ಮನೆಯಲ್ಲೊಂದು ಕಿಟಕಿ ; ಕಿಟಕಿಗೆ ಫಿಕ್ಸ್ ಮಾಡಿದ ಗಾಜು- ಅಂದರೆ ತೆರೆಯಲು ಬಾರದು. ಈ ಕಿಟಕಿಯ ಚೌಕಟ್ಟಿಗೆ  ಈಚೆ ಒಂದು ನೆಟ್ಲಾನ್  ( ಪ್ಲಾಸ್ಟಿಕ್ ಸೊಳ್ಳೆ ಪರದೆ) .ಗಾಜು ಮತ್ತು ನಡುವೆ  ಒಂದು ಜೇನ್ನೊಣ   ಸಿಕ್ಕಿ ಹಾಕಿಕೊಂಡಿದೆ. ಅದನ್ನು ಕೊಲ್ಲಲು ಇತ್ತ ಒಂದು ಬೆಕ್ಕು  ಕಾದುಕೊಂಡಿದೆ.  ನೆಟ್ಲಾನ್  ತೆರೆದು  ಜೇನುನೊಣವನ್ನು  ಮುಕ್ತಗೊಳಿಸಬೇಕೆಂದರೆ ಜೇನು ನಮ್ಮ ಬೆಕ್ಕಿಗೆ  ಕಡಿಯಬಹುದು. ಅಥವಾ ಬೆಕ್ಕು ಅದನ್ನು  ಕೊಲ್ಲಬಹುದು. ಇಕ್ಕಟ್ಟಿನಲ್ಲಿ ಏನೂ‌ ಮಾಡಲಿಲ್ಲ. ಇಪ್ಪತ್ತನಾಲ್ಕು ಘಂಟೆಗಳ ನಂತರ ಜೇನುನೊಣವು ಅಲ್ಲೇ ಸತ್ತು ಹೋಗಿತ್ತು. ಬೆಕ್ಕು ಕೂಡ ಅದೆಂತೋ ಬಲು ಎತ್ತರದಿಂದ ಬಿದ್ದು ಸತ್ತುಹೋಗಿತ್ತು.