ಬೆಕ್ಕಿನ ಮರಿ
ಕಾಲೇಜಿಗೆ ರಜವಿತ್ತು.ಎಲ್ .ಕೆ.ಜಿ.ಒದುವ ಮಗಳಿಗೂ ರಜವಿದ್ದುದರಿಂದ ಮಧ್ಯಾಹ್ನ ಊಟ ಮಾಡಿಸಿ ಅವಳಿಗೆ ಕಥೆ ಹೇಳಿ ಮಲಗಿಸುವುದು ಅಭ್ಯಾಸವಾಗಿತ್ತು. (ಶ್ರೀಮತಿ ಕೆಲಸಕ್ಕೆ ಹೋಗಿದ್ದರಿಂದ.......) ಆ ದಿನ ಬೆಳಗ್ಗೆಯಷ್ಟೆ ಅವಳು ಮುದ್ದಾದ ಬೆಕ್ಕಿನ ಮರಿಯೊಂದನ್ನು ನೋಡಿ ಅದರಿಂದ ಆಕರ್ಷಿತಳಾಗಿ ನನಗದು ಬೇಕೇ ....ಬೇಕು ಎಂದು ಹಟ ಹಿಡಿದಿದ್ದಳು.ಅವಳ ಈ ಹಟದಿಂದ ತಪ್ಪಿಸಿಕೊಳ್ಳಲು ಅವಳನ್ನು ಮಲಗಿಸುತ್ತಾ "ನಾನೂ ಕೂಡಾ ಚಿಕ್ಕವನಾಗಿದ್ದಾಗ ಹೀಗೆಯೇ ಬೆಕ್ಕಿನ ಮರಿಯೊಂದನ್ನು ನೋಡಿ ನನಗದು ಬೇಕೇ.....ಬೇಕು ಎಂದು ಹಟ ಹಿಡಿದಿದ್ದೆ.ಅದನ್ನು ಹಿಡಿದುಕೊಳ್ಳಲು ಕೂಡಾ ಹೋದೆ.ಆದರೆ ಆಗ ಆ ಬೆಕ್ಕಿನ ಮರಿಯ ಅಮ್ಮ ಅದೆಲ್ಲಿತ್ತೋ ಎನೋ....ಹಾರಿ ಬಂದು ನನ್ನ ಕೈ ಪರಚಿಬಿಡ್ತು..ಬಹುಶಃ ಆ ಗಾಯವೆಲ್ಲೋ ಮಾದಿರಬೇಕು......ನೀನೇನಾದರೂ ಹಿಡಿದುಕೊಳ್ಳಲಿಕ್ಕೆ ಹೋದರೆ ನಿನಗೂ ಕೂಡಾ ಪರಚಿಬಿಡುತ್ತೆ.....ಗೊತ್ತಾ.." ಎಂದೆ.
ಅಲ್ಲಿಯವರೆಗೂ ಕಣ್ಣರಳಿಸಿಕೊಂಡು ಕಥೆ ಕೇಳುತ್ತಿದ್ದವಳು ಸುಮ್ಮನಾಗಿ "ಹೋಗಲಿ ಬಿಡಪ್ಪಾ.."ಎಂದಳು.ಬಹುಶಃ ಸಮಾಧಾನವಾದಳು ಅನ್ನಿಸುತ್ತೆ ಎಂದುಕೊಂಡು ಕಣ್ಣು ಮುಚ್ಚಿಕೊಂಡರೆ,"ಅಪ್ಪಾ....ಅಪ್ಪಾ..ಒಂದು ನಿಮಿಷ ......ನಾವು ಬೆಕ್ಕಿನ ಮರಿಯನ್ನು ಹಿಡಿದುಕೊಳ್ಳಲಿಕ್ಕೆ ಹೋಗ್ತೀವಾ.....ಆಗ ಅದರ ಅಮ್ಮ ಬರುತ್ತಾ.....ಆಗ ನೀನು nail cutter ತೆಗೆದುಕೊಂಡು ಅದರ ಉಗುರುಗಳನ್ನು ಟಕ್....ಟಕ್....ಎಂದು ಕಟ್ ಮಾಡಿಬಿಡು..."ಎಂದು ಬಿಡೋದೇ....!
ನಾನು ಅವಳಿಗೆ ಕಥೆ ಹೇಳುತ್ತಿದ್ದೆನೋ.........ಅವಳೇ ನನಗೆ ಕಥೆ ಹೇಳುತ್ತಿದ್ದಾಳೋ.....ತಿಳಿಯದೆ ಕಣ್ಮುಚ್ಚಿದ್ದೆ........!
ಪ್ರತಿಕ್ರಿಯೆ (6)