ನಿನ್ನ ವಿಮುಖತೆಗೆ ಕಾರಣ ಹುಡುಕುತ್ತಿರುವೆ ಸಾಕಿ

        ಈ ರೀತಿ ಬದುಕಲು ನೆಪವೊಂದು ಹುಡುಕುತ್ತಿರುವೆ ಸಕಿ.

 

        ಆಗಸದೆದೆಯ ಚಿಕ್ಕೆಗಳ ವ್ಯಾಖ್ಯಾನಿಸಲಾಗಲಿಲ್ಲ

        ನನ್ನ ಗುಡಿಸಲಿಗೆ ಮಿಂಚುಹುಳುಗಳ ಹುಡುಕುತ್ತಿರುವೆ ಸಾಕಿ.

 

         ಕತ್ತಲಾಗಿದೆ ಬೆಳಕ ಮಾತಾಡುವುದು ಬೇಡ

         ಈ ಮೂಲಕ ಮಾತುಗಳನ್ನು ಮೂಸೆಯಲ್ಲಿ ಅದ್ದಿ ಹುಡುಕುತ್ತಿರುವೆ ಸಾಕಿ.

 

                 ಬಣ್ಣತೊಟ್ಟ ಆಕ್ಷಣಗಳು ಕಣ್ಣೆದುರಿಗಿವೆ  

      ಸಿಪ್ಪೆ ತೆಗೆದು  ಹ್ರುದಯದ    ಮಿಡಿತದ     ಕ್ಷ ಣಗಳ ಹುಡುಕುತ್ತಿರುವೆ ಸಾಕಿ.

 

           ಹೊತ್ತೇರಿದಂತೆ ಮುಖದಲ್ಲೀಗ ಪ್ರಶ್ನೆಗಳ ಸುಕ್ಕುಗಳು

            ಮೂರು ಗಂಟುಗಳ  ಮಿತಿಯಲ್ಲಿ  ಉತ್ತರ ಹುಡುಕುತ್ತಿರುವೆ  ಸಾಕಿ.