೮೬. http://shantalasayimane.blogspot.com/ ವಿದೇಶಗಳ ಪ್ರವಾಸಕಥನ, ಅಮೇರಿಕದ ಜೀವನಶೈಲಿಯ ಕುರಿತಾದ ಬರಹ ತುಂಬ ಚೆನ್ನಾಗಿವೆ ನೀವು ಓದಲೇಬೇಕೆಂದು ನಾನು ಬಯಸುವ ಬ್ಲಾಗ್ . ****
೮೭. http://kaadinahaadi.blogspot.com/ ಕಂಪ್ಯೂಟರ್ ರಂಗದಲ್ಲಿನ ವೃತ್ತಿಯನ್ನು ಬಿಟ್ಟು ತಮ್ಮ ಆಸಕ್ತಿಯ ಕೃಷಿ ಮತ್ತು ಪರಿಸರ ಅಧ್ಯಯನವನ್ನು ಹವ್ಯಾಸ ಮತ್ತು ಪೂರಕ ಉದ್ಯೋಗವನ್ನಾಗಿಸಿಕೊಂಡು ನಾನಾ ದೇಶಗಳ ಕಾಡುಗಳಲ್ಲಿ ಸಂಚರಿಸುತ್ತ್ತಿರುವ ಬಾಲು ಸಾಯಿಮನೆ ಅವರ ಬ್ಲಾಗ್ . ಇಲ್ಲೂ ತುಂಬ ಒಳ್ಳೆಯ ಬರಹಗಳಿವೆ. *****
೮೮. http://kamaroopi.wordpress.com 'ಕುದುರೆಮೊಟ್ಟೆ','ಅಂಜಿಕಿನ್ಯಾತಕಯ್ಯಾ' ಕಾದಂಬರಿಗಳನ್ನೂ , 'ಒಂದು ತೊಲ ಪುನುಗು ಮತ್ತು ಇತರ ಕಥೆಗಳು' ಕಥಾ ಸಂಕಲನವನ್ನೂ ಬರೆದಿರುವ ಕಾಮರೂಪಿ' ಎಂಬ ಕಾವ್ಯನಾಮದಿಂದ ಹೆಸರಾದ ಎಂ ಎಸ್ ಪ್ರಭಾಕರ್ ಅವರಿಗೆ ೭೫ ನೆಯ ವಯಸ್ಸಿನಲ್ಲಿ ಈ ಬ್ಲಾಗಿನಲ್ಲಿ ಬರೆಯುತ್ತಿದ್ದಾರೆ. ಅವರ ಅನೇಕ ಅನುಭವಗಳೂ ಇಲ್ಲಿವೆ . ಸುಮಾರು ಐವತ್ತು ವರ್ಷ ಕಾಲ ಅವರು ಆಸ್ಸಾಂ ನಲ್ಲಿ ನೆಲಸಿದವರು . ಈಗ ಕರ್ನಾಟಕಕ್ಕೆ ಮರಳಿ ಬಂದಿದ್ದಾರೆ. ಬಾಲ್ಯದಲ್ಲಿ ಕೇಳಿದ ಒಂದು ಹಳ್ಳಿಯ ಕುರಿತಾದ ಕಥೆಯನ್ನು ಐವತ್ತು ವರ್ಷದ ನಂತರ ಸಾವಿರಾರು ಮೈಲು ದೂರದಲ್ಲಿ ಲೈಬ್ರರಿಯಲ್ಲಿ ಹಳೆಯ ಗೆಜೆಟಿಯರ್ ನಲ್ಲಿ ಖಚಿತಗೊಳಿಸಿಕೊಂಡು ಇತ್ತ ಬಂದಾಗ ಆ ಹಳ್ಳಿಯನ್ನು ಸ್ವತಃ ನೋಡಲು ಹೋದ ಅನುಭವದ ಕುರಿತೂ ಒಂದು ಬರಹ ಇಲ್ಲಿದೆ.
