ರೂಪದಲ್ಲಿ ರತಿಯೇ ಆಗಿರಬೇಕಿಲ್ಲ

ಅಂಗಾಂಗಳೆಲ್ಲಾ ಸರಿ ಇದ್ದರೆ ಸಾಕು.

ಐ.ಎ.ಎಸ್., ಕೆ.ಎ.ಎಸ್. ಆಗಿರಬೇಕಿಲ್ಲ

ವಿದ್ಯಾವಂತೆಯಾಗಿದ್ದರೆ ಸಾಕು.

ಕವಿತ್ರಿಯೇ ಆಗಿರಬೇಕಿಲ್ಲ

ಕವಿತೆಯನ್ನು ಓದುವ ಸಾಮರ್ಥ್ಯವಿದ್ದರೆ ಸಾಕು.

ಸಾಹಿತಿಯೇ ಆಗಿರಬೇಕಿಲ್ಲ

ಸಾಹಿತ್ಯವನ್ನು ಆಶ್ವಾದಿಸುವ ಹೃದಯವಿದ್ದರೆ ಸಾಕು.

ಶ್ರೀಮಂತಳಾಗಿರಬೇಕಿಲ್ಲ

ಹೃದಯ ಶ್ರೀಮಂತಿಕೆ ಇದ್ದರೆ ಸಾಕು.

ಸಂಯಮಿಯಾಗಿರಬೇಕಿಲ್ಲ

ಸಂದೇಹ ಪ್ರವೃತ್ತಿ ಇಲ್ಲದಿದ್ದರೆ ಸಾಕು.

ಒಲವು ವಯ್ಯಾರಗಳ ಪ್ರದರ್ಶನ ಬೇಕಿಲ್ಲ

ೊಲಿದ ಮನ ಮೆಚ್ಚಿದರೆ ಸಾಕು.