಾಠ ನೀನು ಹೇಳುವೆ

ನನ್ನ ಬಾಳೇ ತಾ ಹಾಳಾಗಿರೆ

ಪ್ರೀತಿ ಪ್ರೇಮದ ಮಾತು ನೀನು ಆಡುವೆ

 

ನಾನು ಹಾಡಿದ  ಹಾಡಿಗೆ ಕೊಂಡಿ -___LINK_OPEN_href="https://drive.google.com/file/d/1JhT_wM70sCZ8rTGdR7JAlekYsml7BWOB/view?usp=drivesdk" rel="noopener noreferrer nofollow" target="_blank"___https://drive.google.com/file/d/1JhT_wM70sCZ8rTGdR7JAlekYsml7BWOB/view?usp=drivesdk

 

 

52)

ಮೂಲ ಹಾಡು - ಆಂಸೂ ಭರೀ ಹೈ

ಹಿಂದಿ ಚಿತ್ರ - ಪರ್ವರಿಶ್

 

ನನ್ನ ಅನುವಾದ -

ಕಣ್ಣೀರೆ ತುಂಬಿದೆ ಈ ಬಾಳ ಪಾತ್ರೆ

ಬರಿ ಮುಳ್ಳೆ ತುಂಬಿದೆ ಈ ಬಾಳ ಯಾತ್ರೆ

 

 

ಮಾತನ್ನು ಮರೆತು ಆಣೆಯನು ಮುರಿದು

ಹೋದವಳು ಅವಳು ನನ್ನನ್ನು ತೊರೆದು

ಅವಳನ್ನು ನಾನು ಅದು ಏಕೆ ನಂಬಿದೆ

ಬರಿ ಮುಳ್ಳೆ ತುಂಬಿದೆ ಈ ಬಾಳ ಯಾತ್ರೆ

 

ನಾನು ಹಾಡಿದ  ಹಾಡಿಗೆ ಕೊಂಡಿ - ___LINK_OPEN_href="https://drive.google.com/file/d/1Jw8Cr4dsGiJnAzqMFyAhMfrbcz1-ptBA/view?usp=drivesdk" rel="noopener noreferrer nofollow" target="_blank"___https://drive.google.com/file/d/1Jw8Cr4dsGiJnAzqMFyAhMfrbcz1-ptBA/view?usp=drivesdk

 

 

53)

ಮೂಲ ಹಾಡು - ದರ್ಪಣ ಕೋ ದೇಖಾ

ಹಿಂದಿ ಚಿತ್ರ - ಉಪಾಸನಾ

 

ನನ್ನ ಅನುವಾದ -

ಕನ್ನಡಿಯ ಕಂಡೆ

ನೀನು ಕುಂಕುಮ ಇಡುವಾಗ

ಹೂವುಗಳ ಕಂಡೆ

ನೀನು ಜಡೆಯಲಿ ಮುಡಿವಾಗ

ನನ್ನ ನಸೀಬೇ ಖೋಟಾ ಇದೆ,

ನನ್ನ ನೋಡಲೇ ಇಲ್ಲ ಒಮ್ಮೆಯೂ

 

ನಾನು ಹಾಡಿದ  ಹಾಡಿಗೆ ಕೊಂಡಿ - ___LINK_OPEN_href="https://drive.google.com/file/d/1JyEqKTAEi_aD8EAKy5UZfG192lV0VbBa/view?usp=drivesdk" rel="noopener noreferrer nofollow" target="_blank"___https://drive.google.com/file/d/1JyEqKTAEi_aD8EAKy5UZfG192lV0VbBa/view?usp=drivesdk

 

 

54)

ಮೂಲ ಹಾಡು - ದಿಲ ಲಗಾ ಕರ ಹಮ್ನೆ ಸಮಜಾ

ಹಿಂದಿ ಚಿತ್ರ - ಜಿಂದಗೀ ಔರ್ ಮೌತ್

ನನ್ನ ಅನುವಾದ -

ಪ್ರೀತಿ ಮಾಡಿ ನಾನು ಅರಿತೆ

ಬದುಕಿ ಬಾಳುವ ರೀತಿಯ

ಪ್ರೀತಿಯೇನೋ ಪ್ರೇಮವೇನೋ

ಒಲವು ಏನು ಎಂಬುದ

 

