ಮನೆಯಲ್ಲೇ ಚಾರ್ಜ್ ಮಾಡಬೇಕಾ? ಅಥವಾ ಪಬ್ಲಿಕ್ ಚಾರ್ಜರ್ ಬಳಸಬೇಕಾ? : "EV ತಗೊಂಡರೆ ಮನೆಯಲ್ಲೇ ಚಾರ್ಜರ್ ಹಾಕಿಸಲೇಬೇಕಾ?" ಈ ಪ್ರಶ್ನೆ ನನಗೆ ಆಗಾಗ ಬರುತ್ತದೆ.
ನನ್ನ ಉತ್ತರ: "ಅನಿವಾರ್ಯವಲ್ಲ!" ನಿಮಗೆ ಈ ಉತ್ತರ ಸ್ವಲ್ಪ ವಿಚಿತ್ರ ಅನಿಸಬಹುದು. ಕೆಲವರು EV ಕಾರ್ ಡೆಲಿವರಿ ಆಗುವ ಮುಂಚೆಯೇ ಹೋಂ ಚಾರ್ಜರ್ ಹಾಕುವ ಗಡಿಬಿಡಿ ಮಾಡುತ್ತಾರೆ. ನಾನು ಕಾರ್ ಬಂದ ಎರಡು ತಿಂಗಳ ನಂತರ ಮನೆಯಲ್ಲಿ ಚಾರ್ಜಿಂಗ್ ಸೌಕರ್ಯ ಮಾಡಿಸಿದ್ದು. ಅಲ್ಲಿಯ ವರೆಗೆ ನನ್ನ ಬಳಕೆ ಏನು? ಯಾವ ಸ್ಪೀಡ್ ನಲ್ಲಿ ಚಾರ್ಜ್ ಮಾಡಬೇಕು ಎಂದು ಅಧ್ಯಯನ ಮಾಡಿದ್ದೆ. ಇವೆಲ್ಲವೂ ನೀವು ದಿನಕ್ಕೆ ಅಥವಾ ತಿಂಗಳಿಗೆ ಎಷ್ಟು ಕಿಲೋಮೀಟರ್ ಓಡಿಸುತ್ತೀರಿ ಎನ್ನುವುದರ ಮೇಲೆ ಅದು ಅವಲಂಬಿತವಾಗಿದೆ. ನಿಮ್ಮ ಕಾರು ತಿಂಗಳಿಗೆ ಕೇವಲ ಒಂದು ಸಾವಿರ ಕಿಮೀ ಓಡುವುದಾದರೆ 3 kw ವೇಗದ ಚಾರ್ಜರ್ ಸಾಕು. ಸುಮ್ಮನೆ 7 / 11 kw ಮೇಲೆ ಹಣ ಸುರಿಯಬೇಡಿ. ಅಥವಾ ಚಾರ್ಜರ್ ಕೊಳ್ಳಲೇ ಬೇಡಿ. ಯಾಕೆ ಎಂದು ಮುಂದೆ ಹೇಳುತ್ತೇನೆ.
ಮನೆ ಚಾರ್ಜಿಂಗ್ ಎಂದರೆ ಕೇವಲ ವಿದ್ಯುತ್ ಬಿಲ್ ಅಲ್ಲ, ಬಹಳ ಜನ ಲೆಕ್ಕ ಹಾಕುವುದು ಹೀಗೆ.
"ಮನೆಯ ವಿದ್ಯುತ್ ₹6 ಯೂನಿಟ್.
ಪಬ್ಲಿಕ್ ಚಾರ್ಜಿಂಗ್ ₹15 ಯೂನಿಟ್.
ಹಾಗಾದರೆ ಮನೆ ಚಾರ್ಜಿಂಗ್ ಯಾವಾಗಲೂ ಅಗ್ಗ."
ಅಷ್ಟೇನೂ ಸರಳ ಅಲ್ಲ. ಮನೆ ಚಾರ್ಜಿಂಗ್ಗೆ ಇನ್ನೂ ಕೆಲವು ವೆಚ್ಚಗಳಿವೆ. ಚಾರ್ಜರ್ ಖರೀದಿ, ವಿದ್ಯುತ್ ಲೋಡ್ ಹೆಚ್ಚಿಸುವ ವೆಚ್ಚ (ಬೇಕಾದರೆ) ಹೆಚ್ಚುವರಿ ತಿಂಗಳ Fixed Charges, ಚಾರ್ಜರ್ನ Depreciation ಈ ವೆಚ್ಚಗಳನ್ನೂ ಸೇರಿಸಿ ಲೆಕ್ಕ ಹಾಕಬೇಕು.
ಒಂದು ಉದಾಹರಣೆ ನೋಡೋಣ. ಈ ಕೆಳಗಿನ ಅಂಕಿಸಂಖ್ಯೆ ಬಳಸೋಣ.
