ನನ್ನ ಹಿಂದಿನ ಬ್ಲಾಗು ತೀರ ಅನಗತ್ಯವೇ ಆಗಿತ್ತು . ಈ ಬ್ಲಾಗೂ ಕೂಡ ಅಗತ್ಯವಿಲ್ಲವೇನೋ ? ಆದರೆ ನಾನು ಮೌನಿಯಾಗಿರುವುದು ಕೂಡ ತಪ್ಪೇನೋ ಅಂತ ಈ ಕೆಲವು ಸಾಲು ಬರೆಯುತ್ತಿದ್ದೀನಿ.
ನಾನು ನಾಲ್ಕೈದು ವರ್ಷಗಳಿಂದ ಸಂಪದದ ಸಂಪರ್ಕದಲ್ಲಿ ಇದ್ದೇನೆ . ನಾನು ಓದಿ ಹಂಚಿಕೊಳ್ಳಬೇಕೆನಿಸಿದ ಒಳ್ಳೆಯ ವಿಷಯಗಳನ್ನು ಸಂಗ್ರಹಿಸಿ ಬರೆದದ್ದೇ ಹೆಚ್ಚು . ಸ್ವಂತಿಕೆಯ ಬರಹಗಳು ಬಹಳ ಕಡಿಮೆ. ಇತ್ತೀಚೆಗೆ ಹೊಸ ಬ್ಲಾಗು ಬರಹಗಳನ್ನು ನಾನು ಬರೆಯದೇ ಇರುವುದಕ್ಕೆ ಇದೇ ಕಾರಣ . ಹಳೆಯ ಸ್ಟಾಕ್ ಖಾಲಿ ಆಗಿದೆ. ಹೊಸತೇನೂ ಸಿಕ್ಕಿಲ್ಲ . ಓದು ಕಡಿಮೆ ಆಗಿರುವುದೂ ಒಂದು ಕಾರಣ .
ಯಾರಿಗಾದರೂ ಏನಾದರೂ ಉಪಯೋಗ ಆಗಲೆಂದು ಕನ್ನಡ ಸಾಹಿತ್ಯ.ಕಾಂ ಗಾಗಿ ಬರಹಗಳನ್ನು ತಿದ್ದಿ ಕೊಡುವುದು , ಕನ್ನಡ ಪದಪರೀಕ್ಷಕ ಕ್ಕಾಗಿ ಶಬ್ದಗಳನ್ನು ಸೇರಿಸಿರುವುದು , ಲೀನಕ್ಸ್ ಕನ್ನಡ ಆವೃತ್ತಿಗಾಗಿ ವಾಕ್ಯಗಳನ್ನು ಅನುವಾದ ಮಾಡುವುದು , ಈಗ ಒಂದೂವರೆ ವರ್ಷದಿಂದ ಹರಿದಾಸ ಸಂಪದ ( haridasa.in ) ಗೆ ಸಾಹಿತ್ಯ ಸೇರಿಸುವುದನ್ನ ಮಾಡುತ್ತ ಇದ್ದೇನೆ .
ನಾನು ಸಾಮಾನ್ಯವಾಗಿ ವಾದವಿವಾದಗಳಲ್ಲಿ ಪಾಲ್ಗೊಳ್ಳುತ್ತಿಲ್ಲ . ಇದಕ್ಕೆ ಇಂಟರ್ನೆಟ್ ಯಾವಾಗಲೂ ಲಭ್ಯ ಇರದಿರುವುದೂ , ನನಗೆ ವಾದವಿವಾದಗಳಲ್ಲಿ ಭಾಗವಹಿಸುವ ಶಕ್ತಿಯೂ , ಅದಕ್ಕೆ ಬೇಕಾದ ಸಹನೆಯೂ ಇಲ್ಲದಿರುವುದೂ ಕಾರಣಗಳು .
ಸಂಪದದಲ್ಲಿ ಬಹುದಿನಗಳಿಂದ ಏನೂ ಬರೆಯದೇ ಇದ್ದು ಏನಾದರೂ ಬರೆಯಬೇಕೆಂಬ ಆತುರವೋ , ಇತ್ತೀಚೆಗೆ ಸಂಪದದಲ್ಲಿ ಕಿರುಕವನಗಳ ಬಂಪರ್ ಫಸಲು ಕಾರಣವೋ ಈ ಬ್ಲಾಗ್ ಅನ್ನು ಪೋಸ್ಟ್ ಮಾಡಿಬಿಟ್ಟೆ . ಈ ಸಾಲುಗಳು ನೆನೆದಾಗ ನನ್ನ ತುಟಿ ಅರಳಲು ಕಾರಣವಾಗುತ್ತವೆ .
