ಹೇಗೆ ಕಳಿಯಲಿ ಗೆಳತಿ ನೀನಿಲ್ಲದ ಹೊತ್ತ
ಇಲ್ಲದೇ ನಿನ್ನದೊಂದು ಮುತ್ತ .
ಮನವು ಸುತ್ತಲೂ ಸುಳಿದಾಡಿ ಎಲ್ಲ ಕಡೆ ಅಲೆದಾಡಿ
ಮತ್ತೆ ಬರುವದು ನಿನ್ನ ಸುತ್ತ.

ಕಣ್ಣು ಮುಚ್ಚಿದ ಕ್ಷಣ ಬಂದು ನಿಲ್ಲುತ್ತೀ
ಬಂದೆಯಂದೊಡನೆ ಮಾಯವಾಗುತ್ತೀ
ಸುತ್ತಲೂ ಸುಳಿಯುತ್ತೀ ಹತ್ತಿರವೇ ಇರುತ್ತೀ
ನೀ ಹೆಗೀದ್ದರೂ ಇಲ್ಲವಾಗುತ್ತೀ.

ತೊರೆದು ಬದುಕುವೆನೆಂದು ಹೊರಟುಹೋಗುತ್ತೀ
ಮತ್ತೆ ಕನಸಿನಲಿ ನೆನಪುಗಳ ಮೂಟೆ ಬಿಚ್ಚುತ್ತೀ.

ಕಾಡಿದರೂ ಬರದವಳು ಕೇಳಿದರೂ ಸಿಗದವಳು
ಕಾಡದೆಯೇ ಕೇಳದೆಯೇ ಕನಸಿನಲೀ ಬಂದು ಹೋಗುತ್ತೀ
ಎಚ್ಚರಾದಾಗ ಹಗಲುಗನಸಾಕಿ ಕಾಡುತ್ತೀ
ರಾತ್ರಿಯಕನಸಿನಲಿ ಮತ್ತೆ ಪ್ರತ್ಯಕ್ಷವಾಗುತ್ತೀ
ಹೇಗೆ ಕಳಿಯಲಿ ಗೆಳತಿ ನೀನಿಲ್ಲದ ಹೊತ್ತ
ಇಲ್ಲದೇ ನಿನ್ನದೊಂದು ಮುತ್ತ.