 

ನಾನು ಹಾಡಿದ  ಹಾಡಿಗೆ ಕೊಂಡಿ - ___LINK_OPEN_href="https://drive.google.com/file/d/1JzcuOULF9Alc4KcZtKxU6E7f2ryhqWrt/view?usp=drivesdk" rel="noopener noreferrer nofollow" target="_blank"___https://drive.google.com/file/d/1JzcuOULF9Alc4KcZtKxU6E7f2ryhqWrt/view?usp=drivesdk

 

 

55)

ಮೂಲ ಹಾಡು - ನೈನೋ ಮೆ ಬದರಾ ಛಾಯಿ

ಹಿಂದಿ ಚಿತ್ರ - ಮೇರಾ ಸಾಯಾ

 

ನನ್ನ ಅನುವಾದ -

ನೋಡಲ್ಲಿ ಕವಿದವು ಮೋಡ

ಅದೋ ಅಲ್ಲಿ ಮಿಂಚು ಕೂಡ

ಹೀಗಿರಲು ನನ್ನ ನಲ್ಲ

ಎದೆಗಪ್ಪಿಕೋ ನನ್ನ

 

 

ಪ್ರೇಮದಲಿ ಮರಳಿ ನಾನು

ಕನಸಲ್ಲೇ ಕಳೆದು ಹೋದೆ

ಜನುಮಾಂತರದ ಪ್ರೇಮ ನಮದು

ಈ ಜನುಮದಲ್ಲೂ ನೀನು

ನನ್ನನ್ನು ಒಪ್ಪಿಕೋ

 

ನಾನು ಹಾಡಿದ  ಹಾಡಿಗೆ ಕೊಂಡಿ - ___LINK_OPEN_href="https://drive.google.com/file/d/1K-Cp2Ot7rWeQdH5VvWUIYqCarXipUG1q/view?usp=drivesdk" rel="noopener noreferrer nofollow" target="_blank"___https://drive.google.com/file/d/1K-Cp2Ot7rWeQdH5VvWUIYqCarXipUG1q/view?usp=drivesdk

 

 

56)

ಮೂಲ ಹಾಡು - ಪೆಹಲೇ ಕಭೀ ನ ಹಂ ನೆ ಕಹಾ

ಹಿಂದಿ ಚಿತ್ರ - ಹಂ ಆಪಕೆ ದಿಲ್ ಮೆ ರಹತೇ ಹೈಂ.

 

ನನ್ನ ಅನುವಾದ -

ಹೇಳಿಲ್ಲ ನಾನು ಹಿಂದೆಂದು ನಿನಗೆ

ಹೇಳಿ ಬಿಡುವೆ ನಾನಿಂದು ನೋಡು

ನಾ ನಿನ್ನ ಪ್ರೀತಿ ಮಾಡುವೆ

 

ನಾನು ಹಾಡಿದ  ಹಾಡಿಗೆ ಕೊಂಡಿ - ___LINK_OPEN_href="https://drive.google.com/file/d/1K1bS2x8fZjgSfma0TC1NyPWZDubiMFcT/view?usp=drivesdk" rel="noopener noreferrer nofollow" target="_blank"___https://drive.google.com/file/d/1K1bS2x8fZjgSfma0TC1NyPWZDubiMFcT/view?usp=drivesdk

 

 

57)

ಮೂಲ ಹಾಡು - ತೇರೆ ಮೇರೆ ಹೋಟೊಂ ಪೆ

ಹಿಂದಿ ಚಿತ್ರ - ಚಾಂದನೀ

 

ನನ್ನ ಅನುವಾದ -

ನಿನ್ನ ನನ್ನ ತುಟಿಯಲ್ಲಿ

ಈಗ ಪ್ರೀತಿ ಹಾಡು

ಮುಂದೆ ಮುಂದೆ ನಾವು ಹೋಗೆ

ಹಿಂದೆ ಹಿಂದೆ ಪ್ರೀತಿ ನೋಡು

 

