ನಿನ್ನಲ್ಲಿಯೂ ಮಾತಿನ ತುಣುಕುಗಳು ಉಳಿದಿದ್ದಿದೆ ಸಾಕಿ
ಬಿಕ್ಕಳಿಕೆ ಹಿಡಿದ ಹ್ರುದಯಕ್ಕೀಗ ಅರಿವಾಗಿದೆ ಸಾಕಿ.
ನನ್ನೆಲ್ಲಾ ಗಾಯಗಳಿಗೆ ಸಾಂತ್ವನವೊಂದೇ ಬೇಕಾಗಿರುವುದು
ಬಿಸಿಲಲಿ ಬಳಲಿದ ಕ್ಷಣಗಳು ತಂಪಿನ ಕನಸೊಂದೆ ಕಂಡಿರುವದು ಸಾಕಿ.
ಹೊತ್ತಿ ಉರಿದ ಹೊಗೆಯಲ್ಲಿ ಅರಸುತ್ತಿರುವೆ ಅವಶೇಶಗಳ
ಅದರಲ್ಲೂ ದಕ್ಕಲಿಲ್ಲ ನಿನ್ನ ಸಂವೇದನೆಯ ಮಾತೊಂದೂ ಸಾಕಿ.
ರಾತ್ರಿ ಕ್ಷಣಗಳ ಎಣೆಸಿ ನನ್ನೆದೆಯ ಹಾಸಿ ಕೊಟ್ಟೆ
ಉಡಾಫೆಯಿಂದ ತರಗೆಲೆಯಂತೆ ತೂರಿಬಿಟ್ಟೆ ಗಾಳಿಗೆ ಸಾಕಿ.
ಬಲುಬೇಗ ನನ್ನ ನನಸುಗಳು ಕನಸಾಗುತ್ತವೆ
ನೆನೆ-ನೆನೆದು ನೀ ನಕ್ಕ ಅಲೆಗಳಲ್ಲೇ ಈಗ ಈಜಿ ದಡ ಸೇರಬೇಕಾಗಿದೆ ಸಾಕಿ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!