ಸೆಮಿಫೈನಲ್....
ಮೊನ್ನೆ ಐ.ಪಿ.ಎಲ್ ಸೆಮಿಫೈನಲ್ ಬೆಂಗಳೂರು ಚೆನ್ನೈ ಮ್ಯಾಚ್ ನೋಡ್ಬೇಕು ಅಂತ ಮೀಟರ್ (ಮೋಹನ್) ಅವರ ದೊಡ್ಡಮ್ಮನ ಮನೆಗೆ ಹೋಗ್ತೀನಿ ಅಂದ, ಮನೆಯಲ್ಲೆ ಇಂಟರ್ನೆಟ್ ಇದೆಯಲ್ಲೋ ಅದನ್ನ ನೋಡೋದಕ್ಕೆ ಅಲ್ಲಿಗ್ಯಾಕೆ ಹೋಗ್ತೀಯಾ ಇಲ್ಲೇ ಆರಾಮಾಗಿ ನೋಡಪ್ಪ ಅಂತ ನಾನು,ಉಲ್ಲ (ಉಲ್ಲಾಸ್) ಹೇಳಿದ್ವಿ. ಇಲ್ಲ ನೋಡ್ಬೇಕು ಅಂತ ಹೋದ.
ನಾವು ಸ್ಕೋರ್ ನೋಡ್ಕೊಂಡು, ಪೇಪರ್ ಓದ್ಕೊಂಡು ಇದ್ವಿ, ಚೆನ್ನೈ ಬ್ಯಾಟಿಂಗ್ ಆಗಿ ಬೆಂಗಳೂರಿಂದು ಶುರುವಾಗಿ 15 ಓವರ್ ಆಗಿತ್ತು, ಆಗ ಉಲ್ಲಂಗೆ ಫೋನ್ ಬಂತು, ಆಕಡೆಯಿಂದ ಮೀಟರ್ ಸ್ಕೋರ್ ಎಷ್ಟು ಅಂದ ಅದ್ಕೆ ಉಲ್ಲ ಯಾಕ್ಲೇ ಏನಾಯ್ತಲ ಅಂದ. ಇಲ್ಲಿ ಕನ್ನಡನಾಡಿ ನೋಡ್ತಾ ಕುಂತವ್ರೆ ಅಂದ.....
ಫೈನಲ್....
ನಿನ್ನೆ ವೆಂಕ,ಉಲ್ಲ,ಮೀಟರ್,ನಾನು ಮಂಡಕ್ಕಿ, ಬಜ್ಜಿ,ಈರುಳ್ಳಿ ಬೋಂಡ ಮಾಡ್ಕೊಂಡು, ತಿನ್ತಾ, ಹರಟೆ ಹೊಡ್ಕೊಂಡು ಇದ್ವಿ, ಮೀಟರ್ ಅವ್ನ ಫ್ರೆಂಡ್ಗೆ ಫೋನ್ ಮಾಡಿ ಸ್ಕೋರ್ ಎಷ್ಟೋ ( ಬೆಂಗಳೂರು ಹೈದರಾಬಾದ್ ಮ್ಯಾಚ್ )ಅಂದ, ಅವ್ನು ಅದ್ಕೆ, ನಾನು ಹೊರಗಡೆ ಇದೀನಿ ಸ್ಕೋರ್ ಎಷ್ಟೋ ಅಂತ ಮೀಟರ್ನೇ ಕೇಳೋದಾ, ಇವ್ನು 100ಕ್ಕೆ 3 ಅಂತ ಫೋನ್ ಇಟ್ಟ....
ಪ್ರತಿಕ್ರಿಯೆ (1)