****
89 http://creativity-111.blogspot.com/ ಇಲ್ಲಿ ತೇಜಸ್ವಿ ಅವರ 'ಮಾಯೆಯ ಮುಖಗಳು' ಎಂಬ ಪುಸ್ತಕದಿಂದ ಕೆಲವು ಫೋಟೋಗಳು , ಮುದ್ದೇಬಿಹಾಳ ತಾಲೂಕಿನ ಬೊಮ್ಮನಹಳ್ಳಿ ಮತ್ತು ತಾಳಿಕೋಟೆಯ ಬಗೆಗ ಎರಡು ಚಿತ್ರಲೇಖನಗಳಿವೆ . ***
90 http://nammamaneoota.blogspot.com/ ಕೈರುಚಿ ಹೆಸರಿನ ಈ ಬ್ಲಾಗಿನಲ್ಲಿ ಅಡುಗೆಯ ರೆಸಿಪಿಗಳಿವೆ. ****
91 http://naadahabba.blogspot.com ಕರ್ನಾಟಕದಲ್ಲಿರುವ ನೂರಾರು ಕಂಪನಿಗಳಲ್ಲಿ ಕನ್ನಡದ ನಾಡ ಹಬ್ಬಗಳಾದ ರಾಜ್ಯೋತ್ಸವ, ಎಳ್ಳು ಹಬ್ಬ (ಸಂಕ್ರಾಂತಿ), ಯುಗಾದಿ ಇನ್ನೂ ಮುಂತಾದವನ್ನು ಆಚರಿಸುತ್ತಾ ಇದ್ದಾರೆ. ಆ ಎಲ್ಲಾ ಸುಂದರ ಕ್ಷಣಗಳನ್ನ, ಅಂತಹ ಎಲ್ಲ ಹಬ್ಬದ ಸವಿ ನೆನಪನ್ನ ಎಲ್ಲ ಕನ್ನಡ ಬಂಧುಗಳೊಂದಿಗೆ ಹಂಚಕೊಳ್ಳೊಕೆ ಇರೋ ಅವಕಾಶವೇ ಈ ಬ್ಲಾಗ್ . ಫೋಟೋಗಳು , ವರದಿಗಳು ಇವೆ . ನೀವೂ ನೋಡಿ, ನಿಮ್ಮಲ್ಲೂ ಈ ಹಬ್ಬಗಳು ನಡೆದಿದ್ದರೆ ಈ ಬ್ಲಾಗ್ ಮೂಲಕ ಹಂಚಿಕೊಳ್ಳಿ . ಇದೂ ಒಳ್ಳೆಯ ಬ್ಲಾಗ್ *****
92. http://balavana.wordpress.com/ ಮಕ್ಕಳಿಗಾಗಿ ಹಾಡು , ಕತೆ , ಆಟಗಳ್ನ್ನು ಹುಡುಕುತ್ತಿದ್ದರೆ ಈ ಬ್ಲಾಗ್ ನೋಡಿ . **** ( ಅಂದ ಹಾಗೆ http://kindarajogi.com/ ತಾಣ ನೋಡಿದ್ದೀರಾ ? "ಕಿಂದರಜೋಗಿ, ಮಕ್ಕಳಿಗಾಗಿ ತೆರೆದಿರುವ ಮುಕ್ತ ತಾಣ. ದಿನನಿತ್ಯದ ಕಲಿಕೆಯಿಂದ ಹಿಡಿದು, ತಾವೇ ತಾವಾಗಿ ಹೊಸತನ್ನೇನಾದರೂ ಮಾಡಬಲ್ಲೆವು ಎಂಬ ಶಕ್ತಿಯನ್ನು ಮಕ್ಕಳಲ್ಲಿ ತುಂಬುವ ಒಂದು ಸಣ್ಣ ಪ್ರಯತ್ನ. ಯಾವುದೇ ತಂಡ ರಚನೆಯಿಲ್ಲದೆ, ಮಕ್ಕಳೊಡನೆ ತನ್ನಲ್ಲಿರುವ ಕಲೆ, ಕಲಿಕೆ, ಜ್ಞಾನ ಇತ್ಯಾದಿಗಳನ್ನು ಹಂಚಿಕೊಳ್ಳುವ ಎಲ್ಲರಿಗೂ ಇದು ವೇದಿಕೆ. ನೀವೂ ನಮ್ಮೊಂದಿಗೆ ಕೈಜೋಡಿಸ್ತೀರಲ್ಲವೇ?" ಅಂತ ಸೈಟುಕರ್ತರು ಕೇಳುತ್ತಿದ್ದಾರೆ.
93. http://kiruberalu.blogspot.com ತುಂಬ ಒಳ್ಳೆಯ ಫೋಟೊಗಳಿವೆ. ನಿಮ್ಮ ಕಂಪ್ಯೂಟರ್ ಗೆ ಒಳ್ಳೆಯ ವಾಲ್-ಪೇಪರ್ ಗಳಾದಾವು. *****
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಪುಸ್ತಕನಿಧಿ : ಧರ್ಮಸಾಮ್ರಾಜ್ಯಮ್ ಅಥವಾ ಜಪಾನರುನ್ನತಿಗೆ ಮೂಲಾಧಾರ
ಪುಸ್ತಕನಿಧಿ : ತಾರೋತ್ಪತ್ತಿ ನಾಟಕ
ಪುಸ್ತಕನಿಧಿ : ಏಪ್ರಿಲ್ 1960ರ ಕಸ್ತೂರಿ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!