7.4 kW AC Charger ಬೆಲೆ – ₹40,000 (ಇದಕ್ಕಿಂತ ಅಗ್ಗ ಹಾಗೂ ಉಚಿತ ಕೂಡ ಸಿಗಬಹುದು)
Charger ಬಾಳಿಕೆ – 5 ವರ್ಷ (ಒಂದೆರಡು ವರ್ಷ ವಾರಂಟಿ ಇರುತ್ತದೆ, ಅದರ ಎರಡರಷ್ಟು ಎಂದು ಅಂದಾಜು ಹಾಕಿದ್ದೇನೆ)
Load extension – ₹15,000 (10 ವರ್ಷಕ್ಕೆ ಎಂದು ಪರಿಗಣಿಸಿದ್ದೇನೆ)
BESCOM Fixed Charges – 7 kW × ₹150 per kw = ₹1,050 / ತಿಂಗಳು
ಮನೆಯ ವಿದ್ಯುತ್ – ₹6 / ಯೂನಿಟ್
Public Charging – ₹15 / ಯೂನಿಟ್
ಕಾರಿನ efficiency – 6 km / ಯೂನಿಟ್
ಈ ಲೆಕ್ಕದ ಪ್ರಕಾರ… ಪ್ರತಿ ತಿಂಗಳು ಸುಮಾರು ₹1,842 ಸ್ಥಿರ ವೆಚ್ಚ (Fixed Cost) ಬರುತ್ತದೆ. ಅದಕ್ಕೆ ಜೊತೆಗೆ ಓಡಿಸಿದ ಪ್ರತಿ ಕಿಲೋಮೀಟರ್ಗೆ ಸುಮಾರು ₹1 ವಿದ್ಯುತ್ ವೆಚ್ಚ.
ಹಾಗಾದರೆ ಯಾವಾಗ ಮನೆ ಚಾರ್ಜಿಂಗ್ ಲಾಭ?
ಮೇಲಿನ ಲೆಕ್ಕದ ಪ್ರಕಾರ...
ತಿಂಗಳಿಗೆ ಸುಮಾರು 1,200–1,250 ಕಿಲೋಮೀಟರ್ಗಿಂತ ಹೆಚ್ಚು ಓಡಿಸುವವರು ಮನೆ ಚಾರ್ಜಿಂಗ್ ಮಾಡಿದರೆ ಹಣ ಉಳಿಸಬಹುದು. ಅದಕ್ಕಿಂತ ಕಡಿಮೆ ಓಡಿಸುವವರಿಗೆ… ಕೇವಲ ಆರ್ಥಿಕ ದೃಷ್ಟಿಯಿಂದ ನೋಡಿದರೆ Public Charging ಕೂಡ ಕೆಟ್ಟ ಆಯ್ಕೆಯಲ್ಲ.
ಹೌದು… ನಾನು ಉದ್ದೇಶಪೂರ್ವಕವಾಗಿ "ಕೇವಲ ಆರ್ಥಿಕ ದೃಷ್ಟಿಯಿಂದ" ಎಂದು ಹೇಳುತ್ತಿದ್ದೇನೆ. ಹಾಗಾದರೆ ಎಲ್ಲರೂ Public Charger ಬಳಸಿಬಿಡೋಣವೇ? ಇಲ್ಲ.
ಮನೆ ಚಾರ್ಜಿಂಗ್ಗೆ ಹಣದಲ್ಲಿ ಅಳೆಯಲಾಗದ ಅನುಕೂಲಗಳಿವೆ. ರಾತ್ರಿ ಮಲಗುವ ಮುನ್ನ Plug ಮಾಡಿದರೆ ಸಾಕು. ಬೆಳಿಗ್ಗೆ Full Charge. Charging Station ಹುಡುಕಬೇಕಿಲ್ಲ. Queue ಇಲ್ಲ. Wallet Recharge ಮಾಡುವ ತಲೆನೋವು ಇಲ್ಲ. App ಕೆಲಸ ಮಾಡುತ್ತಿಲ್ಲ ಎಂಬ ಕಿರಿಕಿರಿ ಇಲ್ಲ. ಸೋಲಾರ್ ಪ್ಯಾನೆಲ್ ಹಾಕಿಸಿದ್ದರೆ ಮನೆಯಲ್ಲಿ ಚಾರ್ಜಿಂಗ್ ಅತ್ಯುತ್ತಮ
ಅಂದರೆ...
ಮನೆ ಚಾರ್ಜಿಂಗ್ ಕೇವಲ ಅಗ್ಗ ಅಲ್ಲ… ಅದು ಅತ್ಯಂತ ಅನುಕೂಲಕರವೂ ಹೌದು. ಪಬ್ಲಿಕ್ ಚಾರ್ಜಿಂಗ್ ಯಾವಾಗ ಉತ್ತಮ? ಕೆಲವರಿಗೆ ಅದು ಉತ್ತಮ ಆಯ್ಕೆಯೂ ಆಗಬಹುದು.
