ಇವತ್ತು ಏಟಿಎಮ್ ಗೆ ದುಡ್ಡು ತೆಗೆಯಲು ಹೋದರೆ ಕಿಸೆಯಲ್ಲಿ ಎಟಿಎಮ್ ಕಾರ್ಡೇ ಕಾಣಲಿಲ್ಲ. ಎಲ್ಲಿ ಮರೆತಿರುವೆ ಗೊತ್ತಾಗದೆ ಒಂದು ಸಲ ಮನೆಯಲ್ಲೂ ಹುಡುಕಿದ್ದಾಯ್ತು. ಅಲ್ಲೂ ಕಾಣಲಿಲ್ಲ. ನೆನ್ನೆ-ಮೊನ್ನೆ ತಾನೇ ಉಪಯೋಗಿಸಿದ್ದೂ ನೆನಪಿಗೆ ಬಂತು. ಕೂಡಲೆ ಆನ್-ಲೈನ್ ರೆಕಾರ್ಡ್ ನೋಡಿದರೆ, ದೇವರ ದಯ, ಯಾವುದೇ ಅನುಮಾನ ಹುಟ್ಟುವಂತಹ ಎಂಟ್ರೀ ಕಾಣಲಿಲ್ಲ. ಹೇಗೇ ಇರಲಿ, ಒಮ್ಮೆ ಬ್ಯಾಂಕಿಗೆ ಹೋಗಿ ಹೊಸ ಎಟಿಎಮ್ ಕಾರ್ಡ್ ತೆಗೆದುಕೊಳ್ಳೋಣ ಅಂತ ಹೋದೆ.
ಸರಿ ಎಲ್ಲ ವಿವರಗಳನ್ನು ಕೊಟ್ಟಮೇಲೆ, ಕೌಂಟರ್ನಲ್ಲಿದ್ದಾಕೆ ಮಾಡಬೇಕಿದ್ದ ಸಹಾಯ ಮಾಡಿ ಮುಗಿಸಿ "ಹುಟ್ಟು ಹಬ್ಬದ ಶುಭಾಶಯಗಳು! ನಾಳೆಗೆ ಏನು ವಿಶೇಷ?" ಅಂದಳು. ನಾಳೆ ಹುಟ್ಟುಹಬ್ಬ ಆಚರಿಸುವ ಯಾವುದೇ ಯೋಚನೆಯಿಲ್ಲದ ನಾನು :) ಒಂದು ಕ್ಷಣ ತಬ್ಬಿಬ್ಬಾದರೂ, "ಥ್ಯಾಂಕ್ಸ್" ಹೇಳಿ ಜಾಗ ಖಾಲಿ ಮಾಡಿದೆ.
............
ಆದರೆ ಮೇ-ನಾಕರಂದು ನನಗೆ ತುಂಬಾ ಬೇಕಾದವರೊಬ್ಬರು ಹುಟ್ಟಿದ ದಿನ. ಅವರೇನು ನಮ್ಮ ನೆಂಟರು ಇಷ್ಟರಲ್ಲ! ಅವರು ಇದ್ದಿದ್ದರೆ, ಈಗ ೨೪೩ ವರ್ಷ ಆಗಿರ್ತಿತ್ತು ___LINK_OPEN_title="ರಾಗ ಸುಧಾರಸ" href="http://neelanjana.wordpress.com/2010/05/03/raga-sudharasa/" target="_blank"___ಅವರು ಯಾರು, ಅವರು ಯಾಕೆ ನನ್ಗೆ ತುಂಬಾ ಬೇಕಾದವರು ಅಂತ ಹೇಳ್ತಿದೀನಿ ಅಂತ ಕುತೂಹಲ ಇದ್ರೆ ಇಲ್ಲಿ ಚಿಟಕಿಸಿ ನೋಡಿ. :)
-ಹಂಸಾನಂದಿ
ಪ್ರತಿಕ್ರಿಯೆ (6)