ಕನ್ನಡಕ್ಕೆ ಆಗಿಬಂದ ಸಂಸ್ಕೃತ ಪದ ಕನ್ನಡದ ಸ್ವತ್ತೇ . ಅದನ್ನು ಬಳಸಲು ಹಿಂದೆಗೆಯುವುದು ಭಾಷೆಯನ್ನರಿಯದವನ ಲಕ್ಷಣ. ಕನ್ನಡದಲ್ಲಿ ಶಬ್ದಗಳಿಲ್ಲದಿರುವದರಿಂದ ಈ ವಿಷಯ ಆ ವಿಷಯವನ್ನು ಹೇಳಲಾಗುವದಿಲ್ಲ ಎನ್ನುವುದು ನಮ್ಮಲ್ಲಿ ಕೆಲವರ ಅಭಿಪ್ರಾಯ. ಇದು ಕನ್ನಡವನ್ನು ಕಲಿಯದೆ ಅದರ ವಿಚಾರವನ್ನು ಮಾತನಾಡುವುದರ ಫಲ. ರತ್ನಾಕರನು ಕನ್ನಡದಲ್ಲಿ ಜೀವನ , ಮೋಕ್ಷ, ರಾಷ್ಟ್ರ , ಸಂಸಾರವನ್ನು ಕುರಿತ ಎಷ್ಟು ಗಹನವಾದ ವಿಷಯಗಳನ್ನು ಎಷ್ಟು ಸುಲಭವಾದ ಪದಗಳಿಂದ ನಿರೂಪಿಸಿದ್ದಾನೆನ್ನುವುದನ್ನು ನೋಡಿದವರು ಕನ್ನಡವನ್ನು ಕುರಿತು ಈ ಹೀನಾಯವನ್ನು ನುಡಿಯಲಾರರು. ಮಹಾಕವಿ ಕಾವ್ಯವನ್ನು ರಚಿಸಿದ್ದು ಸಾರ್ಥಕವಾಗಬೇಕಿದ್ದರೆ ಅವನ ಶಬ್ದ ಸಂಪತ್ತು , ಅದರ ಹಿಂದಿನ ಭಾವ ಸಂಪತ್ತು ಎಲ್ಲ ಕಿರಿಯರಿಗೆ ಸಿದ್ಧಿಸಬೇಕು. ಅದಾಗದಿದ್ದರೆ ತಾಯಿ ಅಡುಗೆ ಮಾಡಿಟ್ಟು ಮಕ್ಕಳು ಉಣ್ಣದಂತೆ ; ಅಡುಗೆ ಮಾಡಿದ ಶ್ರಮ ವ್ಯರ್ಥ. ಮಾಡಿದ ಜೀವಕ್ಕೆ ತೃಪ್ತಿಯಿಲ್ಲ; ಮಕ್ಕಳ ಹಸಿವಂತೂ ಹಾಗೆಯೇ ಉಳಿಯುವುದು.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಪುಸ್ತಕನಿಧಿ : ಧರ್ಮಸಾಮ್ರಾಜ್ಯಮ್ ಅಥವಾ ಜಪಾನರುನ್ನತಿಗೆ ಮೂಲಾಧಾರ
ಪುಸ್ತಕನಿಧಿ : ತಾರೋತ್ಪತ್ತಿ ನಾಟಕ
ಪುಸ್ತಕನಿಧಿ : ಏಪ್ರಿಲ್ 1960ರ ಕಸ್ತೂರಿ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!