ಯಾವ ಬಣ್ಣಕ್ಕೂ ನೀ ನಿಲುಕಲಿಲ್ಲ
ಯಾವ ಸೀಮೆಗೂ ನೀ ನಿಲ್ಲಲಿಲ್ಲ
ಯಾವ ನೋವಿಗೂ ಅಳುಕಲಿಲ್ಲ
ಅವ್ೞ ನೀ ಆಕಾಶದೆದೆಯವಳು....
ಅವ್ೞ ನೀ ಭೂಮಿಯಗಲ ಮನದವಳು....
ಹರಿದ ರವಿಕೆ,ಬೆವರಲಿ ಕದಡಿದ ಕುಂಕುಮ
ಕೈ ಸುಕ್ಕುಗಳು,ಕಣ್ಣ ಸುತ್ತುಗಳು
ಬರಿದಾದ ಹಿಮ್ಮಡಿಯ ಸೀಳುಗಳು
ಲೆಕ್ಕಿಸದೆ ಜೋಕಾಲಿ ಹಾಡಿದವಳು...
ನನ್ನ ಅಳುವಿಗೆ ತಂಪು ನೀಡಿದವಳು...
ಪ್ರತಿಕ್ರಿಯೆ (2)