ಮೆಷ್ತ್ರು- ಭೂಮಿಯಲ್ಲಿ ನೀರು ಇಲ್ಲದಿದ್ದರೆ ಏನಾಗುತ್ತಿತ್ತು?
ವಿಧ್ಯಾರ್ಥಿ- ನಮ್ಮಪ್ಪನ ವ್ಯಾಪಾರ ನಷ್ಠವಾಗುತ್ತಿತ್ತು.
ಮೆಷ್ತ್ರು- ಅಂದರೆ ನಿಮ್ಮಪ್ಪ ಏನು ವ್ಯಾಪಾರ ಮಾಡ್ತರೆ?
ವಿಧ್ಯಾರ್ಥಿ- "ಹಾಲಿನ ವ್ಯಾಪಾರ".
_______________________________________________________________________________________________
ಇಬ್ಬರು ಮಹಿಳೆಯರು ಬಸ್ಸಿನಲ್ಲಿ ಖಾಲಿ ಇದ್ದ ಒಂದೇ ಒಂದು ಸೀಟಿಗಾಗಿ ಜಗಳವಾಡುತ್ತಿದ್ದರು.
ಹಿಂದಿನ ಸೀಟಿನಲ್ಲಿ ಕುಳಿತಿದ್ದ ವೃದ್ದರೊಬ್ಬರು
"ನಿಮ್ಮಿಬ್ಬರಲ್ಲಿ ಯಾರಿಗೆ ಹೆಚ್ಚು ವಯಸ್ಸಾಗಿದೆಯೋ ಅವರು ಕುಳಿತುಕೊಳ್ಳಿ ಯಾಕೆ ಸುಮ್ಮನೆ ಜಗಳವಾಡುತ್ತೀರಾ?" ಎಂದರು,
ಇಬ್ಬರೂ ಮಹಿಳೆಯರು ಜಗಳವನ್ನು ನಿಲ್ಲಿಸಿ, ಒಬ್ಬರ ಮುಖವನ್ನು ಒಬ್ಬರು ನೋಡುತ್ತಾ ಸುಮ್ಮನೆ ನಿಂತುಬಿಟ್ಟರು.
ಖಾಲಿಯಾಗಿದ್ದ ಆ ಸೀಟು ಖಾಲಿಯಾಗಿಯೀ ಉಳಿಯಿತು.
_______________________________________________________________________________________________
ಹೆಂಡತಿಃ ಏನ್ರೀ, ಕಾರಣವಿಲ್ಲದೇ ಕುಡಿಯೊದಿಲ್ಲ ಅಂತ ಹೇಳಿದ್ರಿ, ಆಗ್ಲೇ ಕುಡಿತಾ ಕೂತಿದಿರಲ್ಲಾ, ಏನ್ ಕಾರಣ?
ಗಂಡಃ ಅದೇ ದೀಪಾವಳಿ ಹಬ್ಬ ಹತ್ರ ಬಂತಲ್ಲ, ಮಕ್ಕಳು ರಾಕೆಟ್ ಬಿಡೋಕೆ ಬಾಟಲ್ ಕೀಳ್ತರೆ, ಅದಕ್ಕೆ ಕುಡಿತಿದ್ದೀನಿ ಅಷ್ಠೆ....
_______________________________________________________________________________________________
ಪ್ರತಿಕ್ರಿಯೆ (2)