ಕಾಗೆಗಳು ಕಿರಿಚುತಿವೆ ಕಾ ಕಾ ಎಂದು ,
ಕೇಳದಿರು ನನ್ನ ನೀ ಏಕೆಂದು
ಇದು - ಕವಿಗಳ ಬಗ್ಗೆ ವಿಡಂಬನೆಯ ಮಾತು .
ಇನ್ನೊಂದು - ಕವನ ಬರೆಯಲೇ ಬೇಕೆಂದು ಕೂತು , ಬರೆಯಲಾಗದಿರುವಿಕೆಯ ಬಗೆಗೆ ಅವನ ಸಹಜ ಉದ್ಗಾರದ ಮಾತು , ಇಲ್ಲಿ ಪ್ರಾಸವೂ ಇದೆ , ಸಾಮಾನ್ಯವಾಗಿ ಉತ್ತರ ಕರ್ನಾಟಕದ ಜನರು ಉದ್ಗಾರವೂ ಇದೆ . ಅಲ್ಲಿ ಯಾವ ಕೀಳು ಅರ್ಥವೂ ಉದ್ದೇಶವೂ ಇಲ್ಲ . ಇಂಗ್ಲೀಷಿನಲ್ಲಿ ನಾಲ್ಕಕ್ಷರದ ಅನೇಕ ಉದ್ಗಾರಗಳನ್ನು ಮಾಡೋದಿಲ್ಲವೇ ಹಾಗೆ. ಹಾಗೆಂದು
ಉತ್ತರ ಕರ್ನಾಟಕದ ಎಲ್ಲರೂ ಈ ಶಬ್ದಗಳನ್ನು ಬಳಸುತ್ತಾರೆಂದು ತಿಳಿಯುವುದಾಗಲೀ ಹಳಿಯುವುದಾಗಲೀ ಮಾಡಬೇಕಿಲ್ಲ . ನಾನೇ ಈ ಶಬ್ದವನ್ನು ಎಂದಿಗೂ ಬಳಸಿಲ್ಲ ; ಬಳಸುವುದಿಲ್ಲ . ( ಅಂದ ಹಾಗೆ ಈ ಸಮಯಕ್ಕೆ ನನ್ನೊಬ್ಬ ಗೆಳೆಯನ ನೆನಪಾಗುತ್ತದೆ - ಅವನ ಬಾಯಲ್ಲಿ ಬರಬಹುದಾದ ಅತೀ ಕೆಟ್ಟ ಬೈಗುಳವೆಂದರೆ - ಅವಿವೇಕಿ ! )
ಅದೇಕೋ ಈ ಎರಡೂ ಸಾಲುಗಳನ್ನು ಹಾಕಿಬಿಟ್ಟೆ . ಆಮೇಲೆ ತೆಗೆದೂ ಬಿಟ್ಟೆ . ಪ್ರತಿಕ್ರಿಯೆಗಳೂ , ಮರುಪ್ರತಿಕ್ರಿಯೆಗಳೂ , ಚರ್ಚೆಯೂ , ಒಂದಿಷ್ಟು ಕಹಿಯೂ ಉಂಟಾಯಿತು . ಸರಿ ತಪ್ಪು ಏನೇ ಇರಲಿ , ಕಹಿ ವಾತಾವರಣಕ್ಕೆ ಕಾರಣನಾದುದಕ್ಕೆ ವಿಷಾದವಿದೆ. ಕ್ಷಮೆ ಇರಲಿ .
ಆದರೆ ಕೆಲವು ಒಳ್ಳೆಯ ವಿಚಾರಗಳೂ ಅಲ್ಲಿ ಬಂದವು .
ನನ್ನ ಬಗೆಗೆ ಅಭಿಮಾನವನ್ನು ತೋರಿದವರಿಗೂ 'ನನ್ನಿಂದ' ಇಂತಹ ಬರಹಗಳನ್ನು ನಿರೀಕ್ಷಿಸಿರದವರಿಗೂ ಶುಭ ಹಾರೈಕೆಗಳು .
ಇನ್ನು ಆ ಬಗ್ಗೆ ಚರ್ಚೆ ಮುಗಿಯಲಿ.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಪುಸ್ತಕನಿಧಿ : ಧರ್ಮಸಾಮ್ರಾಜ್ಯಮ್ ಅಥವಾ ಜಪಾನರುನ್ನತಿಗೆ ಮೂಲಾಧಾರ
ಪುಸ್ತಕನಿಧಿ : ತಾರೋತ್ಪತ್ತಿ ನಾಟಕ
ಪುಸ್ತಕನಿಧಿ : ಏಪ್ರಿಲ್ 1960ರ ಕಸ್ತೂರಿ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (5)