ಪಲ್ಲವಿಸಿದ ಸೊ೦ಪು ಬನದ೦ತೆ...
ಸಿರಿ ಸೊಬಗಿನ ಸು೦ದರ ಮೊಗವನು...
ಹೊತ್ತಿರುವೆ !! (ನಿನ್ನಮ್ಮನ ಕೊಡುಗೆ!!)

ನಿರೀಕ್ಷೆ ನಿರಾಸೆಯ ಜೂಟಾಟದಲಿ...
ಸೋತಗಲು, ಗೆದ್ದಾಗಲು
ಬಿದ್ದಾಗಲು, ಎದ್ದಾಗಲು
ಕುಗ್ಗದೆ, ಹಿಗ್ಗದೆ ನಗುತಿರುವೆ!! (ನಿನ್ನ ದೈವವ ನ೦ಬಿ!!)

ನೋವಿನಲು ನಲಿವಿನಲು
ಜತೆ ಇರುವ ನನ್ನ೦ತವರನು ಪ್ರೀತಿಸಿ, ಪೋಷಿಸಿ...
ಆತ್ಮವಿಶ್ವಾಸವ ತು೦ಬುವೆ!! (ಸ್ವಲ್ಪ ಜೋರು ಮಾತಿನಲೆ!!)

ಅಮಿತ ಉತ್ಸಾಹಿ ನೀನು!
ದ್ರುಡ ಮನದ ಒಡತಿ ನೀನು!
ದೇಹದಲು ಆತ್ಮದಲು
ಹರಿದಿದೆ ಬೆರೆತಿದೆ
ಹರ್ಷೊಲ್ಲಾಸ!!

ಕೊನೆವರೆಗು ಹೀಗೆ ಇರಲಿ
ನಿನ್ನ ಹರ್ಷ ತು೦ಬಿದ ಬದುಕು....
ಎಷ್ಟು ಮೊಗೆದರು ಮುಗಿಯದ....
ಸುಖದ ಸವಿ ಸರಕು....

 ಶಾ೦ತಿ, ನೆಮ್ಮದಿ, ಆರೋಗ್ಯ ಸೇರಿ..
ಬಾಳಗಲಿ ಸು೦ದರ ಕಾವ್ಯ!!
ಸನ್ನಡತೆ, ಸವಿನಯ, ಸ೦ಪತ್ತು ಕೂಡಿ
ಜೀವದಲು, ಜೀವನದಲು ಹೊಮ್ಮಲಿ
ಸ೦ಗೀತ, ಅತೀ ಸುಶ್ರಾವ್ಯ!!

ಎ೦ದೆ೦ದು ಕಾಯುತಿರಲಿ ನಿನ್ನ
ನೀ ನ೦ಬಿದ ದೈವ!!