ಗೂಗಲ್ ಕ್ರೋಮ್ ತಂಡದವರು ಇಂಟರ್ನೆಟ್ ಕುರಿತ ತೀರ ಸಾಮಾನ್ಯ ವಿಷಯಗಳಲ್ಲಿ ಇಪ್ಪತ್ತು ವಿಷಯಗಳನ್ನು ಸುಲಭವಾಗಿ ತಿಳಿಯುವಂತೆ ಒಂದು ಪುಸ್ತಕವನ್ನು ರೆಡಿ ಮಾಡಿದ್ದಾರೆ. ಈ ಪುಸ್ತಕವನ್ನು ನೀವು ನೇರ ಆನ್ಲೈನ್ ಓದಬಹುದು. ಇಂಟರ್ನೆಟ್ ಬೆಳವಣಿಗೆಗೆ ಕಾರಣವಾದ ಒಂದು ಟೆಕ್ನಿಕಲ್ ಪೇಪರ್ ಹೊರಬಂದು ಇಲ್ಲಿಗೆ ಇಪ್ಪತ್ತು ವರ್ಷಗಳಾದ ನೆನಪಿಗೆ ಇದನ್ನು ಗೂಗಲ್ ಹೊರತಂದಿದೆಯಂತೆ.
ಟಿಸಿಪಿ/ಐಪಿ ಅಂದರೇನು? ಕ್ಲೌಡ್ ಕಂಪ್ಯೂಟಿಂಗ್ ಅಂದರೇನು? ಬ್ರೌಸರುಗಳಲ್ಲಿ ಬ್ಯಾಂಕ್ ಹಾಗು ಇ-ಕಾಮರ್ಸ್ ವೆಬ್ಸೈಟುಗಳಿಗೆ ಭೇಟಿ ನೀಡುವಾಗ ಏನೆಲ್ಲ ಗಮನದಲ್ಲಿ ಇಟ್ಟುಕೊಂಡಿರಬೇಕು ಎನ್ನುವುದಲ್ಲದೆ ಬ್ರೌಸರ್ ಹಾಗು ಮುಕ್ತ ತಂತ್ರಾಂಶಗಳ ಕುರಿತ ಒಂದು ಪುಟ್ಟ ಅಧ್ಯಾಯ ಕೂಡ ಇದೆ.
ತಾಂತ್ರಿಕ ವಿಷಯಗಳು ಇದುವರೆಗೂ ಅರ್ಥವಾಗದವರಿಗೆ ಈ ಪುಸ್ತಕ ಪುಟ್ಟ ಕೈಪಿಡಿಯಂತಿದೆ. ತಪ್ಪದೇ ಓದಿ.
ತಂತ್ರಜ್ಞಾನ ಆಸಕ್ತರಿಗೆ ಈ ಪುಸ್ತಕ HTML5ನಲ್ಲಿ ರೆಡಿ ಮಾಡಿರುವರೆಂಬ ಸುದ್ದಿ ಕೇಳಿ ಖುಷಿಯಾಗದೇ ಇರದು.
ಪುಸ್ತಕ ಓದಲು ಕ್ಲಿಕ್ ಮಾಡಿ:
http://www.20thingsilearned.com/
ಮತ್ತಷ್ಟು ಆಸಕ್ತಿ ಇರುವವರಿಗೆ ಇದೋ ಟಿಮ್ ಬರ್ನಸ್ ಲೀ ಸರಿಯಾಗಿ ಇಪ್ಪತ್ತು ವರ್ಷಗಳ ಹಿಂದೆ ಮಂಡಿಸಿದ ಪ್ರಪೋಸಲ್.
ಪ್ರತಿಕ್ರಿಯೆ (1)
For the best viewing experience, please upgrade to the latest version of your browser or download a modern browser and try launching this site again. upgrade ಒತ್ತಿದರೆ ಬೇರೆ ಬ್ರೌಸರ್ ಇನ್ಸ್ಟಾಲ್ ಆಗುತ್ತದೆಯೇ ಅಥವಾ ಫೈರ್ಫಾಕ್ಸ್ನ ಹೊಸ ಆವೃತ್ತಿ ಇನ್ಸ್ಟಾಲ್ ಆಗುತ್ತದೆಯೆ? (ನಾನು ಬಳಸುತ್ತಿರುವುದು Firefox 3.5.3) ಆದರೂ ಆ ಪುಟದಲ್ಲಿರುವ ವಿಷಯಗಳೆಲ್ಲಾ ನನಗೆ ಚೆನ್ನಾಗಿಯೇ ಕಾಣುತ್ತಿದೆ! :-)