ಪ್ರತೀ ವರ್ಷ ಅಂದ್ಕೋತೀನಿ ಕೃಷ್ಣಾಷ್ಟಮಿಯ ಹೊತ್ತಿಗೆ ಒಂದು ಒಳ್ಳೇ ಬರಹ ಬರೀಬೇಕು - ಹರಿದಾಸರು ಕಂಡ ಕೃಷ್ಣನ ಬಗ್ಗೆ ಅಂತ. ಆ ಬಗ್ಗೆ ನೂರಾರು ಜನ ಬರ್ದಿದಾರೆ ಅಂದ್ರಾ? ಹೌದು. ಬರೆದಿದ್ರೇನಂತೆ. ನನ್ನ ಹಾಡು ನನ್ನದು - ನನ್ನ ಮಾತು ನನ್ನದು - ನನ್ನ ನೋಟ ನನ್ನದು - ನನ್ನ ಧಾಟಿ ನನ್ನದು ಅಂತ ಅಂದ್ಕೊಳೋದಪ್ಪ! ಆದ್ರೆ ಯಾಕೋ ಕೃಷ್ಣನಿಗೆ ಅದರ ಮೇಲೆ ಮನಸ್ಸಿಲ್ಲ ಅನ್ಸತ್ತೆ. ಯಾಕಂದ್ರೆ ಎಂತೆಂತಹವರೋ ಅವನ ಬಗ್ಗೆ ಹಾಡಿಬಿಟ್ಟಿರೋವಾಗ ನನ್ನ ನಾಕು ಸಾಲು ಇದ್ರೇನಂತೆ ಇಲ್ದಿದ್ರೇನಂತೆ ಅಂತಲೇ ಇರಬೇಕು, ಎರಡು ಮೂರು ವರ್ಷದಿಂದ ನೋಡ್ತಿದೀನಿ, ಈ ಗೋಕುಲಾಷ್ಟಮಿ ಬರೋ ಹೊತ್ತಿಗೇ ಇನ್ನೇನೋ ಜರೂರಾದ ಕೆಲಸವೋ ಮತ್ತೊಂದೋ ಅಂಟ್ಕೊಳತ್ತೆ. ಅಂತೂ ಇಂತೂ ಕುಂತೀ ಮಕ್ಕಳಿಗೆ ರಾಜ್ಯವಿಲ್ಲ ಅನ್ನೋ ತರಹ.
ಇದೆಲ್ಲ ಇರಲಿ. ಹೆಚ್ಚು ಬರೆಯಕ್ಕಾಗದಿದ್ರೇನಂತೆ- ಒಂದು ನಾಕು ಒಳ್ಳೇ ಹಾಡುಗಳನ್ನಾದರೂ ಕೇಳಬಹುದಲ್ಲ ಈ ಸಮಯದಲ್ಲಿ ಅನ್ನಿಸಿತು. ಅದಕ್ಕೇ ನನ್ನ ಕಂ(ಇಂ)ಗ್ಲಿಷ್ ಬ್ಲಾಗಿನಲ್ಲಿ ಬರೆದ ಒಂದು ಪುಟಾಣಿ ಬರಹಕ್ಕೆ ಇಲ್ಲಿಂದ ಕೊಂಡಿ ಹಾಕಿದೇನೆ. ಆಸಕ್ತರು ಈ ಕೆಳಗಿರುವ ಕೊಂಡಿಯನ್ನು ಚುಟುಕಿಸಿ, ಹೋಗಿ, ಕೇಳಿ ಸಂತೋಷಿಸಿ.
___LINK_OPEN_title="ಗಾನಮೂರ್ತಿ" href="http://neelanjana.wordpress.com/2010/08/31/%E0%B2%97%E0%B2%BE%E0%B2%A8%E0%B2%AE%E0%B3%82%E0%B2%B0%E0%B3%8D%E0%B2%A4%E0%B2%BF/" target="_blank"___ಗಾನಮೂರ್ತಿ - ಕೃಷ್ಣಾಷ್ಟಮಿಯ ಸಮಯಕ್ಕಿಷ್ಟು ಹಾಡುಗಳು.
ಎಲ್ಲರಿಗೂ ಕೃಷ್ಣಾಷ್ಟಮಿ ಚೆನ್ನಾಗಿ ಕಳೆಯಲೆಂಬ ಹಾರೈಕೆಗಳು.
-ಹಂಸಾನಂದಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!