ಚೊಚ್ಚಲ ಲೇಖನ ಪ್ರಕೃತಿಗೆ ನಮನ !!
ತನ್ನ ಹುಟ್ಟನ್ನು ತನ್ನ ಪ್ರಭೆಯಿಂದಲೇ ತಿಳಿಸುವಂತೆ
ಹಕ್ಕಿಗಳ ಇಂಚರದ ಮೇಳದೊಡನೆ ಮೂಡಣದಿ ಮೂಡಿಬರುವನು,
ಕವಿಗಳ ಕಲ್ಪನೆಯ ಸಾರಥಿಯಾಗಿ, ಭಾವನೆಗಳ ಹರಿಕಾರನಾಗಿ, ಚಿಣ್ಣರ ಕಣ್ಣಿನ ಹಣ್ಣಾಗಿ,
ಲಲನೆಯರ ಕಣ್ಣಿನ ಮುದವಾಗಿ, ದಿಗಂತದಲ್ಲಿ ಹೆಜ್ಜೆಯಿಡುತಾನೆ ನಮ್ಮ ಸೂರ್ಯ !
ಪ್ರಕೃತಿಯ ಅರಮನೆಯ ದೀಪದಂತೆ ವಿಭ್ರಾಜಮಾನನಾಗಿ!
ಜೀವರಾಶಿಯೆಲ್ಲದರ ಚೈತನ್ಯನಾಗಿ - ಆಸ್ತಿಕರ ಪ್ರಾರ್ಥನೆಯ ವಿಶೇಷನಾಗಿ
ಹಗಲಿಗೆ ಹಿತವಾಗಿ - ಸಂಜೆಗೆ ತಂಪಾಗಿ - ಮಧ್ಯದಲಿ ಹುರುಪಿನ ಸಾಕ್ಷಿಯಾಗಿ
ಜೀವನದ ಹಂತಗಳ, ಮೌನದಲೆ ಸಾರುತಿಹ ಜೀವಲೋಕಕೆ ಗುರುವು ನಮ್ಮ ಸೂರ್ಯ !
ಸ್ವಪ್ನಗಳ ಸಾರ್ಥತೆಗೆ ಶ್ರಮಿಸುವುದೆ ಸಾಧನವು, ಜಡತನವ ತ್ಯಜಿಸಿರೈ ಎಂದು ತಿಳಿಸಿ -
ಲಕ್ಷ್ಯವನೆ ಎಂದೆಂದು ಮನದೊಳಗೆ ತಾ ಉಳಿಸಿ - ಉದ್ಯಮಿಸು ನೀ ಜೀವಿ ಎಂದು ಹರಸಿ!
ಮುಂಬರುವ ಜೀವನವ ಕುಗ್ಗದೆಯೆ ಎದುರಿಸು, ಕಷ್ಟಗಳ ಸರಮಾಲೆ ತೃಣದ ಸಾಲು
ಎಂದೆನುತ ಆಶಯವ ಭೂರಿ, ಜೀವದಿ ತುಂಬಿ ಕೈ ಬೀಸುತಾ ಇಳಿವ ನಮ್ಮ ಸೂರ್ಯ !
ಪ್ರತಿಕ್ರಿಯೆ (6)