ನಾನು ನನ್ನ ಪರ್ಸನಲ್ ಕಂಪ್ಯೂಟರಿನಲ್ಲಿ ಲೀನಕ್ಸ್ ನ ಉಬುಂಟು ವನ್ನು ಹಾಕಿಕೊಂಡು ಬಳಸುತ್ತಿದ್ದೇನೆ. ಬಹುತೇಕ ಕನ್ನಡ ತಾಣಗಳು ಉಬುಂತುವಲ್ಲಿ ಇರುವುವಾದರೂ ಅಲ್ಲೊಂದು ಇಲ್ಲೊಂದು ವೆಬ್ ಪುಟಗಳು ಬರಹವನ್ನೋ ನುಡಿಯನ್ನೋ ಅಥವಾ ಮತ್ತಾವುದನ್ನೋ ಬಳಸಿ ಬರೆದವಾದಲ್ಲಿ ಓದಲೇ ಆಗುತ್ತಿರಲಿಲ್ಲ . ಬಹುಶಃ ವಿಂಡೋಸ್ ನಲ್ಲಿ ಕೂಡ ಸಂಬಂಧಪಟ್ಟ ಫಾಂಟ್ ಇಲ್ಲದಿದ್ದರೆ ಅಲ್ಲೂ ಕಾಣಿಸಲಿಕ್ಕಿಲ್ಲ. ಅಂಥ ಸಮಯದಲ್ಲಿ
ಇವತ್ತು ಗೂಗಲ್ ನಲ್ಲಿ ಹುಡುಕಿದಾಗ ಸಿಕ್ಕ ಕೊಂಡಿ ಇದು.
http://aravindavk.in/ascii2unicode/
ಆ ಪುಟದಲ್ಲಿ ನುಡಿ/ಬರಹದಲ್ಲಿ ಬರೆದಿದ್ದನ್ನು ಯುನಿಕೋಡ್ ಕನ್ನಡಕ್ಕೆ ಬದಲಾಯಿಸಲು ಸಹಾಯ ಮಾಡುವ ತಂತ್ರಾಂಶ ಇದೆ. ಎಡಗಡೆ ಇರುವ ಜಾಗದಲ್ಲಿ ನುಡಿ/ಬರಹ ದಲ್ಲಿ ಬರೆದ ಪಠ್ಯವನ್ನು ಹಾಕಿ ನಂತರ ಕನ್ವರ್ಟ್ ಅಂತ ಇರುವ ಬಟನ್ ಒತ್ತಿ. ಪಕ್ಕದ ಜಾಗದಲ್ಲಿ ಯುನಿಕೋಡ್ ಗೆ ಬದಲಾವಣೆಗೊಂಡು ಕಾಣಿಸುತ್ತದೆ.
ಅರವಿಂದರಿಗೆ ತುಂಬಾಆಆಆಆಆಆಆ ಧನ್ಯವಾದಗಳು.
ಪ್ರತಿಕ್ರಿಯೆ (1)
ಇದರ ಬಗ್ಗೆ ಸಂಪದದಲ್ಲೇ ಮಾಹಿತಿ ಇತ್ತು. ಅದನ್ನು ಆದರಿಸಿಯೇ ನಾನು ಬರಹದಿಂದ ಬರೆದ ಬರಹಗಳನ್ನು ವರ್ಡ್ಗೆ ಬದಲಾಯಿಸಿದ್ದೇನೆ; ನನ್ನ ಕೆಲವು ಬ್ಲಾಗ್ ಮಿತ್ರರಿಗಾಗಿ. ಇದನ್ನು ಬೇರೆಯವರಿಗೂ ತಿಳಿಯುವಂತೆ ಮಾಡಿ ಅರವಿಂದ್ ಅವರ ಶ್ರಮವನ್ನು ಸಾರ್ಥಕಗೊಳಿಸಿದ್ದೀರ.