ವಿಮರ್ಶೆ
ಹೇಗೆ ನಗುತಿವೆ ನೋಡು
ನನ್ನಮೇಲಿನ ಹೂಗಳು
ನಿನ್ನ ಕಣ್ಣ ಹನಿಗಳ ಕುಡಿದು..!
ವರ
ಕನಸುಗಳ ಬಿತ್ತಿ,ಬೆಳೆದು
ಬೆಲೆ ಕಟ್ಟುವ ಬಡ ರೈತ..!!
ನಿದ್ದೆ
ನಿಸರ್ಗ ಹೆಣೆದ ವೇಳಾಪಟ್ಟಿಯಲಿ
ದಣಿದ ಜೀವಗಳಿಗೆ ನೀಡಿದ ಲೀಸರ್ ಪಿರಿಯಡ್..!!!
ಭಯೋತ್ಫಾದನೆ!
ಈ ಎರಡು ಕಾಲಿನವನಿಗೆ
ಎರಡು ಕಾಲಿನ ಮಿಕವೇ ಇಸ್ತ
ನಾಲ್ಕು ಕಾಲಿನ ಮ್ರುಗದ ಮಾಂಸ
ಈಗ ರುಚಿ ಕಳೆದುಕೊಂಡಿದೆ..!
ವಾಸ್ತವ
ತುಡಿತ-ತುಯ್ತ ಇಲ್ಲದ
ಹೆಬ್ಬಂಡೆಗೆ ನನ್ನ ಸುಂದರ
ಕನಸಲೆಗಳು ಬಡಿದು ವಾಪಾಸಾಗುತ್ತವೆ..!!
ಪ್ರತಿಕ್ರಿಯೆ (1)