ಮಾತಿನ ವ್ಯಾಪಾರಿಗಳಿಗೆ ಇದು ಚೆನ್ನಾಗಿಗೊತ್ತು ಸಾಕಿ
ಮೀರಾಳನ್ನಾಗಿಸಿ ಶಿಲುಬೆಗೇರಿಸುವುದು ಸುಲಭ ಎಂದು ಸಾಕಿ.
ಎಲ್ಲವನ್ನೂ ಸೋತ ನನಗೆ ಉಳಿದಿರುವದೊಂದೇ ದಾರಿ
ನಡೆಯುತಿರುವೆ ಹಾಗೆ ಕಳೆದ ದಿನಗಳ ಹೆಜ್ಜೆ ಎಣಿಸುತ ಸಾಕಿ.
ಹಾಕಿದ ಚೌಕಟ್ಟಲ್ಲೇ ಹೊಂದಿಕೊಳುವದಸ್ತೇ ಗೊತ್ತು
ಅದರಾಚೆಯೂ ಬಾನಿದೆ ಎನ್ನುವದು ಬೇಕಿಲ್ಲ ಸಾಕಿ.
ಹಣತೆಗೆ ಉರಿಯುವುದು ಬಿಟ್ಟರೆ ಮತ್ತೇನು ಗೊತ್ತಿಲ್ಲ
ಇದೇಇರಬಹುದು ಚಂದಿರೆಯಲ್ಲೊಂದು ಮಚ್ಚೆ ಸಾಕಿ.
ಬಯಸುತ್ತಾರೆಲ್ಲರು ತಮ್ಮ ಮುಖ ಕಾಣುವ ಕನ್ನ್ಡಡಿಯ
ನೂರೊಂದು ಚೂರುಗಳ ಜೋಡಿಸಿ ಕನ್ನಡಿಯಾಗಿಸುವದು ಯಾರಿಗೂ ಬೇಕಿಲ್ಲ ಸಾಕಿ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!