ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಒಂದು ಹೊಸ “ರಾಜಕೀಯ ಕ್ರಾಂತಿ” ಹುಟ್ಟಿದಂತಾಗಿ ಕೆಲವರು ಮಾತನಾಡುತ್ತಿದ್ದಾರೆ. ಕೆಲ self-declared Gen Z ನಾಯಕರು, camera ಮುಂದೆ aggressive ಮಾತುಗಳು, meme ರಾಜಕೀಯ, viral clips ಮತ್ತು hashtag activism ಮೂಲಕ ತಮ್ಮನ್ನು “ಹೊಸ ಪರ್ಯಾಯ” ಎಂದು ತೋರಿಸಲು ಪ್ರಯತ್ನಿಸುತ್ತಿದ್ದಾರೆ. ಈ ಹೊಸ trendಗೆ ಕೆಲವರು ವ್ಯಂಗ್ಯವಾಗಿ “Cockroach Janata Party” ಅಥವಾ CJP ಎಂದು ಕರೆಯುತ್ತಿದ್ದಾರೆ.
ಆದರೆ ಒಂದು ಮೂಲ ಪ್ರಶ್ನೆ ಕೇಳಬೇಕು— ನಿಜವಾದ ರಾಜಕೀಯ ಕ್ರಾಂತಿ Instagram reelsಗಳಲ್ಲಿ ಹುಟ್ಟುತ್ತದೆಯಾ?
ಇತಿಹಾಸ ಏನು ಹೇಳುತ್ತದೆ? ಯಾವುದೇ ಚಳುವಳಿ, ಯಾವುದೇ ಕ್ರಾಂತಿ, ಯಾವುದೇ ದೊಡ್ಡ ರಾಜಕೀಯ ಬದಲಾವಣೆ—ಅವು social media studioಗಳಲ್ಲಿ ಹುಟ್ಟಿಲ್ಲ. ಅವು ಬೀದಿಗಳಲ್ಲಿ ಹುಟ್ಟಿವೆ. ಜನರ ನೋವಿನ ನಡುವೆ ಹುಟ್ಟಿವೆ. ಹೋರಾಟ, ತ್ಯಾಗ, ಸಂಘಟನೆ ಮತ್ತು ದಿಕ್ಕುಗಳಿಂದ ಬೆಳೆದಿವೆ. ಒಬ್ಬ ನಾಯಕ Twitter spacesನಲ್ಲಿ ಹುಟ್ಟೋದಿಲ್ಲ. ಒಬ್ಬ ನಾಯಕ ಜನರ ನಡುವೆ ಹುಟ್ಟುತ್ತಾನೆ.
ಇವತ್ತು social media generationನ ದೊಡ್ಡ ಸಮಸ್ಯೆ ಏನೆಂದರೆ, visibilityಯನ್ನೇ leadership ಅಂತ ಭಾವಿಸುತ್ತಿದೆ. Followers ಇದ್ದರೆ influence ಇದೆ ಅಂತಕೊಳ್ಳುತ್ತಿದ್ದಾರೆ. Viral video ಬಂದರೆ ideology ಇದೆ ಅಂತ ಭ್ರಮೆ.
ಆದರೆ reality ತುಂಬಾ ವಿಭಿನ್ನ. ಒಂದು ದೇಶದ ರಾಜಕೀಯವನ್ನು memeಗಳಿಂದ ನಡೆಸಲು ಸಾಧ್ಯವಿಲ್ಲ. ಒಂದು ಸಮಾಜದ ಸಮಸ್ಯೆಗಳನ್ನು podcastಗಳಿಂದ ಪರಿಹರಿಸಲು ಸಾಧ್ಯವಿಲ್ಲ. ಕ್ರಾಂತಿ ಅಂದ್ರೆ aesthetic ಅಲ್ಲ. ಕ್ರಾಂತಿ ಅಂದ್ರೆ struggle.
ಇಂದಿನ ಈ so-called digital revolutionariesನ ಮಾತುಗಳನ್ನು ಗಮನಿಸಿದರೆ, clarityಗಿಂತ confusion ಹೆಚ್ಚು ಕಾಣಿಸುತ್ತದೆ. Anger ಇದೆ. Noise ಇದೆ. ಆದರೆ direction ಇಲ್ಲ. Vision ಇಲ್ಲ. Ground connect ಇಲ್ಲ.
ಒಂದು press meetನಲ್ಲಿ ಎರಡು tough ಪ್ರಶ್ನೆ ಕೇಳಿದ್ರೆ speechless ಆಗುವ ಜನರು, ದೇಶದ ರಾಜಕೀಯವನ್ನು ಬದಲಾಯಿಸುವ ಮಾತು ಮಾಡ್ತಿದ್ದಾರೆ.
