ನಿನಗೂ, ನನಗೂ ಮಾತ್ರ ಅರ್ಥವಾಗುವ
ಭಾಷೆಯಲ್ಲಿ ಮಾತನಾಡೋದು
ನಿನಗೂ, ನನಗು ಮಾತ್ರ ಅರ್ಥವಾಗುವ
ಸಡಗರ

ಕಳೆದ ದಿನದ ಅಸ್ತಮಯದನಂತರ
ಯಾವ ಗಿಡದಲ್ಲಿ ಯಾವ ಹೊಸ ಹುವ್ವು
ಹುಟ್ಟಿದೆಂದು ಹುಡುಕುವ ಸೂರ್ಯನಂತೆ
ನಿನ್ನ ಹೊಸ ಹೊಸ ಮಾತುಗಳಲ್ಲಿನ
ಗಾರುಡಿತನವನ್ನ ಹುಡಿಕಿಕೊಳ್ತೀನಿ

ಮೃದುವಾದ ನಿನ್ನ ಕೈಗಳಲ್ಲಿ
ನನ್ನ ಭವಿಷ್ಯ ಹುದುಗಿದೆ ಎಂದು
ನೆನಸಿಕೊಂಡರೆನೆ ಬಹು ಆಶ್ಚರ್ಯ!

ಕಾಣುವ ಪ್ರತಿ ಮುಖದಲ್ಲೂ ನೀನೆ

ವ್ಯಕ್ತಿ ದೂರವಾದಾಗ ಗುರುತಿನ
ಘಾಟು ಜಾಸ್ತೀ ಏನೋ!

ಆಗಲೀ
ದೂರಗಳಿರೋದೆ ಕರಗಿಹೊಗಿಲಿಕ್ಕೆ!

ಇರಬಹುದು!
ಆ ಬೀದಿಯ ತುದಿಯ ತಿರುವಿನಲ್ಲಿ
ನಿನ್ನ ನನ್ನ ಮಿಲನ!