ನಟಿ ಯೊಬ್ಬಳು ನಿನ್ನೆ ಹೆತ್ತಿದ್ದ ಗಂಡು ಮಗು ಈಗ ಹೆಣ್ಣು ಮಗುವಾಗಿದೆಯೇ?

ಈ ಕೊಂಡಿಯಲ್ಲಿ ಗಂಡು ಮಗುವಿದೆ. ಸುದ್ದಿಯಲ್ಲೂ ಗಂಡಿತ್ತು ನಿನ್ನೆ.

ಆದರೆ ಇಂದು ಬೆಳಿಗ್ಗೆ, ಗಂಡು ಕೊಂಡಿಯಲ್ಲಿದೆ. ಸುದ್ದಿಯಲ್ಲಿ ಹೆಣ್ಣಾಗಿದೆ.

 

ಈ ದಿನ ಗಂಡು ಮಗು ಹುಟ್ಟಿದರೆ ಮಗುವಿನ ತಂದೆ ಮತ್ತು ತಾತನಿಗೆ ಅಪಶಕುನ ಅಂತ ಯಾರೋ ಹೇಳಿದ್ರು ಅಂತ ನಮ್ಮ ದೆವ್ವ ಜ್ಞಾನಿ ಗುಂಡ ಹೇಳ್ತಾ ಇದ್ನಂತೆ. ಹಾಗಾಗಿ ಈ ಬದಲಾವಣೇ ನಡೆದಿದೆ ಅಂತ ಆತನ ಅನುಮಾನ ಕೂಡ.

http://thatskannada.oneindia.in/movies/heroine/2009/11/24-actress-radhika-delivers-baby-boy.html

 

ಗುಂಡನ ಕಿವಿಗೆ ಇದೀಗ ಬಿದ್ದ ಬಿಸಿ ಬಿಸಿ ಸುದ್ದಿ:

ಅಂದು ಭವ್ಯ ಭವಿಷ್ಯ ನುಡಿದು ಆ ನಟಿಯ ಬಾಳಿನ ಶುಕ್ರ ದೆಸೆಗೆ ಕಾರಣನಾಗಿದ್ದ ಆ ಜ್ಯೋತಿಷಿಯ ಮೇಲೆ ಈಗ ಒಂದು ವರ್ಗದ ಜನ್ರ ಕೆಂಗಣ್ಣು ಬಿದ್ದಿರೋದ್ರಿಂದ ಆ ಜ್ಯೋತಿಷಿ ತನ್ನ ಸಂಸಾರ ಸಮೇತ ದೇಶ ತೊರೆದು ದೂರದ ಪರದೇಶವನ್ನು ಸೇರಿಕೊಳ್ಳಲು ವಿಮಾನವೇರಿ ಆಗಿದೆಯಂತೆ.....