ಉದಾಹರಣೆಗೆ… ತಿಂಗಳಿಗೆ 500–800 km ಮಾತ್ರ ಓಡಿಸುವವರು. Apartment ನಲ್ಲಿ Home Charger ಹಾಕಲು ಅವಕಾಶ ಇಲ್ಲದವರು. Office ನಲ್ಲಿ Charging ಸೌಲಭ್ಯ ಇರುವವರು, ಈಗಾಗಲೇ ಹತ್ತಿರದಲ್ಲಿ ಉತ್ತಮ Public Charger ಇರುವವರು, ಇವರಿಗೆ Charger ಖರೀದಿ ಮಾಡುವ ಅಗತ್ಯವೇ ಇಲ್ಲದಿರಬಹುದು.
ಈ ಲೆಕ್ಕ ಎಲ್ಲರಿಗೂ ಒಂದೇ ಆಗುತ್ತದೆಯೇ? ಖಂಡಿತ ಇಲ್ಲ.
ಈ ಲೆಕ್ಕದಲ್ಲಿ ಬಳಸಿದ ಸಂಖ್ಯೆಗಳು ಉದಾಹರಣೆಗೆ ಮಾತ್ರ.
ನಿಮ್ಮ ಪರಿಸ್ಥಿತಿಯಲ್ಲಿ...
Charger ಬೆಲೆ ಬೇರೆ ಇರಬಹುದು. Fixed Charges ಬೇರೆ ಇರಬಹುದು.
ವಿದ್ಯುತ್ ದರ ಬೇರೆ ಇರಬಹುದು. Public Charging Rate ಬೇರೆ ಇರಬಹುದು. ತಿಂಗಳ ಓಡಾಟವೂ ಬೇರೆ ಇರಬಹುದು. ಆದ್ದರಿಂದ Break-even point ಕೂಡ ಬದಲಾಗುತ್ತದೆ.
ನನ್ನ ಅಭಿಪ್ರಾಯ
EV ಖರೀದಿಸುವ ದಿನವೇ Charger ಖರೀದಿಸಲೇಬೇಕು ಎನ್ನುವ ಅಲಿಖಿತ ನಿಯಮ ಇಲ್ಲ. ಮೊದಲು ನಿಮ್ಮ ಬಳಕೆ ಹೇಗಿದೆ ನೋಡಿ. ಒಂದು ವೇಳೆ ತಿಂಗಳಿಗೆ 1,500 ಅಥವಾ 2,000 km ಓಡಿಸುತ್ತಿದ್ದರೆ... ಖಂಡಿತ ಮನೆ ಚಾರ್ಜಿಂಗ್ ಕಡೆ ಯೋಚಿಸಿ.
ಆದರೆ ತಿಂಗಳಿಗೆ 500–700 km ಮಾತ್ರ ಓಡಿಸುತ್ತಿದ್ದರೆ... ಮೊದಲು Public Charging ಬಳಸಿ ಅನುಭವ ಪಡೆದುಕೊಳ್ಳಿ. ನಂತರ ಅಗತ್ಯವಿದ್ದರೆ Home Charger ಅಳವಡಿಸಬಹುದು.
ಕೊನೆಯ ಮಾತು : EV ಜಗತ್ತಿನಲ್ಲಿ ಒಂದೇ ಉತ್ತರ ಎಲ್ಲರಿಗೂ ಸರಿಹೊಂದುವುದಿಲ್ಲ. ಹೆಚ್ಚು ಓಡಿಸುವವರಿಗೆ Home Charging ಅತ್ಯುತ್ತಮ ಆಯ್ಕೆ. ಕಡಿಮೆ ಓಡಿಸುವವರಿಗೆ Public Charging ಕೂಡ ಸಾಕಷ್ಟು ಉತ್ತಮ ಆಯ್ಕೆಯಾಗಬಹುದು. ನನಗೆ ಅನಿಸುವ ದೊಡ್ಡ ತಪ್ಪು ಕಲ್ಪನೆ ಏನೆಂದರೆ...
"EV ತಗೊಂಡರೆ ಮೊದಲು ₹40,000 ಖರ್ಚು ಮಾಡಿ Charger ಹಾಕಿಸಲೇಬೇಕು."
ಅದು ಎಲ್ಲರಿಗೂ ಸತ್ಯವಲ್ಲ. ಮೊದಲು ನಿಮ್ಮ ಚಾಲನೆಯ ಅಭ್ಯಾಸವನ್ನು ನೋಡಿ. ನಂತರ ಲೆಕ್ಕ ಹಾಕಿ. ಆಮೇಲೆ ನಿರ್ಧಾರ ತೆಗೆದುಕೊಳ್ಳಿ. ಅದೇ ಸರಿಯಾದ ಮಾರ್ಗ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!