ದೇವರು ನಮ್ಮ ಜೀವಕ್ಕೊಂದು ದೇಹ ಕೊಟ್ಟ
ಸಾಧನೆ ಮಾಡಿ ಮುಕ್ತಿ ಪಡೆಯೆಂಬ ಗುರಿಯನಿಟ್ಟ.
ಮುಕ್ತಿ ಪಥದಲ್ಲಿ ಸಾಕಷ್ಟು ಅಡೆತಡೆಗಳನ್ನಿತ್ತ
ಹಾಗೆ ಅರಿಷಡ್ವರ್ಗಗಳ ಸರಮಾಲೆ ಹಾಕಿಬಿಟ್ಟ.
ಬೇಕೆಂತಲೇ ಇಂದ್ರಿಯಗಳ ಹೊರಗೆ ಕೊರೆದ.
ಆದರೆ ಮನುಷ್ಯ ತುಂಬಾ ಸಾಹಸ ಜೀವಿ
ದೈವನಿರ್ಮಿತ ಅಡೆತಡೆ ಸಾಕಾಗದೆಂದಿನಿಸಿ, ಇವ
ಸಿಗರೇಟು , ಬೀಡಿ ಹಚ್ಚಿದ
ಕುಡಿದು ಕುಪ್ಪಳಿಸಿ ಗಟಾರಕ್ಕೆ ಬಿದ್ದ
ಮತ್ತೆ ಎದ್ದು "ಬಾರ್ "ನೆಡಗೆ ನಡೆದ
"ವಯಾಗ್ರ " ಬೇರೆ ಕಂಡು ಹಿಡಿದ
ಕಾಮದ ಕೊಳಚೆಯಲ್ಲಿ ತೇಲಾಡಿದ
ಮುಕ್ತಿಯ ಮಾರ್ಗವನೆ ಮರೆತುಬಿಟ್ಟ.
*********************
ಎಮ್.ಡಿ.ಎನ್.ಪ್ರಭಾಕರ್
******************
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ನೆರಳ ಬೆಳಕಿನಾಟ ಈ ಸಂಸಾರದ ಕೂಟ
ನಮ್ಮ ಬೆಂಗಳೂರು !!!
ವೇದ ಎಂದರೇನು ?
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (2)