ಬೆಳಗಿನ ಆಫೀಸಿಗೆ ಹೋಗುವ ಗಡಿಬಿಡಿಯಲ್ಲಿದ್ದ ಸುರೆಶ್ ಹೆಂಡತಿಯ ಮೇಲೆ ಸಿಡಿ ಮಿಡಿಗುಟ್ಟುತ್ತಿದ್ದ
ಯಾಕ್ರಿ ನನ್ನಮೇಲೆ ಕೋಪ ಮಾಡ್ಕೊಂಡಿದ್ದೀರಿ? ಮುಗ್ದವಾಗಿ ಕೇಳಿದಳು ರೂಪ ಗಂಡನನ್ನು
ಮತ್ತಿನ್ನೇನೆ ನೆನ್ನೆ ರಾತ್ರಿ ಪಾರ್ಟಿಗೆ ಹೋಗಿದ್ದೆವಲ್ಲಾ ಎಲ್ಲರೂ ನನ್ನನ್ನು ನೋಡಿ ಮುಸಿಮುಸಿ ನಗುತ್ತಿದ್ದರು
ಅದಕ್ಕೆ ನಾನೇನು ಮಾಡ್ಬೇಕುರೀ? ನಿನ್ನಿಂದನೇ ಆಗಿದ್ದು ಎಲ್ಲರೂ ಹಾಸ್ಯ ಮಾಡಿ ನಕ್ಕಿದ್ದು
ನೆನ್ನೆ ಪಾರ್ಟಿಯಲ್ಲಿನಾನೇನು ಕೆಟ್ಟದಾಗಿ ನಡಕೋಂಡೆ?
ಯೆಶ್ಟು ಯೋಚಿಸಿದರೂ ರೂಪಾಳಿಗೆ ಕಾರಣ ತಿಳಿಯಲಿಲ್ಲ ಕೊನೆಗೆ ಗಂಡನನ್ನೇ ಕೇಳಿದಳು
ಹೇಳ್ರೀ ನಾನೇನು ನಿಮ್ಮನ್ನು ಅಪಹಾಸ್ಯಕ್ಕೆ ಗುರಿಮಾಡಿದ್ದು
ಮತ್ತಿನ್ನೇನೆ ನನಗಾಗ್ಲೇ ತಲೇಲಿಬಿಳಿ ಕೂದಲುಬಂದಿದೆ ಪಾಪ ಹದಿನೆಂಟು ವರ್ಶದವಳನ್ನ ಮದ್ವೆಯಾಗಿದ್ದಾನೆ? ಅಂತಿದ್ರು (ಹಾಸ್ಯದಿಂದ) ಎಲ್ಲರ
ಕಯ್ಯಲ್ಲೂ ನಿನ್ನ ವಯಸ್ಸು
ಹದಿನೆಂಟು ಎಂದು ಹೇಳ್ಕೊಂಡು ಬಂದಿದ್ದೀಯಂತೆ?
ಹೌದುರೀ ನನಗೆ ಹದಿನೆಂಟರಿಂದ ಮುಂದೆ ಹೋಗುವ ಮನಸ್ಸಿಲ್ಲ
ಅದುಹೇಗೆ ಆಗತ್ತ್ಯೆ
ನೀನು ಹದಿನೆಂಟರವಳ ಹಾಗೆ ಕಾಣಿಸ್ತೀಯ ಎರಡುಮಕ್ಕಳ ತಾಯಿ ನಿನ್ನ ತಲೇಲೂ ಆಗಲೇ ಸಾಕಸ್ಟು ಬಿಳಿಕೂದಲು ಇಣುಕುತ್ತಿವೆಯಲ್ಲಾ?
ಓ..ಅದಾ ಹದಿನೆಂಟೇ ವರ್ಶ ಅಂತ ಕರಾರುವಕ್ಕಾಗಿ ಹೇಳಿಲ್ಲರೀ ಹದಿನೆಂಟು ವರ್ಶ ಕೆಲವು ತಿಂಗಳುಗಳೂ...ಅಂತ ಹೇಳಿದ್ದೆ ಯಾರೂ ಕೆಲವು ತಿಂಗಳುಗಳಂದ್ರೆ ಎಶ್ಟು ಅಂತ ಇದುವರೆಗೂ ಕೇಳಿಲ್ಲ
ಹೌದಾ ಈಗ ನಾನು ಕೇಳ್ತಿದ್ದೀನಿ ಹೇಳೇ
ಅದಾ.. ಅದು.. ಅದು.. 18 ಮತ್ತು 144 ತಿಂಗಳುಗಳು
ಈಗಬೇಸ್ತು ಬೀಳುವ ಸರದಿ ಸುರೇಶನದಾಗಿತ್ತು.
ಸೀತ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಸಂಪದ್ಭರಿತವಾದ ಸಂಪದವೇ
ಋಣವಿದ್ದಷ್ಟೂ...2
ನಗು ಬಂದರೆ ನಕ್ಕುಬಿಡಿ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (3)