ಬಳುಕುವ ಬಳ್ಳಿಯಂತೆ
ಎಷ್ಟು ಸುಂದರ ನಿನ್ನ ನೋಟ
ರಭಸದಿ ಓಡುವ ಹಾವಿನಂತೆ
ನಿನ್ನ ನೋಡುವ ಕಣ್ಣಿಗೊಂದು ಆಟ
ಮಳೆಗಾಲದ ವೈಯಾರಿ ನೀನು
ಎಲ್ಲಿಂದ ಬಂತು ಈ ವೈಯಾರ?
ಕೆಂಪು ಬಣ್ಣ ಬಳಿದುಕೊಂಡ ಸಿಂಗಾರಿ ನೀನು
ಯಾರು ಮಾಡಿದರು ನಿನಗೆ ಈ ಸಿಂಗಾರ?
ಪ್ರಕ್ರತಿ ವೈಚಿತ್ರ್ಯವೋ ಲೀಲೆಯೋ
ಇದೆಲ್ಲಕ್ಕೂ ನಿನ್ನ ಬಳಿ ಉತ್ತರ
ಆ ಶಿವನ ಜಟೆಯಿಂದ ಧುಮುಕುವ ಗಂಗೆಯೋ
ಅದನ್ನೆಲ್ಲ ನಾ ತಿಳಿಯಲು ಕಾತರ!
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!