ಇದು ರಾಜಕೀಯ ಅಲ್ಲ. ಇದು performance. ಇಲ್ಲಿ ಇನ್ನೊಂದು ದೊಡ್ಡ ಸಮಸ್ಯೆ ಇದೆ—bubble politics.
ಈ ಹೊಸ Gen Z ರಾಜಕೀಯದ ಬಹುಭಾಗ ಒಂದು closed social media ecosystemನಲ್ಲಿ ಬದುಕುತ್ತಿದೆ. ಅವರಿಗೇ ಅವರ opinions echo ಆಗುತ್ತವೆ. Likes ಬರುತ್ತವೆ. Shares ಬರುತ್ತವೆ. ಅದನ್ನೇ “ಜನರ ಬೆಂಬಲ” ಅಂತ ಭಾವಿಸುತ್ತಾರೆ.
ಆದರೆ ಭಾರತ Instagram commentsನಲ್ಲಿ ಬದುಕುವ ದೇಶವಲ್ಲ. ಭಾರತ ಇನ್ನೂ ಬೀದಿಗಳಲ್ಲಿ ಉಸಿರಾಡುವ ದೇಶ. ಒಬ್ಬ ರೈತನ ಸಮಸ್ಯೆ reel ಅಲ್ಲ. ಒಬ್ಬ ಕಾರ್ಮಿಕನ ಸಂಕಷ್ಟ hashtag ಅಲ್ಲ. ಒಬ್ಬ middle-class ಕುಟುಂಬದ ಬದುಕು meme content ಅಲ್ಲ.
ನಿಜವಾದ ರಾಜಕೀಯ ನೆಲದ ಮೇಲೆ ನಡೆಯುತ್ತದೆ. ಮನೆ ಮನೆಗೆ ಹೋಗಬೇಕು. ಜನರ ಕೋಪ ಕೇಳಬೇಕು. ಸಂಘಟನೆ ಕಟ್ಟಬೇಕು. ಸೋಲು ನೋಡಬೇಕು. ವರ್ಷಗಳ ಕಾಲ ಕೆಲಸ ಮಾಡಬೇಕು. ಅಲ್ಲಿಯೇ ನಾಯಕರು ಹುಟ್ಟುತ್ತಾರೆ.
ಇವತ್ತು social media ಮೂಲಕ overnight revolutionary image create ಮಾಡೋದು ಸುಲಭವಾಗಿದೆ. Camera on ಮಾಡಿ system ವಿರುದ್ಧ ಎರಡು aggressive lines ಹೇಳಿದ್ರೆ youth claps ಬರುತ್ತವೆ. ಆದರೆ camera off ಆದಮೇಲೆ ಏನು?
Ground cadre ಇದೆಯಾ? Policy clarity ಇದೆಯಾ? Administrative understanding ಇದೆಯಾ? Ideological consistency ಇದೆಯಾ? ಬಹಳ ಬಾರಿ answer—ಇಲ್ಲ. ಇದೇ ಕಾರಣಕ್ಕೆ ಇಂತಹ political fads ತುಂಬಾ ವೇಗವಾಗಿ rise ಆಗುತ್ತವೆ ಮತ್ತು ಅದಕ್ಕಿಂತ ವೇಗವಾಗಿ disappear ಆಗುತ್ತವೆ.
ಇತಿಹಾಸದಲ್ಲಿ enduring movements ಯಾವುವು ಗೊತ್ತಾ? ಜನರ ನಡುವೆ rooted ಆಗಿದ್ದವು. Ideology ಇದ್ದವು. Discipline ಇದ್ದವು. Sacrifice ಇದ್ದವು. ಆದರೆ ಇಂದಿನ ಕೆಲವು digital movementsಗೆ biggest ideology ಏನು ಗೊತ್ತಾ?
Virality. ಅವರ politics algorithm ಮೇಲೆ ನಿಂತಿದೆ. lgorithm ಬದಲಾದ್ರೆ revolution ಕೂಡ ಮುಗಿಯುತ್ತದೆ.
ಇದೇ “Cockroach Janata Party” ತರದ movementsನ ದೊಡ್ಡ ದುರ್ಬಲತೆ. Noise create ಮಾಡಬಹುದು. Temporary hype create ಮಾಡಬಹುದು. ಆದರೆ sustainable political culture ನಿರ್ಮಿಸಲು ಸಾಧ್ಯವಿಲ್ಲ. ಯಾಕೆಂದರೆ politics is not content creation.