ನಾನು ಹಾಡಿದ  ಹಾಡಿಗೆ ಕೊಂಡಿ - ___LINK_OPEN_href="https://drive.google.com/file/d/1K8bfUc6g0S0Y1UZETyxNu4dPPPL14LVi/view?usp=drivesdk" rel="noopener noreferrer nofollow" target="_blank"___https://drive.google.com/file/d/1K8bfUc6g0S0Y1UZETyxNu4dPPPL14LVi/view?usp=drivesdk

 

 

58)

ಮೂಲ ಹಾಡು - ತುಂ ಇತನಾ ಜೋ ಮುಸ್ಕುರಾ ರಹೇ ಹೋ

ಹಿಂದಿ ಚಿತ್ರ - ಅರ್ಥ್

 

ನನ್ನ ಅನುವಾದ -

ನೀನಿಂದು ಇನಿತು ಮುಗುಳು ನಗುತಲಿರುವಿ

ಅದಾವ ದುಃಖ ಮರೆ ಮಾಚುತಿರುವಿ

 

ನಾನು ಹಾಡಿದ  ಹಾಡಿಗೆ ಕೊಂಡಿ - ___LINK_OPEN_href="https://drive.google.com/file/d/1KMKIDldOnl6nUVi1h5L8htlO8cuGCs63/view?usp=drivesdk" rel="noopener noreferrer nofollow" target="_blank"___https://drive.google.com/file/d/1KMKIDldOnl6nUVi1h5L8htlO8cuGCs63/view?usp=drivesdk

 

 

59)

ಮೂಲ ಹಾಡು - ಜಿಂದಗೀ ಖ್ವಾಬ ಹೈ

ಹಿಂದಿ ಚಿತ್ರ - ಜಾಗತೇ ರಹೋ

 

ನನ್ನ ಅನುವಾದ -

ಹೃದಯ ನನಗೆ ಏನ ಹೇಳಿತು

ನಾನು ಹಾಗೆಯೇ ಮಾಡಿದೆ

ಮುಂದೆ ನೋಡುವೆ ಪುರುಸೊತ್ತಲಿ

ಸರಿಯೋ ಹೌದೋ ಅಲ್ಲವೋ

 

ನಾನು ಹಾಡಿದ  ಹಾಡಿಗೆ ಕೊಂಡಿ - ___LINK_OPEN_href="https://drive.google.com/file/d/1KTF23XjliiMPGAa5uSgiruUrwmJvDC6f/view?usp=drivesdk" rel="noopener noreferrer nofollow" target="_blank"___https://drive.google.com/file/d/1KTF23XjliiMPGAa5uSgiruUrwmJvDC6f/view?usp=drivesdk

 

 

60)

ಮೂಲ ಹಾಡು - ಆಪಸೆ ಹಂಕೋ ಬಿಛಡೇ ಹುಎ

ಹಿಂದಿ ಚಿತ್ರ - ವಿಶ್ವಾಸ್

 

ನನ್ನ ಅನುವಾದ -

ನಿನ್ನನ್ನು ಅಗಲಿ ನನ ಪಾಲಿಗೆ

ಯುಗಗಳೇ ಕಳೆದು ಹೋದವು

ನನ್ನಯ ಬಾಳು ಬಿಗಡಾಯಿಸಿ

ಯುಗಗಳೇ ಕಳೆದು ಹೋದವು

 

ನಾನು ಹಾಡಿದ  ಹಾಡಿಗೆ ಕೊಂಡಿ - ___LINK_OPEN_href="https://drive.google.com/file/d/1WRb7MWnpHDu-utcFV2ezMqAFeWYKP1zu/view?usp=drivesdk" rel="noopener noreferrer nofollow" target="_blank"___https://drive.google.com/file/d/1WRb7MWnpHDu-utcFV2ezMqAFeWYKP1zu/view?usp=drivesdk