ಜೇನು ಮತ್ತು ಇರುವೆಗಳ ಜೀವನ ಕ್ರಮಬದ್ಧವಾಗಿದ್ದು , 'ಜೇನವ್ವನ ಸಂಸಾರ' ಪುಸ್ತಕವು ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ . ಮಕ್ಕಳಿಗೂ ಓದಲು ಸುಲಭವಾಗಿದೆ.
ನಿಮಗೆ ಜೇನುಗಳ ಬಗ್ಗೆ ಎಷ್ಟು ಗೊತ್ತಿದೆ ?
ಜೇನು ಏಳುವದು , ಇಳಿಯುವದು ಅಂದರೆ ? ಜೇನುಹುಳುಗಳು ಗೂಡು ಕಟ್ಟಲು ಗುಂಪು ಗುಂಪಾಗಿ ಹೊರಡುವುದೇ ಜೇನು ಏಳುವುದು . ಒಂದು ಕಡೆ ಜೇನು ಕಟ್ಟಲು ನಿರ್ಧರಿಸಿ ನೆಲೆಯಾಗುವುದೇ ಜೇನು ಇಳಿಯುವುದು.
ಸಾಮಾನ್ಯವಾಗಿ ಪ್ರಾಣಿಗಳು ಸಮಾಜಜೀವಿಗಳಲ್ಲ ; ಒಂಟೊಂಟಿಯಾಗಿಯೇ ಬದುಕುತ್ತವೆ . ತಮ್ಮ ತಮ್ಮ ಜೀವನವನ್ನು ತಾವೇ ನೋಡಿಕೊಳ್ಳುತ್ತವೆ. ಆದರೆ ಜೇನು, ಇರುವೆ , ಗೆದ್ದಲು ಮಾತ್ರ ಸಮಾಜಜೀವಿಗಳು.
ಜೇನುಗಳಲ್ಲಿ ಮೂರು ಲಿಂಗಗಳು , ಒಂದು ರಾಣಿಜೇನು , ಹೆಣ್ಣು . ಒಂದು ಗುಂಪಿಗೆ ಒಂದೇ . ತತ್ತಿಗಳನ್ನಿಡುವುದಷ್ಟೇ ಅದರ ಕೆಲಸ . ಮತ್ತೆ ಗಂಡುಜೇನುಗಳು . ರಾಣಿಜೇನು ಒಂದು ಗಂಡು ಜೇನಿನ ಜತೆ ಒಮ್ಮೆ ಸೇರಿ ಮುಂದೆ ನಾಲ್ಕೈದು ವರ್ಷ ಕಾಲ ನಾಲ್ಕೈದು ಲಕ್ಷ ತತ್ತಿಗಳನ್ನು ಇಡುತ್ತದೆ . ರಾಣಿ ಜೇನಿನ ಜತೆ ಸೇರಿದ ಗಂಡಿನ ಕತೆ ಮುಗಿದೇ ಹೋಯಿತು . ಸತ್ತೇ ಹೋಗುವದು . ರಾಣಿ ಜೇನು ಒಂದು ಗಂಡು ಜೇನಿನ ಜತೆ ಸೇರಿದ ನಂತರ ಉಳಿದ ಗಂಡು ಜೇನುಗಳನ್ನು ಮೂರನೇ ವಿಧವಾದ ಆಳುಜೇನುಗಳು ಕೊಂದು ಬಿಡುತ್ತವೆ.
ಒಂದು ಗೂಡಿನಲ್ಲಿ ನಲವತ್ತರಿಂದ ಎಂಭತ್ತು ಸಾವಿರ ಜೇನುಗಳು ಇರುತ್ತವೆ. ಸಂಸಾರದ ಎಲ್ಲ ಕೆಲಸಗಳೂ ಆಳುಜೇನುಗಳದ್ದು .
ಜೇನುಹುಳಗಳು ಮನುಷ್ಯನಿಗೆ ಕಚ್ಚುವುದಿಲ್ಲ ; ಚುಚ್ಚುತ್ತವೆ. ತಮ್ಮಲ್ಲಿರುವ ಮುಳ್ಳಿನಿಂದ ; ಚುಚ್ಚಿದ ಮುಳ್ಳಿನ ಹಲ್ಲುಗಳು ಗರಗಸದಂತೆ ಒಳಬಾಗಿದ್ದು ಅದನ್ನು ಹೊರಗೆಳೆದುಕೊಳ್ಳಲು ಜೇನುಗಳಿಗೆ ಆಗುವದಿಲ್ಲ ; ಆಗ ಅವು ಸಾಯಲೇಬೇಕಾಗುತ್ತದೆ .
ಹೂವುಗಳು ಯಾವದಿಕ್ಕಿನಲ್ಲಿ ಎಷ್ಟು ದೂರದಲ್ಲಿ ಇವೆ ಎಂದು ಪತ್ತೆ ಮಾಡಿ ಬಂದ ಜೇನುಗಳು ಉಳಿದ ಜೇನುಗಳಿಗೆ ಕುಣಿತದ ಮೂಲಕ ತಿಳಿಸುತ್ತವೆ . ಆ ಕುಣಿತದ ವಿನ್ಯಾಸಗಳನ್ನ ಕೀಟಶಾಸ್ತ್ರಜ್ಞರು ಅರ್ಥೈಸಿದ್ದಾರೆ.
ಹೀಗೆ ಈ ಎಲ್ಲ ವಿಷಯಗಳನ್ನು ಮತ್ತು ಜೇನು ಮೇಣ , ಜೇನುತುಪ್ಪ , ಮಕರಂದ , ಗೂಡಿನ ರಚನೆ , ಉಷ್ಣತೆಯನ್ನು ಮೆಂಟೇನ್ ಮಾಡಿಕೊಳ್ಳುವುದು , ಹೊಸ ಗೂಡು ಕಟ್ಟಿಕೊಳ್ಳುವುದು , ಬೇರೆ ಬೇರೆ ಹವಾಮಾನವನ್ನು ಎದುರಿಸುವುದು, ಶತ್ರುಗಳಿಂದ ರಕ್ಷಣೆ ಹೇಗೆ , ಜೇನುತುಪ್ಪದ ವೈದ್ಯಕೀಯ ಗುಣಗಳು , ಜಗತ್ತಿನಲ್ಲೆಲ್ಲ ಜೇನುತುಪ್ಪದ ಕುರಿತಾದ ನಂಬಿಕೆಗಳು ಇವನ್ನೆಲ್ಲ ಶಾ. ಬಾಲೂರಾವ್ 'ಜೇನವ್ವನ ಸಂಸಾರ' ಪುಸ್ತಕದಲ್ಲಿ ಸರಳವಾಗಿ ತಿಳಿಸಿಕೊಟ್ಟಿದ್ದಾರೆ .
ಆ ಪುಸ್ತಕ ಇಲ್ಲಿದೆ . ಓದಿ . http://dli.iiit.ac.in/cgi-bin/Browse/scripts/use_scripts/advnew/metainfo.cgi?&barcode=5010010052196
ಪ್ರತಿಕ್ರಿಯೆ (3)