ಒಬ್ಬ ನಿಜವಾದ ನಾಯಕ failure ನೋಡಿರುತ್ತಾನೆ. Jail ನೋಡಿರುತ್ತಾನೆ. ಜನರ ನಡುವೆ insult ನೋಡಿರುತ್ತಾನೆ. Decades struggle ಮಾಡಿರುತ್ತಾನೆ. ಆದರೆ ಇಂದಿನ ಕೆಲವು online revolutionariesಗೆ criticism ಬಂದರೂ meltdown ಆಗುತ್ತದೆ.
ಇದು activism ಅಲ್ಲ. ಇದು curated outrage.
ಇಲ್ಲಿ ಇನ್ನೊಂದು ಅಪಾಯಕಾರಿ trend ಇದೆ—intellectual laziness.
ಸಮಸ್ಯೆಗಳ depthಗೆ ಹೋಗೋದು ಬಿಟ್ಟು, one-line politics ಮಾಡಲಾಗುತ್ತಿದೆ. Economy ಬಗ್ಗೆ half knowledge. Constitution ಬಗ್ಗೆ half knowledge. History ಬಗ್ಗೆ half knowledge. But confidence ಮಾತ್ರ full.
ಇದರಿಂದ politics serious public service ಆಗಿ ಉಳಿಯದೇ, entertainment genre ಆಗಿ ಬದಲಾಗುತ್ತಿದೆ.
ಅತ್ಯಂತ ironic ವಿಷಯ ಏನೆಂದರೆ, system ವಿರುದ್ಧ ಮಾತನಾಡುವ ಈ groups ತಾವೇ social media capitalismನ products. ಅವರ entire politics engagement metrics ಮೇಲೆ survive ಆಗುತ್ತದೆ.
ಅವರಿಗೆ movementಗಿಂತ momentum ಮುಖ್ಯ.
Commitmentಗಿಂತ content ಮುಖ್ಯ.
ಆದರೆ ದೇಶವನ್ನು content ಮೂಲಕ ನಡೆಸಲು ಸಾಧ್ಯವಿಲ್ಲ.
ಭಾರತದಂತಹ ದೇಶದಲ್ಲಿ ರಾಜಕೀಯ ಒಂದು deep social process. Caste realities, economic structures, regional aspirations, governance complexities—ಇವೆಲ್ಲವನ್ನೂ ಅರ್ಥಮಾಡಿಕೊಳ್ಳದೆ “new revolution” ಅಂತ ಘೋಷಣೆ ಕೂಗೋದು childish romanticism.
ಜನರು ಈಗ emotional speechesಗಿಂತ credibility ನೋಡುತ್ತಾರೆ. Angry reelsಗಿಂತ administrative maturity ನೋಡುತ್ತಾರೆ.
ಹೀಗಾಗಿ, ಈ ಹೊಸ digital political bubbles ಕೆಲವು ದಿನ social media occupy ಮಾಡಬಹುದು. Headlines create ಮಾಡಬಹುದು. Urban youth attention ಸೆಳೆಯಬಹುದು.
ಆದರೆ ground reality eventually ಎಲ್ಲವನ್ನೂ test ಮಾಡುತ್ತದೆ.
ಅಲ್ಲಿಯೇ difference ಗೊತ್ತಾಗುತ್ತದೆ—
Influencer ಮತ್ತು leader ನಡುವೆ.
Trend ಮತ್ತು movement ನಡುವೆ.
Noise ಮತ್ತು ideology ನಡುವೆ.
ಕೊನೆಯಲ್ಲಿ ಒಂದು ಸತ್ಯ ಮಾತ್ರ ಉಳಿಯುತ್ತದೆ:
ನಿಜವಾದ ಕ್ರಾಂತಿ camera ಮುಂದೆ ನಡೆಯುವುದಿಲ್ಲ.
ಅದು ಜನರ ನಡುವೆ ನಡೆಯುತ್ತದೆ.
ಮತ್ತು ನೆಲದ ಮೇಲೆ ಹುಟ್ಟದ ರಾಜಕೀಯ, screen scroll ಆದಷ್ಟು ಬೇಗ ಮರೆತು ಹೋಗುತ್ತದೆ
-ಅಭಿಷೇಕ್ ಅಯ್ಯಂಗಾರ್
ಪ್ರತಿಕ್ರಿಯೆ (1)
ಇಷ್ಟೊಂದು ಇಂಗ್ಲಿಷ್ ಬೇಕಿತ್ತೇ ? ಇಂದಿನ ಕನ್ನಡದ ಸ್ಥಿತಿಯನ್ನು ತೋರುವುದೆ ಈ ಬರಹ ?